ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಈ ಬಗ್ಗೆ ಹಿರಿಯ ವಕೀಲ ಹರೀಶ್ ಸಾಳ್ವೆ ಮಾತನಾಡಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು. ಆದರೆ ಅಲ್ಲಿನ ಪ್ರದೇಶವನ್ನು ಪಾಕಿಸ್ತಾನ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತದೆ. ಯಾವುದಾದರೂ ವಿವಾದಿತ ಪ್ರದೇಶವಿದ್ದರೆ ಅದು ಪಿಒಕೆಗೆ ಸೇರಿದ್ದು ಎಂದು ಪಾಕ್ ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ 370 ಆರ್ಟಿಕಲ್ ರದ್ದುಗೊಳಿಸಿ, ಆಗಿದ್ದ ತಪ್ಪನ್ನು ಸರಿಪಡಿಸಿದೆ. ಪಾಕಿಸ್ತಾನದ ಪ್ರತಿಕ್ರಿಯೆಗಳು ಸಂಪೂರ್ಣ ದಿವಾಳಿತನದ ಮುನ್ಸೂಚನೆ ನೀಡುತ್ತಿವೆ. ಯಾಕಂದ್ರೆ ಕಾಶ್ಮೀರ ಭಾರತದ ಅವಿಭಾಜ್ಯವ ಅಂಗವೆಂದು ಹೇಳಲಾಗಿದೆ. ಆದರೆ ಅಲ್ಲಿ ಪಾಕಿಸ್ತಾನ ಅತಿಕ್ರಮಣ ಮಾಡುತ್ತಿದೆ. ಈಗ ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧೋನ್ಮಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ ಎಂದು ಹೇಳಿದರು.
ಕಾಶ್ಮೀರ ಸಂವಿಧಾನವು ಕಾಶ್ಮೀರ, ಭಾರತದ ಅವಿಭಾಜ್ಯ ಅಂಗವೆಂದು ಹೇಳುತ್ತದೆ. ಆದರೆ ಪಾಕಿಸ್ತಾನ ಮಾತ್ರ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಸಮಸ್ಯೆ ಎಂದು ಬಿಂಬಿಸುತ್ತಿದೆ. ಕಾಶ್ಮೀರ ವಿಚಾರದಲ್ಲಿ ಚರ್ಚೆ ನಡೆಯಬೇಕೆಂಬ ಸಲಹೆ ಅಸಂಬದ್ಧ. ಏಕೆಂದರೆ 370 ರ ಸಣ್ಣದೊಂದು ಉಲ್ಲೇಖವೂ ಸಹ ಬಹಳ ಕಠಿಣ ಮತ್ತು ಉಗ್ರ ಟೀಕೆಗಳನ್ನು ಉಂಟುಮಾಡುತ್ತದೆ. ಭಾರತ ಸರಿಯಾದ ಕೆಲಸವನ್ನು ಮಾಡಿದೆ. ” ಎಂದು ಅಭಿಪ್ರಾಯಪಟ್ಟಿದ್ದಾರೆ.


