ಹೈದರಾಬಾದ್‌ನಲ್ಲಿ ಓವೈಸಿ ಸಹೋದರರನ್ನು ಗುರಿಯಾಗಿಸಿ ಮಾತನಾಡಿದ ಬಿಜೆಪಿ ನಾಯಕಿ ನವನೀತ್ ರಾಣಾ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನವನೀತ್ ರಾಣಾ, ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರಕ್ಕೆ ಆಗಮಿಸಿದ್ದರು. ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಓವೈಸಿ ಸಹೋದರರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಾತಿನ ಮಧ್ಯೆ, “15 ನಿಮಿಷ ಪೊಲೀಸರನ್ನು ತೆರವುಗೊಳಿಸಿ” ಎಂಬ ಅಕ್ಬರುದ್ದೀನ್ ಓವೈಸಿಯ ಹಳೆ ಹೇಳಿಕೆ ನೆನಪಿಸಿಕೊಂಡ ನವನೀತ್, “ಹಿಂದೂಗಳ ಶಕ್ತಿ ಪ್ರದರ್ಶನಕ್ಕೆ ಕೇವಲ 15 ಸೆಕೆಂಡ್ ಸಾಕು” ಎಂದಿದ್ದಾರೆ. ಈ ಮೂಲಕ ಜನರನ್ನು ಪ್ರಚೋದಿಸುವ ಪ್ರಯತ್ನ ಮಾಡಿದ್ದಾರೆ.
15 सेकंद लगेगा @AkbarOwaisi_MIM @asadowaisi pic.twitter.com/TfEmWhvArX
— Navnit Ravi Rana (Modi Ka Parivar) (@navneetravirana) May 8, 2024
“ಈ ಬಾರಿ ಹೈದರಬಾದ್ ಪಾಕಿಸ್ತಾನ ಆಗುವುದನ್ನು ತಡೆಯಲು ಮತ್ತು ಹಿಂದೂ ಮತಗಳನ್ನು ಕ್ರೂಢೀಕರಿಸಲು ಮತದಾನ ನಡೆಯಬೇಕು” ಎಂದು ನವನೀತ್ ರಾಣಾ ಮತ್ತೊಂದು ಹೇಳಿಕೆ ಕೊಟ್ಟಿದ್ದು, ಧರ್ಮದ ಆಧಾರದಲ್ಲಿ ಮತಯಾಚಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
हैदराबाद को पाकिस्तान बनाने से रोकने के लिए मतदान करना होगा pic.twitter.com/0ZwsSTlefc
— Navnit Ravi Rana (Modi Ka Parivar) (@navneetravirana) May 8, 2024
ನವನೀತ್ ರಾಣಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅಸಾದುದ್ದೀನ್ ಓವೈಸಿ, “ನವನೀತ್ ಅವರಿಗೆ 15 ಸೆಕೆಂಡ್ ಅಥವಾ 1 ಗಂಟೆ ಕೊಡಿ ಎಂದು ನಾನು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡ್ತೇನೆ. ಅವರಲ್ಲಿ ಮಾನವೀಯತೆ ಉಳಿದಿದೆಯಾ ನೋಡಬೇಕು. ಯಾರು ಭಯಪಡ್ತಾರೆ, ಯಾರು ತಡೆಯುತ್ತಾರೆ ನೋಡೋಣ. ಎಲ್ಲಿಗೆ ಬರಬೇಕು ಹೇಳಿ ನಾವು ಬರುತ್ತೇವೆ. ಸರ್ಕಾರ ಅವರದ್ದಿದೆ, ಆರೆಸ್ಸೆಸ್ ಸೇರಿದಂತೆ ಎಲ್ಲಾ ಬಲವೂ ಅವರಿಗಿದೆ” ಎಂದಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ, ರಾಹುಲ್ ಗಾಂಧಿಯನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ ಮಾಜಿ ನ್ಯಾಯಾಧೀಶರು, ಹಿರಿಯ ಪತ್ರಕರ್ತ


