ಮಿಜೋರಾಂನಲ್ಲಿ ಬುಡಕಟ್ಟು ಜನಾಂಗದವರ ಅಮೂಲ್ಯ ಭೂಮಿಯನ್ನು ಕಸಿದುಕೊಳ್ಳಲು ಬಿಜೆಪಿ-ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ. ಬಿಜೆಪಿಯ “ಅನಧಿಕೃತ ಏಜೆಂಟ್” ಗಳಾಗಿ MNF ಮತ್ತು ZPM ನಂತಹ ಪ್ರಾದೇಶಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು.
ಮಿಜೋರಾಂನಲ್ಲಿ ನವೆಂಬರ್ 7ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ X ನಲ್ಲಿ ಪೋಸ್ಟ್ ಮಾಡಿದ ಅವರು, ಮಿಜೋರಾಂನ ಜನರು ಶಾಂತಿ ಮತ್ತು ಪ್ರಗತಿ ಬಯಸುತ್ತಾರೆ ಎಂದು ಹೇಳಿದರು.
Shri Rajiv Gandhi brought peace to Mizoram through the Peace Accord in 1986 and secured the statehood in 1987.
Congress party has always been committed to its progress.
BJP-RSS are against diversity, and they want to take away the precious land and forest that are the property… pic.twitter.com/xDX9QVTc0F
— Mallikarjun Kharge (@kharge) November 2, 2023
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1986 ರಲ್ಲಿ ಶಾಂತಿ ಒಪ್ಪಂದದ ಮೂಲಕ ಮಿಜೋರಾಂನಲ್ಲಿ ಶಾಂತಿ ಸ್ಥಾಪಿಸಿದರು. 1987 ರಲ್ಲಿ ರಾಜ್ಯದ ಸ್ಥಾನಮಾನ ನೀಡಲಾಯಿತು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಮಿಜೋರಾಂನ ಪ್ರಗತಿಗೆ ಸದಾ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
”ಬಿಜೆಪಿ-ಆರ್‌ಎಸ್‌ಎಸ್ ವೈವಿಧ್ಯತೆಗೆ ವಿರುದ್ಧವಾಗಿದೆ ಮತ್ತು ಅವರು ತಮ್ಮ ಬಂಧುಗಳ ಕಲ್ಯಾಣಕ್ಕಾಗಿ ಆದಿವಾಸಿಗಳ ಆಸ್ತಿಯಾಗಿರುವ ಅಮೂಲ್ಯ ಭೂಮಿ ಮತ್ತು ಅರಣ್ಯವನ್ನು ಕಸಿದುಕೊಳ್ಳಲು ಬಯಸುತ್ತಾರೆ” ಎಂದು ಅವರು ಆರೋಪಿಸಿದರು.
”MNF ಮತ್ತು ZPM ಬಿಜೆಪಿಯ ಅನಧಿಕೃತ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮಿಜೋರಾಂನ ಜನರು ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಬಯಸುತ್ತಾರೆ” ಎಂದು ಖರ್ಗೆ ಹೇಳಿದರು.
”ಮಿಜೋರಾಂ ರಾಜ್ಯದಲ್ಲಿ ಕಲ್ಯಾಣ, ಒಳಗೊಳ್ಳುವಿಕೆ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
ಖರ್ಗೆ ಅವರು “ಕನ್ ರಾಮ್, ಕನ್ ಹ್ನಾಮ್, ಕನ್ ಸಖವ್ ಹಿಮ್ ನಾನ್ ಮಿಜೋರಾಂ ತನ್ ಕಾಂಗ್ರೆಸ್” ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅಂದರೆ ಅದು “ನಮ್ಮ ದೇಶ, ನಮ್ಮ ರಾಷ್ಟ್ರ, ನಮ್ಮ ಧರ್ಮದ ಸಲುವಾಗಿ, ಮಿಜೋರಾಂಗಾಗಿ ಕಾಂಗ್ರೆಸ್” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಸಮನ್ಸ್ ಹಿಂಪಡೆಯುವಂತೆ EDಗೆ ಕೇಜ್ರಿವಾಲ್ ಪತ್ರ


