Homeಮುಖಪುಟಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

ಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

- Advertisement -
- Advertisement -

ಮೌರ್ಯರ ಕೊನೆಯ ದೊರೆ ಬೃಹದ್ರತನ ಸೇನೆಯ ಮುಖ್ಯಸ್ಥ ಪುಷ್ಯಮಿತ್ರಶುಂಗ ಅಮಾನುಷ ಸಂಚನ್ನು ರೂಪಿಸಿ ತನ್ನ ದೊರೆಯನ್ನು ಕೊಂದು ಅಸಮಾನತೆಯ ಸಂಕೇತವಾದ ಮನುಯುಗವನ್ನು ಆರಂಭಿಸುತ್ತಾನೆ. ಸುಮಿತ್ರಾ ಭಾರ್ಗವನೆಂಬ ವೈದಿಕಶಾಹಿಯ ಪ್ರವರ್ತಕ ‘ಮನುಸ್ಮೃತಿ’ ಎಂಬ ಸಮಾನತೆ ವಿರೋಧಿ ಧಾರ್ಮಿಕ ಕಟ್ಟುಪಾಡುಗಳನ್ನು ರೂಪಿಸಿದ್ದಾನೆ. ಮಹಿಳೆಯರು ಸ್ವತಂತ್ರರಲ್ಲ, ಶೂದ್ರರು ಹುಟ್ಟಿರುವುದೇ ಬ್ರಾಹ್ಮಣರ ಸೇವೆಗಾಗಿ, ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯರು ಹುಟ್ಟಿರುವುದೇ ರಾಜ್ಯಾಡಳಿತ ನಡೆಸಲಿಕ್ಕಾಗಿ ಎಂಬ ಅವೈಜ್ಞಾನಿಕ ಹಾಗೂ ಅಮಾನವೀಯ ಚಿಂತನೆಗಳನ್ನು ಮೂಲನಿವಾಸಿಗಳ ಮೇಲೆ ಹೇರಿ ವೈದಿಕಶಾಹಿ ರೂಪುಗೊಳ್ಳಲು ಮನುವಾದಿಗಳು ಕಾರಣರಾದರು. ಇದನ್ನು ಅಂಬೇಡ್ಕರ್ ನಿಸರ್ಗ ಧರ್ಮ ಮತ್ತು ಮಾನವೀಯತೆಗಳಿಗೆ ವಿರುದ್ಧವಾದ ‘ಪ್ರತಿಕ್ರಾಂತಿ’ ಎಂಬುದಾಗಿ ಪ್ರತಿಪಾದಿಸಿದ್ದಾರೆ.

ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಬೌದ್ಧವಾದಿ ಮತ್ತು ಮಹಾನ್ ಚಕ್ರವರ್ತಿ ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ.

ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ವಿಂದ್ಯಾಪರ್ವತದ ಮಹಿಸ್ಮೃತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಆಳಿದ ಮಹಿಷನನ್ನು ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಸ್ಮರಿಸುತ್ತಾರೆ.

