ವಿಧಾನಮಂಡಲದ ಅಧಿವೇಶನದಲ್ಲಿ ಮುನ್ನೆಲೆಗೆ ಬಂದಿರುವ ರಾಜ್ಯ ಬಿಜೆಪಿ ನಾಯಕರ ಆಂತರಿಕ ತಿಕ್ಕಾಟದ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವ್ಯಂಗ್ಯವಾಡಿದೆ.
ವಿಧಾನಸಭೆ ಕಲಾಪದ ವೇಳೆ ಸಭಾತ್ಯಾಗ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ಆಕ್ರೋಶ ವ್ಯಕ್ತಡಿಸಿದ್ದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ “ಬಕೆಟ್ ಬಕೆಟ್” ಎಂದು ಕೂಗಾಡಿದ್ದರು. “ಇಂತವರನ್ನು ನಾಯಕರನ್ನಾಗಿ ಮಾಡಿದರೆ ಪಕ್ಷ ಮುಳುಗದೆ ಇನ್ನೇನಾಗುತ್ತೆ? ಬಕೆಟ್ ಹಿಡಿದುಕೊಂಡೆ ರಾಜಕಾರಣ ಮಾಡುವವರು ಇನ್ನೇನು ಮಾಡುತ್ತಾರೆ?” ಎಂದು ಅಸಮಾಧಾನ ಹೊರ ಹಾಕಿದ್ದರು.
ಈ ಕುರಿತ ಪತ್ರಿಕಾ ವರದಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು. ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್ ಜನತಾ ಪಾರ್ಟಿ, ಬ್ಲೂ ಬಾಯ್ಸ್ ಜನತಾ ಪಾರ್ಟಿ, ಈಗ ಹೊಸದಾಗಿ ಬಕೆಟ್ ಜನತಾ ಪಾರ್ಟಿ” ಎಂದಿದೆ. “ಆರ್. ಅಶೋಕ್ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರಾಂಡ್ ಬಕೆಟ್ ಹಿಡಿದಿರಿ? ಯಾರಿಗೆ ಬಕೆಟ್ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿರಿ?” ಎಂದು ಪ್ರಶ್ನಿಸಿದೆ.
ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು!
🔹ಭ್ರಷ್ಟ ಜನತಾ ಪಾರ್ಟಿ
🔹ಬ್ಲಾಕ್ಮೇಲ್ ಜನತಾ ಪಾರ್ಟಿ
🔹ಬ್ಲೂ ಬಾಯ್ಸ್ ಜನತಾ ಪಾರ್ಟಿ
ಈಗ ಹೊಸದಾಗಿ
🔹ಬಕೆಟ್ ಜನತಾ ಪಾರ್ಟಿ!@RAshokaBJP ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರಾಂಡ್ ಬಕೆಟ್ ಹಿಡಿದಿರಿ?
ಯಾರಿಗೆ ಬಕೆಟ್… pic.twitter.com/4UkDEnqSjL— Karnataka Congress (@INCKarnataka) December 9, 2023
ಮತ್ತೊಂದು ಪೋಸ್ಟ್‌ನಲ್ಲಿ ವಿಪಕ್ಷ ನಾಯಕರ ಆರ್.ಅಶೋಕ್ ಅವರ ಫೋಟೋದೊಂದಿಗೆ “ಬಕೆಟ್ ಬಕೆಟ್ ಬಕೆಟ್. ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು”- ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್. ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು -B ಬಕೆಟ್ Jಜನತಾ Pಪಾರ್ಟಿ” ಎಂದು ವ್ಯಂಗ್ಯವಾಡಿದೆ.
ಬಕೆಟ್ ಬಕೆಟ್ ಬಕೆಟ್….
"ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು"
– ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್!ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು –
B ಬಕೆಟ್ Jಜನತಾ Pಪಾರ್ಟಿ! pic.twitter.com/2Uyf1YBWw5— Karnataka Congress (@INCKarnataka) December 9, 2023
ಡಿಸೆಂಬರ್ 4ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಕಲಾಪದ ನಡುವೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಕೆಲ ಶಾಸಕರು ಸಭಾತ್ಯಾಗ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರ ಶಾಸಕರು ಸದನದಲ್ಲೇ ಕುಳಿತು ಸಭಾತ್ಯಾಗಕ್ಕೆ ನಿರಾಕರಿಸಿದ್ದಾರೆ.
ಇದನ್ನೂ ಓದಿ : ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿದೆ: ಮುಖ್ಯಮಂತ್ರಿ ಚಂದ್ರು


