Homeಕರ್ನಾಟಕಶಿವಮೊಗ್ಗ: 'ಲೋಹಿಯಾ ನೆನಪಿನ ಕಾರ್ಯಕ್ರಮ ಮತ್ತು ಲೋಹಿಯಾ ಓದು' ಕಾರ್ಯಕ್ರಮ

ಶಿವಮೊಗ್ಗ: ‘ಲೋಹಿಯಾ ನೆನಪಿನ ಕಾರ್ಯಕ್ರಮ ಮತ್ತು ಲೋಹಿಯಾ ಓದು’ ಕಾರ್ಯಕ್ರಮ

- Advertisement -
- Advertisement -

ಸಾಗರ ಸಮೀಪದ ಹೆಗ್ಗೋಡಿನ ನೀನಾಸಮ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆ, ಶಿವಮೊಗ್ಗ ಇವರ ಸಹಯೋಗದಿಂದ ಪುರಪ್ಪೆಮನೆಯ ಥಿಯೇಟರ್ ಸಮುರಾಯ್ ಸಂಸ್ಥೆಯು ಏಪ್ರೀಲ್ 3ರಂದು, ‘ಲೋಹಿಯಾ ನೆನಪಿನ ಕಾರ್ಯಕ್ರಮ ಮತ್ತು ಲೋಹಿಯಾ ಓದು’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ  ಲೋಹಿಯಾ ಅವರ ಚಿಂತನೆಗಳನ್ನು ಮೆಲುಕುಹಾಕಲಾಯಿತು.

”ಕೆಲವು ಸಮುದಾಯಗಳನ್ನು ದೇಶಭಕ್ತಿ ಹೆಸರಿನಲ್ಲಿ ಅಂಚೆಗೆ ತಳ್ಳುವ ಭಯೋತ್ಪಾದಕ ನೆರೆಯ ಏಕರೂಪಿ ರಾಷ್ಟ್ರವಾದವನ್ನು ಎದುರಿಸಲು ಬೇಕಾದ ಪರ್ಯಾಯ ಚಿಂತನೆಯ ಹೊಳಪು ಲೋಹಿಯಾ ಅವರ ವಿಚಾರಧಾರೆಯಲ್ಲಿ ಅಡಗಿದೆ.”

”ಲೋಹಿಯಾ ಅವರ ಚಿಂತನೆಯ ಎಳೆಗಳಲ್ಲಿ ಪ್ರಮುಖ ಅಂಶವಾಗಿರುವ ಪ್ರಜಾತಂತ್ರ ಎನ್ನುವುದು ವಿಚಾರಶೀಲವಾದ ಜೀವನ ಬದ್ದತೆ ಮತ್ತು ಅದಕ್ಕೆ ಅನುಗುಣವಾದ ರಾಜಕೀಯ ಸೂತ್ರಗಳಾಗಿವೆ. ಪ್ರಜಾತಂತ್ರವನ್ನು ಅವರು ‘ವಿಚಾರಶೀಲ ಮತ್ತು’ ಭಾಗವಹಿಸುವಿಕೆ ಎಂಬ ವಿಶಾಲ ನೆಲಗಟ್ಟಿನ ಆಧಾರದ ಮೇಲೆ ನೋಡಿದ್ದಾರೆ.”

ಉಮೇಶ ಸಾಲಿಯಾನ್ ಅವರು ‘ಲೋಹಿಯಾ ಕಂಡ ಗಾಂಧೀಜಿ’, ರಾಘವೇಂದ್ರ ಅವರು ‘ರಾಜಕೀಯದ ಮಧ್ಯ ಬಿಡುವು’ ಮತ್ತು ರಂಜಿತಾ ಅವರು ‘ಕಿರು ಕೈ ದೀವಿಗೆ’ ಪುಸ್ತಕದ ಮುಖ್ಯವಾದ ಬರಹಗಳನ್ನು ಓದುವುದು ಮತ್ತು ಚರ್ಚೆ ಕೂಡಾ ನಡೆಯಿತು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರಾದ ಚಂಡೆ ನಾಗರಾಜ, ರಂಗ ನಿರ್ದೇಶಕರಾದ ಮಜು ಕೊಡಗು ಮತ್ತು ರಂಜಿತಾ ಜಾಧವ ಉಪಸ್ಥಿತರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...