ಜಾಗತಿಕ ಇತಿಹಾಸ, ಬೌದ್ಧ ಇತಿಹಾಸ, ಮಹಿಷ ಮಂಡಲದ ಇತಿಹಾಸ ಮೊದಲಾದವುಗಳು ಆಂಗ್ಲಭಾಷೆ, ಪಾಳಿ ಭಾಷೆ ಮತ್ತಿತರ ಭಾಷೆಗಳಲ್ಲಿ ಯಥೇಚ್ಛವಾಗಿ ಲಭಿಸುತ್ತವೆ. ಮೌರ್ಯ ಚಕ್ರವರ್ತಿ ಬಿಂದುಸಾರನ ಕಾಲದಲ್ಲಿ ಮಹಿಷ ಮಂಡಲವು ಬಿಂದುಸಾರನ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ಬೌದ್ಧ ಗ್ರಂಥಗಳು ತಿಳಿಸುತ್ತವೆ. ಮಹಿಷನು ಸನಾತನ ಧರ್ಮ ಪ್ರತಿಪಾದಕರು ಹೇಳುವಂತೆ ರಾಕ್ಷಸನಲ್ಲ. ಮಹಿಷನು ಮಹಿಷ ಮಂಡಲದ ಮೂಲನಿವಾಸಿಗಳ ರಾಜ ಮತ್ತು ರಕ್ಷಕ. ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ರಾಜ್ಯಭಾರ ನಡೆಸಿ ಮಹಿಷ ಮಂಡಲವನ್ನು ಭಾರತದ ಕಲ್ಯಾಣ ರಾಜ್ಯವನ್ನಾಗಿ ರೂಪಿಸಿದ ಶ್ರೇಯಸ್ಸು ಮಹಿಷನಿಗೆ ಸಲ್ಲುತ್ತದೆ. ‘ಮಹಿಷನು ಇಂದ್ರಾದಿ ದೇವತೆಗಳಿಂದ ಮೂಲನಿವಾಸಿಗಳ ಮೇಲೆ ಜರುಗಿದ ಅನ್ಯಾಯಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಜಯಗಳಿಸಿದನು. ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು’ (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395).

ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶ ದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ಬೌದ್ಧ ಇತಿಹಾಸದಲ್ಲಿ ಈ ಸಂಭ್ರಮವನ್ನು ‘ವಿಜಯದಶಮಿ’ ಎಂದು ದಾಖಲಿಸಲಾಗಿದೆ. ಪಿತೃಪಕ್ಷವೆಂಬುದು ಪೂರ್ವಜನರನ್ನು ಪ್ರೀತಿ ಮತ್ತು ಕೃತಜ್ಞತೆಗಳಿಂದ ಸ್ಮರಿಸಿ ಬಂಧುಗಳಿಗೆ ಅನ್ನದಾಸೋಹ ನಡೆಸುವ ಮಾನವೀಯ ಪರಂಪರೆಯನ್ನು ಮಹಿಷನು ರೂಪಿಸಿದನು. ಈ ಪರಂಪರೆ ಇಂದಿಗೂ ಕೂಡ ಮೈಸೂರು ನಗರದ ವಿವಿಧ ಭಾಗಗಳಲ್ಲಿ ಎಲ್ಲ ಜನಾಂಗಗಳಲ್ಲಿಯೂ ಆಚರಣೆಯಲ್ಲಿದೆ.

ಚಾಮುಂಡಿ ಎಂಬ ಹೆಸರು ಬೌದ್ಧ ಇತಿಹಾಸ, ಭಾರತೀಯ ಇತಿಹಾಸ ಮತ್ತು ಮಹಿಷ ಮಂಡಲದ ಇತಿಹಾಸಗಳಲ್ಲಿ ದಾಖಲಾಗಿಲ್ಲ. ಚಾಮುಂಡಿ ಎಂಬುದು ಮಿಥ್ಯೆ, ಸತ್ಯವಲ್ಲ. ಮಹಿಷನನ್ನು ದುಷ್ಟನೆಂದು ವೈದಿಕರು ಪ್ರತಿಬಿಂಬಿಸಿ ಆತನನ್ನು ಚಾಮುಂಡಿ ವಧಿಸಿ ಪ್ರಜೆಗಳನ್ನು ರಕ್ಷಿಸಿದಳು ಎಂಬುದು ಆಧಾರ ರಹಿತವಾದ ಕಟ್ಟುಕಥೆ. ‘ಮಹಿಷ ದುಷ್ಟನಲ್ಲ, ಚಾಮುಂಡಿ ದುಷ್ಟ ಶಿಕ್ಷಕಿಯಲ್ಲ’ ಎಂಬ ಸತ್ಯಸಂದೇಶವನ್ನು ಮೂಲನಿವಾಸಿಗಳಿಗೆ ರವಾನಿಸಿ ಕಳೆದು ಹೋದ ಚರಿತ್ರೆಯನ್ನು ಪುನಾರೂಪಿಸುವ ಸಲುವಾಗಿ ‘ಮೂಲ ನಿವಾಸಿಗಳಿಂದ ಮಹಿಷ ದಸರಾ’ ಆಚರಿಸಲಾಗುತ್ತಿದೆಯೇ ವಿನಹ ಯಾವ ಧರ್ಮಕ್ಕೆ ಅಥವಾ ಜನಾಂಗಕ್ಕೆ ಅವಹೇಳನ ಮಾಡುವ ಉದ್ದೇಶದಿಂದಲ್ಲ.

