ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ದೇಶದ ಅತಿ ದೊಡ್ಡ ಮೋಸದ ಸಂಸ್ಥೆಯಾಗಿದ್ದು, ಗೋಶಾಲೆಯಿಂದ ಗೋವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿರುದ್ಧ ಶುಕ್ರವಾರ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, ”ಆಂಧ್ರಪ್ರದೇಶದ ಅನಂತಪುರ ನಗರದಲ್ಲಿ ಇಸ್ಕಾನ್‌ನ ಗೋಶಾಲೆಗೆ ಭೇಟಿ ನೀಡಿದ್ದಾಗಿ ಹೇಳುತ್ತಾರೆ. ಆಗ ಇಸ್ಕಾನ್ ಎನ್ನುವುದು ಭಾರತದ ಅತಿ ದೊಡ್ಡ ಮೋಸದ ಸಂಸ್ಥೆ ಎಂದು ಹೇಳಿದರು.
”ಇಡೀ ಡೈರಿಯಲ್ಲಿ ಒಂದೇ ಒಂದು ಗೊಡ್ಡು ಹಸು ಇರಲಿಲ್ಲ, ಒಂದು ಕರುವೂ ಇರಲಿಲ್ಲ. ಇದರರ್ಥ ಎಲ್ಲವನ್ನೂ ಮಾರಾಟ ಮಾಡಲಾಗಿದೆ” ಎಂದು ಹೇಳಿದರು. (ಗೊಡ್ಡು ಹಸು ಎಂದರೆ ಸ್ವಲ್ಪ ಸಮಯದಿಂದ ಹಾಲು ನೀಡದಿರುವುದು.)
Here's what BJP MP Maneka Gandhi has to say on #ISKCON and Cow Slaughter. pic.twitter.com/MIC277YByF
— Mohammed Zubair (@zoo_bear) September 26, 2023
ಮಾಜಿ ಕೇಂದ್ರ ಸಚಿವ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತಯಾಗಿರುವ ಮನೇಕಾ ಗಾಂಧಿ, ”ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸಿ ಸರ್ಕಾರದಿಂದ ”ಅನಿಯಮಿತ ಪ್ರಯೋಜನಗಳನ್ನು” ಪಡೆಯುತ್ತಿದೆ ಎಂದು ಆರೋಪಿಸಿದರು.
”ಅವರು(ಇಸ್ಕಾನ್) ರಸ್ತೆಗಳಲ್ಲಿ ‘ಹರೇ ರಾಮ್ ಹರೇ ಕೃಷ್ಣ’ ಎಂದು ಹಾಡುತ್ತಾರೆ ಮತ್ತು ಅವರ ಸಂಪೂರ್ಣ ಜೀವನವು ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ. ಬಹುಶಃ, ಅವರಷ್ಟು ಜಾನುವಾರುಗಳನ್ನು ಯಾರೂ ಕಟುಕರಿಗೆ ಯಾರೂ ಮಾರಾಟ ಮಾಡಿರಲಿಕ್ಕಿಲ್ಲ” ಎಂದು ಹೇಳಿದರು.
ಈ ಬಗ್ಗೆ ಶುಕ್ರವಾರದ ಪ್ರತಿಕ್ರಿಯಿಸಿದ ಇಸ್ಕಾನ್, ”ಅವರ ಆರೋಪಗಳು ದುರುದ್ದೇಶಪೂರಿತ, ಸುಳ್ಳು ಮತ್ತು ಮಾನನಷ್ಟವಾಗಿವೆ” ಎಂದು ಹೇಳಿದೆ.
ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷರಾದ ರಾಧರಮ್ ದಾಸ್ ಅವರು, ”ಸುಳ್ಳು ಹೇಳಿ ಅಪಪ್ರಚಾರ ಮಾಡಿದ್ದಾರೆ. ಅವರ ಟೀಕೆಗಳನ್ನು ಹಿಂಪಡೆಯಬೇಕು ಮತ್ತು ಬೇಷರತ್ತಾದ ಕ್ಷಮೆಯಾಚಿಸಬೇಕು, ಅದನ್ನು ಎಲ್ಲಾ ಪ್ರಮುಖ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸಬೇಕು” ಎಂದು ಒತ್ತಾಯಿಸಿದರು.
”ನಿಮ್ಮ ಸುಳ್ಳು ಹೇಳಿಕೆಗಳು ಮತ್ತು ಆರೋಪಗಳು ನನ್ನ ಕ್ಲೈಂಟ್‌ನ ಪ್ರತಿಷ್ಠೆಗೆ ತೀವ್ರ ಹಾನಿಯನ್ನುಂಟುಮಾಡಿದೆ. ನಿಮ್ಮ ಹೇಳಿಕೆಗಳು ಪ್ರಚೋದನಾತ್ಮಕವಾಗಿವೆ, ಸಂಸ್ಥೆಯ ಅನುಯಾಯಿಗಳನ್ನು ದಾರಿ ತಪ್ಪಿಸುವಂತಿವೆ” ಎಂದು ಎಂದು ಮಾನನಷ್ಟ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ‘ಇಸ್ಕಾನ್’ ಅತಿ ದೊಡ್ಡ ಮೋಸದ ಸಂಸ್ಥೆ, ಹಸುಗಳನ್ನು ಕಟುಕರಿಗೆ ಮಾರಿದೆ: ಬಿಜೆಪಿ ಸಂಸದೆ ಮನೇಕಾ ಗಾಂಧಿ


