Homeಮುಖಪುಟಶಿವಸೇನೆ V/S ಶಿವಸೇನೆ: ತೀರ್ಪು ಸ್ವೀಕಾರಾರ್ಹವಲ್ಲ, ಕಿಡಿಕಾರಿದ ಉದ್ಧವ್ ಬಣ

ಶಿವಸೇನೆ V/S ಶಿವಸೇನೆ: ತೀರ್ಪು ಸ್ವೀಕಾರಾರ್ಹವಲ್ಲ, ಕಿಡಿಕಾರಿದ ಉದ್ಧವ್ ಬಣ

- Advertisement -
- Advertisement -

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ತೀರ್ಪಿನ ಬಗ್ಗೆ ಶಿವಸೇನಾ (ಯುಬಿಟಿ) ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ‘ಈ ತೀರ್ಪು ನಮಗೆ ಅನಿರೀಕ್ಷಿತವಲ್ಲ’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ. ಆದರೆ, ಪಕ್ಷವು ಸುಪ್ರೀಂ ಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸುತ್ತದೆ ಎಂದು ಹೇಳಿದರು.

ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಉಭಯ ಬಣಗಳ ಅಡ್ಡ ಅರ್ಜಿಗಳ ಕುರಿತು ನಾರ್ವೇಕರ್ ಬುಧವಾರ ತೀರ್ಪು ನೀಡಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎಂದು ಹೇಳಿದ್ದು, ಉದ್ಧವ್ ಠಾಕ್ರೆ (ಯುಬಿಟಿ) ಬಣ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.

‘ಈ ತೀರ್ಪು ಸ್ವೀಕಾರಾರ್ಹವಲ್ಲ ಮತ್ತು ಪಕ್ಷವು ಸುಪ್ರೀಂ ಕೋರ್ಟಿನಲ್ಲಿ ಅದನ್ನು ಪ್ರಶ್ನಿಸುತ್ತದೆ’ ಎಂದು ಠಾಕ್ರೆ ಹೇಳಿದರು.

‘ನನಗೇನೂ ಆಶ್ಚರ್ಯವಿಲ್ಲ. ನಾವು ‘ವಹೀ ಹೋತಾ ಹೈ ಜೋ ಮಂಜೂರ್-ಎ-ಖುದಾ ಹೋತಾ ಹೈ’ ಎಂದು ಕೇಳಿದ್ದೇವೆ ಮತ್ತು 2014ರ ನಂತರ ಹೊಸ ಸಂಪ್ರದಾಯವು ಪ್ರಾರಂಭವಾಗಿದೆ, ‘ವಹೀ ಹೋತಾ ಹೈ ಜೋ ಮಂಜೂರ್-ಇ-ನರೇಂದ್ರ ಮೋದಿ ಔರ್ ಅಮಿತ್ ಶಾ ಹೋತಾ ಹೈ’ ಎಂದು ಲೇವಡಿ ಮಾಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಇದು ನೈತಿಕತೆ ಜೊತೆಗಿನ ದುರದೃಷ್ಟಕರ ರಾಜಿಯಾಗಿದೆ. ಸುಪ್ರೀಂ ಕೋರ್ಟಿನಿಂದ ‘ಕಾನೂನುಬಾಹಿರ’ ಮತ್ತು ‘ಅಸಂವಿಧಾನಿಕ’ ಎಂದು ಕರೆಯಲಾದ ಯಾವುದನ್ನಾದರೂ ‘ಕಾನೂನನ್ನಾಗಿ’ ಆಗಿ ಪರಿವರ್ತಿಸಲಾಗುತ್ತಿದೆ. ಇದು ದುರದೃಷ್ಟಕರ’ ಎಂದು ಅವರು ಹೇಳಿದರು.

ಶಿವಸೇನೆ (ಯುಬಿಟಿ ಬಣ) ನಾಯಕ ಸಂಜಯ್ ರಾವುತ್ ಅವರು ಈ ತೀರ್ಪನ್ನು ಪಕ್ಷವನ್ನು ಮುಗಿಸಲು ಬಿಜೆಪಿಯ ಪಿತೂರಿ ಎಂದು ಆರೋಪಿಸಿದ್ದಾರೆ.