ಯದುವಂಶದ ಅರಸರು ನೂರಾರು ವರ್ಷಗಳಿಂದ ಆಚರಿಸುತ್ತಿರುವ ‘ದಸರಾ ಉತ್ಸವ’ದಲ್ಲಿ ಚಾಮುಂಡಿ ಕೇಂದ್ರ ಬಿಂದುವಲ್ಲ. ಇಂದಿಗೂ ಕೂಡ ಯದುವಂಶದ ಅರಸರು ದಸರಾ, ಹಬ್ಬ, ಪೂಜೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ‘ಮಹಿಷ ಮಂಡಲದ ಮಹಾರಾಜರಿಗೆ ಪರಾಕ್’ ಎಂದು ಇತಿಹಾಸ ಪ್ರಜ್ಞೆಯಿಂದ ಗೌರವಿಸುವುದು ಮುಂದುವರೆದಿದೆ. ಯದುವಂಶದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಎಲ್ಲಾ ಪತ್ರ ವ್ಯವಹಾರಗಳು ಮತ್ತು ದಾಖಲೆಗಳಲ್ಲಿ ‘ಮಹಿಷೂರು’ ಎಂದು ಇತಿಹಾಸ ಪ್ರಜ್ಞೆಯಿಂದ ನಮೂದಿಸಿದ್ದಾರೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ. ದೇವಾಲಯಗಳನ್ನು ಕಟ್ಟುವುದು, ದೇವರನ್ನು ಸೃಷ್ಟಿಸುವುದು, ಭಕ್ತಾದಿಗಳನ್ನು ರೂಪಿಸುವುದು, ಮೌಢ್ಯಗಳನ್ನು ವೈಭವೀಕರಿಸುವುದು, ಪಾಪ-ಕರ್ಮ ಎಂಬ ಭಯ ಸೃಷ್ಟಿಸಿ ಮೂಲನಿವಾಸಿಗಳನ್ನು ದಾರಿತಪ್ಪಿಸಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ‘ಹುಂಡಿ’ಯೊಳಗೆ ಅಥವಾ ‘ಮಂಗಳಾರತಿ ತಟ್ಟೆ’ಯೊಳಗೆ ಇಟ್ಟು ತದನಂತರ ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಂಡು ಹೆಂಡತಿ ಮಕ್ಕಳನ್ನು ಯಾವುದೇ ಶ್ರಮ, ರಕ್ತ, ಬೆವರು ಸುರಿಸದೇ ಉದ್ಧರಿಸುವ ಸಲುವಾಗಿ ವೈದಿಕರು ಚಾಮುಂಡಿಯಂತಹ 333ಕೋಟಿ ದೇವಾನುದೇವತೆಗಳನ್ನು ಸೃಷ್ಟಿಸಿ ನಯವಂಚಕರಾಗಿ ಸುಖದಿಂದ ಬದುಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಪ್ರಕೃತಿ ವಿರೋಧಿ ಹಾಗೂ ಸಂವಿಧಾನ ವಿರೋಧಿ ವೈದಿಕಶಾಹಿ ಹುನ್ನಾರಗಳನ್ನು ಮಹಿಷ ದಸರಾ ಸಂದರ್ಭದಲ್ಲಿ ಮೂಲನಿವಾಸಿಗಳ ಗಮನಕ್ಕೆ ತಂದು ಅವರನ್ನು ಸರಿದಾರಿಗೆ ತರುವ ಬಹುದೊಡ್ಡ ಜವಾಬ್ದಾರಿ ಪ್ರಗತಿಪರ ಚಿಂತಕರ ಮೇಲಿದೆ. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಮೂಲನಿವಾಸಿಗಳನ್ನು ಮೌಢ್ಯದೆಡೆಗೆ, ಬಡತನದೆಡೆಗೆ, ಅಸಹಾಯಕತೆಯೆಡೆಗೆ ಮತ್ತು ವಿನಾಶದೆಡೆಗೆ ಕೊಂಡೊಯ್ಯುವ ವೈದಿಕರ ಅಥವಾ ಸನಾತನ ಧರ್ಮ ಪ್ರತಿಪಾದಕರ ಆಟ ನಿಲ್ಲಲೇ ಬೇಕು.

