ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಧವಾರ ನಡೆದ ಧಾರ್ಮಿಕ ಮೆರವಣಿಗೆ ವೇಳೆ ಮೂವರು ಮುಸ್ಲಿಂ ಯುವಕರು ನೀರು ಉಗುಳಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆ ಬಳಿಕ ಸರ್ಕಾರ ಆ ಯುವಕರ ಮನೆಗಳನ್ನು ನೆಲಸಮಗೊಳಿಸಿದೆ. ಆ ಮನೆಗಳು ಅಕ್ರಮ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಮನೆಗಳನ್ನು ಧ್ವಂಸ ಮಾಡುವ ಸಮಯದಲ್ಲಿ ಅಧಿಕಾರಿಗಳು ಡ್ರಮ್ ಬಾರಿಸುವವರನ್ನು ಸಹ ಕರೆದುಕೊಂಡು ಹೋಗಿದ್ದರು.
ಬಾಬಾ ಮಹಾಕಾಲ್ ಸವಾರಿ ಎಂಬ ಹಿಂದೂ ಧಾರ್ಮಿಕ ಮೆರವಣಿಗೆ ವೇಳೆ ನೀರು ಉಗುಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಮೂರನೇ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Location: Ujjain, Madhya Pradesh
Amid drum beats and police presence, local authorities demolished the home of three Muslim brothers for allegedly spitting on a religious procession of the majority community. pic.twitter.com/e9AnXuWpdf
— HindutvaWatch (@HindutvaWatchIn) July 20, 2023
ಆರೋಪಿಗಳ ಬಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಕಂದಾಯ ಇಲಾಖೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಭುರಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆ ನಂತರ ಅತಿಕ್ರಮಣ ಮಾಡಿ ಮನೆ ಕಟ್ಟಿರುವುದರಿಂದ ಆ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮನೆ ನೆಲಸಮಗೊಳಿಸುವ ವೇಳೆ ಡ್ರಮ್ ಭಾರಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಭುರಿಯಾ ಅವರು, ”ಅಕ್ರಮ ಮನೆ ನೆಲಸಮಗೊಳಿಸುವ ವೇಳೆ ಡ್ರಮ್ಮರ್‌ಗಳನ್ನು ಕರೆತರುವುದು ಮತ್ತು ಸಾರ್ವಜನಿಕವಾಗಿ ಘೋಷಿಸುವುದು ನಿಯಮದಲ್ಲಿದೆ. ನಾವು ಈ ನಿಯಮಗಳನ್ನು ಅನುಸರಿಸಿದ್ದೇವೆ” ಎಂದು ಹೇಳಿದ್ದಾರೆ.
ಅಪರಾಧ ಮಾಡಿರುವ ಆರೋಪಿಗಳ ಮನೆಯನ್ನು ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲ. ಆದಾಗ್ಯೂ, ಈ ಅಭ್ಯಾಸವನ್ನು ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿಟ್ಟಿದೆ.
ಇದನ್ನೂ ಓದಿ: ಗ್ವಾಲಿಯರ್: ತನ್ನ ಪಾದ ನೆಕ್ಕುವಂತೆ ಮುಸ್ಲಿಂ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿದ ಹಿಂದುತ್ವ ಮುಖಂಡ; ವೀಡಿಯೊ ವೈರಲ್