‘ಇದು ಬಿಜೆಪಿಯ ಪಿತೂರಿಯಾಗಿದೆ; ಮುಂದೊಂದು ದಿನ ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಮುಗಿಸುತ್ತೇವೆ ಎಂಬುದು ಅವರ ಕನಸಾಗಿತ್ತು. ಆದರೆ ಈ ಒಂದು ನಿರ್ಧಾರದಿಂದ ಶಿವಸೇನೆ ಮುಗಿಸಲು ಸಾಧ್ಯವಿಲ್ಲ…ನಾವು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ’ ಎಂದು ಅವರು ಹೇಳಿದರು.

ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ‘ಠಾಕ್ರೆ ಅವರು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ’ ಎಂದು ಹೇಳಿದರು.

‘ಈ ನಿರ್ಧಾರದ ನಂತರ, ಉದ್ಧವ್ ಸುಪ್ರೀಂ ಕೋರ್ಟಿಗೆ ಹೋಗಬೇಕಾಗುತ್ತದೆ … ಅವರು ಅಲ್ಲಿ ನ್ಯಾಯ ಪಡೆಯುವ ಭರವಸೆಯಲ್ಲಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ ಎಂದು ಅಂಬಾದಾಸ್ ದಾನ್ವೆ ಹೇಳಿದ್ದಾರೆ.

ಮತ್ತೊಂದೆಡೆ, ಈ ನಿರ್ಧಾರವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ ಮತ್ತು ಶಿವಸೇನೆ (ಶಿಂಧೆ ಬಣ) ನಾಯಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.

ಈ ನಿರ್ಧಾರದಿಂದ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಪಕ್ಷದಲ್ಲಿಯೂ ಪ್ರಜಾಪ್ರಭುತ್ವ ಇರಬೇಕು ಎಂಬುದು ಈ ನಿರ್ಧಾರದ ಸತ್ಯ… ಇದೊಂದು ಮಹತ್ವದ ತೀರ್ಪು… ಎಲ್ಲ ಸಂಗತಿಗಳನ್ನು ವಿಶ್ಲೇಷಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸರಿಯಾದ ನಿರ್ಧಾರ ಎಂದರು.

ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ರಾಮದಾಸ್ ಅಠವಳೆ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ, ಇದು ಠಾಕ್ರೆಗೆ ದೊಡ್ಡ ಆಘಾತವಾಗಿದೆ ಎಂದು ಹೇಳಿದ್ದಾರೆ.

‘ತೀರ್ಪು ಉದ್ಧವ್ ಠಾಕ್ರೆಗೆ ದೊಡ್ಡ ಆಘಾತವಾಗಿದೆ. ಏಕನಾಥ್ ಶಿಂಧೆ ಸಿಎಂ ಆಗಿ ಉಳಿಯುತ್ತಾರೆ ಮತ್ತು ಅವರ ಬಣ ನಿಜವಾದ ಶಿವಸೇನೆ ರಾಜಕೀಯ ಪಕ್ಷವಾಗಿದೆ. ಈ ನಿರ್ಧಾರವು ಸಂವಿಧಾನದ ಪ್ರಕಾರವಾಗಿದೆ, ಇದು ಲೋಕಸಭೆ ಚುನಾವಣೆಯಲ್ಲಿ ನಮಗೆ ಲಾಭವಾಗಲಿದೆ’ ಎಂದು ಅವರು ಹೇಳಿದ್ದಾರೆ.

ನಾರ್ವೇಕರ್ ಅವರು ತಮ್ಮ ತೀರ್ಪಿನಲ್ಲಿ ಪಕ್ಷದ ನಾಯಕತ್ವ ರಚನೆಯನ್ನು ನಿರ್ಧರಿಸುವಲ್ಲಿ ಪಕ್ಷದ ಸಂವಿಧಾನದ ಪ್ರಸ್ತುತತೆಯನ್ನು ಒತ್ತಿಹೇಳಿದರು. ಇದು ಅಧಿಕೃತ ಶಿವಸೇನಾ ಬಣವನ್ನು ಗುರುತಿಸುವಲ್ಲಿ ನಿರ್ಣಾಯಕವಾಗಿದೆ.

ಇದನ್ನೂ ಓದಿ; ಶಿಂಧೆಯನ್ನು ಪಕ್ಷದ ನಾಯಕತ್ವದಿಂದ ಕೆಳಗಿಳಿಸುವ ಅಧಿಕಾರ ಉದ್ಧವ್‌ಗೆ ಇರಲಿಲ್ಲ: ಸ್ಪೀಕರ್ ತೀರ್ಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read