ಕಳೆದ 5 ವರ್ಷಗಳಿಂದ ಮೈಸೂರಿನಲ್ಲಿ ಮೂಲನಿವಾಸಿಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಸುಸ್ಥಿರಗೊಳಿಸುವ ಸಲುವಾಗಿ ಎಲ್ಲ ಪ್ರಗತಿಪರರು ಮತ್ತು ಮಹಿಷ ಮಂಡಲದ ಮೂಲನಿವಾಸಿಗಳು ಸ್ವಪ್ರೇರಣೆಯಿಂದ, ಅಹಿಂಸಾತ್ಮಕವಾಗಿ ಮತ್ತು ಸಂವಿಧಾನಬದ್ಧವಾಗಿ ‘ಮಹಿಷ ದಸರಾ’ ಆಚರಿಸುತ್ತಿದ್ದಾರೆ. ಮಹಿಷ ಮಂಡಲದ ಮೂಲನಿವಾಸಿಗಳು ಮತ್ತು ನಾಗಬೌದ್ಧ ಬಂಧುಗಳಿಂದ ಯಾವುದೇ ದುಂದುವೆಚ್ಚ ಅಥವಾ ಕಂದಾಚಾರವಿಲ್ಲದೇ ‘ಮಹಿಷನ ಕ್ಷಾತ್ರಶಕ್ತಿ – ಮೂಲನಿವಾಸಿಗಳ ಮಹಾಶಕ್ತಿ’ ಎಂಬ ಧ್ಯೇಯೋದ್ದೇಶದಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಧ್ಯವರ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತವಾದ ‘ಮಹಿಷ ದಸರಾ – 2019’ನ್ನು ದಿನಾಂಕ 27-09-2019ರ ಶುಕ್ರವಾರ ಮೂಲನಿವಾಸಿ ಬಂಧುಗಳು ಹಮ್ಮಿಕೊಂಡಿದ್ದರು. ಮೈಸೂರು ಪುರಭವನದ ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಬುದ್ಧರಥ, ಭೀಮರಥ, ಅಶೋಕ ರಥ ಮತ್ತು ಮಹಿಷರಥಗಳ ಮೆರವಣಿಗೆ ಮಹಾಬಲ ಬೆಟ್ಟಕ್ಕೆ ಸಾಗಿ ಮಹಿಷ ಮಂಡಲದ ಸಾಮ್ರಾಟ ಮಹಿಷನಿಗೆ ಪುಷ್ಪಾರ್ಚನೆ, ಗಣ್ಯರಿಂದ ನುಡಿನಮನ, ಪುಸ್ತಕ ಬಿಡುಗಡೆ, ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೌದ್ಧ ಧಮ್ಮ ದೀಕ್ಷೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೋಮುವಾದಿಗಳ ಸಂಚು
ದಿನಾಂಕ 26-09-2019ರಂದು ಸ್ಥಳೀಯ ಸಂಸದ ಪ್ರತಾಪ್‍ಸಿಂಹ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಾದವರು ವೈದಿಕರು ಮತ್ತು ಕೋಮುವಾದಿಗಳು ರೂಪಿಸಿದ ಸಂಚಿಗೆ ಬಲಿಯಾಗಿ ಪುರಭವನ ಮತ್ತು ಮಹಾಬಲ ಬೆಟ್ಟದ ಮಹಿಷ ಪ್ರತಿಮೆ ಇರುವ ಸ್ಥಳಗಳಲ್ಲಿ ಸೆಕ್ಷನ್ 144 ಕಾನೂನಿನನ್ವಯ ಕಫ್ರ್ಯೂ ವಿಧಿಸಿ ಮಹಿಷ ದಸರಾ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದರು. ಆದರೆ ಇದರಿಂದ ಧೃತಿಗೆಡದ ಮೂಲನಿವಾಸಿ ಬಂಧುಗಳು ಅಶೋಕಪುರಂನಲ್ಲಿರುವ ಅಂಬೇಡ್ಕರ್ ಪಾರ್ಕಿನಲ್ಲಿ ಮಹಿಷ ದಸರಾ ಆಚರಿಸಲು ಕೂಡಲೇ ನಿರ್ಧರಿಸಿದರು. ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಾವಿರಾರು ಜನರಿಗೆ ಮಹಿಷ ದಸರಾ ಕಾರ್ಯಕ್ರಮ ಸ್ಥಳ ಬದಲಾವಣೆ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡಲಾಯಿತು. ವ್ಯವಸ್ಥಾಪಕರ ನಿರೀಕ್ಷೆಗೂ ಮೀರಿ ಮೈಸೂರು ನಗರ, ಅಶೋಕಪುರಂ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಅತ್ಯಂತ ಪ್ರೀತಿಯಿಂದ ಯಾರ ಅಡ್ಡಿಯಿಲ್ಲದೇ ಮಹಿಷ ದಸರಾ ಆಚರಿಸಿದರು.

