Homeಮನರಂಜನೆದುರ್ಗಾದೇವಿಗಾಗಿ ನೃತ್ಯ ಮಾಡಿದ ಟಿಎಂಸಿ ಸಂಸದರು.. ವೈರಲ್ ಆದ ನಟಿಯರ ನೃತ್ಯದ ವಿಡಿಯೋ..

ದುರ್ಗಾದೇವಿಗಾಗಿ ನೃತ್ಯ ಮಾಡಿದ ಟಿಎಂಸಿ ಸಂಸದರು.. ವೈರಲ್ ಆದ ನಟಿಯರ ನೃತ್ಯದ ವಿಡಿಯೋ..

- Advertisement -
- Advertisement -

ಮುಂದಿನ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆಯ ಅಂಗವಾಗಿ ಸಂಸದರಾಗಿ ಆಯ್ಕೆಯಾದ ಬಂಗಾಳದ ಪ್ರಸಿದ್ದ ಚಿತ್ರನಟಿಯರಾದ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿಯವರು ದುರ್ಗಾ ದೇವಿಗೆ ಗೌರವವಾಗಿ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಅಕ್ಟೋಬರ್ 4 ರಿಂದ ಅಕ್ಟೋಬರ್ 8 ರವರೆಗೆ ಬಂಗಾಳದಾದ್ಯಂತ ಈ ಹಬ್ಬವನ್ನು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದ್ದು ಇದಕ್ಕೆ ಮುನ್ನ ಭರ್ಜರಿ ತಯಾರಿ ನಡೆದಿದೆ.
ಕ್ಯಾಪ್ಟನ್ ಟಿಎಂಟಿ ಬಿಡುಗಡೆ ಮಾಡಿದ ಈ ವಿಡಿಯೋದಲ್ಲಿ “ಮಾ ದುರ್ಗಾ ಮತ್ತು ಅವಳ ಆಂತರಿಕ ಶಕ್ತಿಗೆ ಗೌರವ”. (‘ಆಶೆ ಮಾ ದುರ್ಗಾ ಶೇ’) ಹಾಡಿಗೆ ನೃತ್ಯ ಮಾಡುತ್ತಿರುವ ಇಬ್ಬರು ನಟಿ-ರಾಜಕಾರಣಿಗಳ ಜೊತೆಗೆ ಬಂಗಾಳಿ ಚಲನಚಿತ್ರ ನಟಿ ಸುಭಾಶ್ರೀ ಗಂಗೂಲಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋವು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು ಆಗಲೇ ಐದು ದಿನಗಳಲ್ಲಿ 20ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಜೊತೆಗೆ ಹತ್ತು ಸಾವಿರ ಮಂದಿ ಅದನ್ನು ಷೇರ್ ಮಾಡಿದ್ದಾರೆ.

ಇಂದ್ರಾದಿಪ್ ದಾಸ್ ಗುಪ್ತಾ ಸಂಯೋಜನೆ ಮತ್ತು ಬಾಬಾ ಯಾದವ್ ನೃತ್ಯ ಸಂಯೋಜನೆ ಮಾಡಿದ ‘ಆಶೆ ಮಾ ದುರ್ಗಾ ಶೇ’ ವಿಡಿಯೋವು ಬಾಂಗ್ಲಾದೇಶದ ಗಾಯಕರನ್ನು ಸಹ ಒಳಗೊಂಡಿದೆ.

ತೃಣಮೂಲ ಕಾಂಗ್ರೆಸ್ ಸಂಸದ ನುಸ್ರತ್ ಜಹಾನ್ ಪಶ್ಚಿಮ ಬಂಗಾಳದ ಬಸಿರ್ಹತ್ ಸ್ಥಾನದಿಂದ ಗೆದ್ದರೆ, ಅವರ ಪಕ್ಷದ ಸಹೋದ್ಯೋಗಿ ಮಿಮಿ ಚಕ್ರವರ್ತಿ ಜಾದವ್ ಪುರದಿಂದ ಸಂಸದರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...