ಲೋಕಸಭೆ ಸ್ಪೀಕರ್ ಮತ್ತು ಕೋಟಾ ಸಂಸದ ಓಂ ಬಿರ್ಲಾ ಅವರು ಬಿಜೆಪಿ ಪರ ರಹಸ್ಯವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅವರು ನಿಷ್ಪಕ್ಷಪಾತವಾಗಿ ವರ್ತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ತಮ್ಮ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಗ್ಯಾರೆಂಟಿಗಳನ್ನು ಉಲ್ಲೇಖಿಸುತ್ತಾ, ಅಭಿವೃದ್ಧಿಯನ್ನು ಮುಂದುವರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಮಂಗಳವಾರ ಕೋಟಾ ಉತ್ತರದಲ್ಲಿ ಪಕ್ಷದ ಅಭ್ಯರ್ಥಿ ಶಾಂತಿ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ಮಾತನಾಡಿದರು.
”ಇಲ್ಲಿನ ಸಂಸದರು ಈಗ ತಮ್ಮ ಪಕ್ಷದ ಪರವಾಗಿ ರಹಸ್ಯವಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಉದ್ಯಾನಗಳಲ್ಲಿ ಸಂಚರಿಸುತ್ತಾ ಜನರನ್ನು ಪ್ರಚೋದಿಸುತ್ತಿದ್ದಾರೆ. ಅವರನ್ನು ( ಅಭ್ಯರ್ಥಿಗಳನ್ನು) ತಮ್ಮ ನಿವಾಸಕ್ಕೆ ಕರೆಸುತ್ತಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಥರ್ಮಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಆರೋಪಿಸಿದರು.
”ಅವರು ಉನ್ನತ (ಸಾಂವಿಧಾನಿಕ) ಹುದ್ದೆಯಲ್ಲಿದ್ದಾರೆ ಮತ್ತು ಲೋಕಸಭಾ ಸ್ಪೀಕರ್ ಆಗಿದ್ದಾರೆ, ಅವರು ರಾಜಕೀಯದಲ್ಲಿ ಏಕೆ ತೊಡಗಿಸಿಕೊಳ್ಳಬೇಕು?” ಎಂದು ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ.
”ಸಂಸತ್ ಚುನಾವಣೆಯ ಸಂದರ್ಭದಲ್ಲಿ, ಅವರು ತಮ್ಮ ಪಾತ್ರವನ್ನು ಬಹಿರಂಗಪಡಿಸಬೇಕು ಮತ್ತು ಅವರು ಬಿಜೆಪಿಯ ವ್ಯಕ್ತಿ ಎಂದು ಜನರಿಗೆ ತಿಳಿಸಬೇಕು, ಆದರೆ ಪ್ರಸ್ತುತ ಅವರು ಲೋಕಸಭಾ ಸ್ಪೀಕರ್ ಆಗಿರುವುದರಿಂದ ಅವರು ನಿಷ್ಪಕ್ಷಪಾತವಾಗಿರಬೇಕು” ಎಂದು ಅಶೋಕ್ ಗೆಹ್ಲೋಟ್ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಕುರಿತು ಟೀಕೆ: ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್‌ಗೆ ಚುನಾವಣಾ ಸಮಿತಿ ನೋಟಿಸ್