ಮೂಲನಿವಾಸಿಗಳ ದಿಗ್ವಿಜಯ
ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು, ಇತಿಹಾಸಕಾರ ಪ್ರೊ.ನಂಜರಾಜೇ ಅರಸ್, ಧಾರ್ಮಿಕ ಮುಖಂಡ ಜ್ಞಾನಪ್ರಕಾಶ ಸ್ವಾಮೀಜಿ, ಇತಿಹಾಸಕಾರ ಚಿನ್ನಸ್ವಾಮಿ ಸೋಸಲೆ, ಸಮುದಾಯ ಮುಖಂಡರಾದ ಪುರುಷೋತ್ತಮ, ಶಾಂತರಾಜು, ಸಿದ್ಧಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಪುಸ್ತಕ ಬಿಡುಗಡೆ, ಮಹಿಷರತ್ನ ಪ್ರಶಸ್ತಿ ಪ್ರಧಾನ, ನುಡಿನಮನ ಮತ್ತು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಗಮವಾಗಿ ಜರುಗಿದವು. ಪಟ್ಟಭದ್ರ ಹಿತಾಸಕ್ತಿಗಳಿಂದಲೇ ಕೂಡಿದ ರಾಜ್ಯ ಸರ್ಕಾರದ ವಿರುದ್ಧ ಮೂಲನಿವಾಸಿ ಬಂಧುಗಳು ಸೆಡ್ಡು ಹೊಡೆದು ತಮ್ಮ ಸಂಘಟನಾ ಶಕ್ತಿ ಮತ್ತು ಪರಿಶ್ರಮಗಳನ್ನು ಆಧರಿಸಿ ಅತ್ಯಂತ ಯಶಸ್ವಿಯಾಗಿ ಮಹಿಷ ದಸರಾ-2019 ಆಚರಿಸಿದರು. ಹಲವಾರು ಪ್ರಗತಿಪರ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮಗಳು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...