ತಮಿಳುನಾಡಿನ ಪುದುಪೆಟ್ಟೈ ಮೂಲದ ವ್ಯಕ್ತಿಯೊಬ್ಬರು ‘ಕ್ವಿಕ್ ಕ್ಯಾಶ್’ ಆಪ್ ಎಂಬ ಆನ್‌ಲೈನ್ ಸಾಲದ ಆ್ಯಪ್‌ನಿಂದ ಲೋನ್ ಪಡೆದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಿನಾಥ್ ಆನ್‌ಲೈನ್ ಸಾಲದ ಆ್ಯಪ್ ನವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಡ್ಡಿ ಮತ್ತು ಅಸಲು ಮೊತ್ತವನ್ನು ಪಾವತಿಸುತ್ತಿದ್ದರೂ, ಕ್ವಿಕ್ ಕ್ಯಾಶ್ ಆ್ಯಪ್‌ನ ಉದ್ಯೋಗಿಗಳು ಗೀಪಿನಾಥ್‌ಗೆ ಬೆದರಿಕೆ ಹಾಕಿದ್ದರಿಂದ, ಅವರು ಕಂಪನಿಯ ಬ್ಲ್ಯಾಕ್‌ಮೇಲ್‌ಗೆ ಗುರಿಯಾಗಿದ್ದರು ಎನ್ನಲಾಗಿದೆ. ಹೆಚ್ಚಿನ ಹಣ ನೀಡಬೇಕಾಗಿದೆ, ಇಲ್ಲದಿದ್ದರೆ ಅವರ ಮಾರ್ಫ್ ಮಾಡಿದ ಅಸಭ್ಯ ಚಿತ್ರಗಳನ್ನು ಅವರ ಸಂಪರ್ಕದಲ್ಲಿರುವವರಿಗೆ ಕಳುಹಿಸಲಾಗುವುದು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ಗೋಪಿನಾಥ್ ಗುರುವಾರ ಬೆಳಗ್ಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
“ಮಿಸ್ ಯು ಅಮ್ಮಾ ಅಪ್ಪಾ, ಬೈ. ನಾನು ಹೊರಡುತ್ತಿದ್ದೇನೆ. ಸೆಂಥಿಲ್ ಅಣ್ಣ ನಿನ್ನನ್ನು ನೋಡಿಕೊಳ್ಳುತ್ತಾನೆ. ಹಣದ ಸಮಸ್ಯೆಯಿಂದಾಗಿ ನಾನು ಹೊರಡುತ್ತಿದ್ದೇನೆ ಎಂದು ದಯವಿಟ್ಟು ಕಚೇರಿಗೆ ತಿಳಿಸಿ. ಕ್ವಿಕ್ ಕ್ಯಾಶ್ ಅಪ್ಲಿಕೇಶನ್ ನನ್ನ ಚಿತ್ರಗಳನ್ನು ಎಲ್ಲರಿಗೂ ಕಳುಹಿಸಿದೆ. ಹಾಗಾಗಿ ನಾನು ಹೊರಡುತ್ತಿದ್ದೇನೆ” ಎಂದು ಅವರು ತಮ್ಮ ಪೋಷಕರಿಗೆ ಸಂದೇಶ ಕಳುಹಿಸಿದ್ದಾರೆ.
ಗೋಪಿನಾಥ್ ಅವರ ತಂದೆ ಮಣಿ ಮಾತನಾಡಿ, “ಕಳೆದ ವಾರ ಆತ ಹಣವ ಕಳುಹಿಸಲು ಪ್ರಯತ್ತಿರುವುದಾಗಿ ಹೇಳಿದ್ದ. ಆದರೆ, ವಹಿವಾಟು ವಿಫಲವಾಗಿದೆ. ಆದರೂ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಅಸಭ್ಯ ಚಿತ್ರಗಳನ್ನು ಕಳುಹಿಸುತ್ತಿದ್ದಾರೆ ಎಂದು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು. ಅವನಿಗೆ ತುಂಬಾ ನಾಚಿಕೆಯಾಯಿತು. ಆತ ನಿನ್ನೆ ರಜೆ ತೆಗೆದುಕೊಂಡಿದ್ದಾರೆ ಮತ್ತು ನಾವು ಬೆಳಿಗ್ಗೆ ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ದೂರು ನೀಡುತ್ತೇವೆ ಎಂದು ನಾನು ಅವರಿಗೆ ಹೇಳಿದೆ. ಆದರೆ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಮಣಿ ಹೇಳಿದ್ದಾರೆ.
ಪೊಲೀಸರು ಗೋಪಿನಾಥ್ ಶವವನ್ನು ಹೊರತೆಗೆದು, ತನಿಖೆ ಆರಂಭಿಸಿ ಶವಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ; ಕೊಡಗು: ಬಾಲಕಿಯನ್ನು ಹತ್ಯೆಗೈದು ರುಂಡದೊಂದಿಗೆ ಹಂತಕ ಪರಾರಿ


