Homeಮುಖಪುಟಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

- Advertisement -
- Advertisement -

ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ ಅಭ್ಯರ್ಥಿಗಳು ಇತರ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾರಣಾಸಿಯಲ್ಲಿ ಜಿಲ್ಲಾಧಿಕಾರಿ ಎಸ್ ರಾಜಲಿಂಗಂ ಚುನಾವಣಾಧಿಕಾರಿಯಾಗಿದ್ದರು. ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದ ಸುನೀಲ್ ಕುಮಾರ್ ಬಿಂದ್(37) ವಾರಣಾಸಿಯ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್ ರಾಜಲಿಂಗಂ ಅವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ 6 ದಿನಗಳ ಕಾಲ ಅಳೆದಾಡಿರುವುದಾಗಿ ಹೇಳಿದ್ದಾರೆ. ಅದರೂ ಕೊನೆಗೆ ಸಲ್ಲಿಸಿದ ನಾಮಪತ್ರವನ್ನು ಚುನಾವಣಾಧಿಕಾರಿ ರಾಜಲಿಂಗಂ, ತಿರಸ್ಕರಿಸಿದ್ದಾರೆ. ಸುನೀಲ್ ಕುಮಾರ್ ಬಿಂದ್ ಮಾತ್ರವಲ್ಲದೆ ಮೋದಿ ವಿರುದ್ಧ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 41 ಜನರಲ್ಲಿ 33 ಮಂದಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. ವಾರಣಾಸಿಯಲ್ಲಿ ದಶಕಗಳಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮೋದಿ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ 2019ರಲ್ಲಿ 26 ಹಾಗೂ 2014ರಲ್ಲಿ 42 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಆದರೆ ಈ ಬಾರಿ ಬರೀ 7 ಅಭ್ಯರ್ಥಿಗಳು ಮಾತ್ರ ಸ್ಪರ್ಧೆಯಲ್ಲಿದ್ದಾರೆ.

ಆರಂಭದಲ್ಲಿ ರಾಜಲಿಂಗಂ ಮತ್ತು ಅವರ ಸಹಾಯಕ ಚುನಾವಣಾಧಿಕಾರಿ ವೇಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಅವರು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಸೇರಿದ ಕನಿಷ್ಠ 14 ಸ್ವತಂತ್ರ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳನ್ನು ಪರಿಶೀಲಿಸಲು ಹಲವು ಗಂಟೆಗಳನ್ನು ತೆಗೆದುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮೇ.14ರಂದು ಚುನಾವಣಾಧಿಕಾರಿ 27 ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಆದರೆ ಸಂಜೆಯ ಹೊತ್ತಿಗೆ, ಅವರ ಕಚೇರಿಯು ಅರ್ಜಿದಾರರಿಗೆ ಅಫಿಡವಿಟ್‌ಗಳಲ್ಲಿ ಸಮಸ್ಯೆಗಳಿವೆ ಎಂದು ತಿಳಿಸಿದೆ. ಪ್ರಮಾಣವಚನ ಸ್ವೀಕರಿಸಲಿಲ್ಲ ಎಂಬ ಕಾರಣಗಳನ್ನು ಈ ವೇಳೆ ನೀಡಲಾಗಿತ್ತು. ರಾಮಲಿಂಗಂ ಅಥವಾ ಅವರ ಸಹಾಯಕ ಚುನಾವಣಾಧಿಕಾರಿ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಬೇಕಿತ್ತು. ಚುನಾವಣಾ ಆಯೋಗದ  ಕೈಪಿಡಿಯಲ್ಲಿ ಅಭ್ಯರ್ಥಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ ತಕ್ಷಣ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಲು ಸಲಹೆ ನೀಡುವಂತೆ ಸೂಚಿಸಲಾಗಿದೆ. ಭಾರತೀಯ ಚುನಾವಣಾ ಆಯೋಗವು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಪ್ರಮಾಣವಚನ ಸ್ವೀಕರಿಸಲು ಚುನಾವಣಾಧಿಕಾರಿ ಸಲಹೆ ನೀಡಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿದಾರರಲ್ಲಿ ಒಬ್ಬರಾದ ಹರ್‌ಪ್ರೀತ್ ಸಿಂಗ್ ಅವರು ಪ್ರಮಾಣ ವಚನ ಬೋಧಿಸುವಂತೆ ಚುನಾವಣಾಧಿಕಾರಿಗಳನ್ನು ಕೇಳಿಕೊಂಡಿದ್ದರು. ನಾನು ಚುನಾವಣಾ ಅಧಿಕಾರಿಗೆ ಮೂರು ಬಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗೆ ಮೂರು ಬಾರಿ ಈ ಬಗ್ಗೆ ವಿನಂತಿಯನ್ನು ಮಾಡಿದ್ದೇನೆ. ಆದರೆ ಅವರು ನನ್ನ ಮನವಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮೇ 15 ರಂದು ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ, ವಾರಣಾಸಿಯ 33 ಅರ್ಜಿದಾರರ ಅಫಿಡವಿಟ್‌ಗಳನ್ನು ತಿರಸ್ಕರಿಸಲು ಅಧಿಕಾರಿಗಳು ಈ ಕಾರಣಗಳನ್ನು ಉಲ್ಲೇಖಿಸಿದ್ದಾರೆ.

ಮೇ.7ರಿಂದ ಮೇ.10ರ ನಡುವೆ 8 ನಾಮಪತ್ರವನ್ನು ಸಲ್ಲಿಕೆ ಮಾಡಲಾಗಿದೆ. ವಾರಣಾಸಿಯಲ್ಲಿ ಸ್ಪರ್ಧಿಸಲು ಬಯಸಿದ್ದ ವಾರಣಾಸಿಯ ವಕೀಲ ವಿನಯ್ ತ್ರಿಪಾಠಿ ಅವರು ಈ ಬಗ್ಗೆ ಮಾತನಾಡುತ್ತಾ, ನಾನು ಚುನಾವಣಾಧಿಕಾರಿ ಕಚೇರಿಗೆ ನಡಿಗೆ ಮೂಲಕ ತೆರಳಿದೆ. ನಾಮಪತ್ರವನ್ನು ಭರ್ತಿ ಮಾಡಲು ಖಜಾನೆ ಚಲನ್, ಸೇರಿ ಅರ್ಜಿ ನಮೂನೆ ಪಡೆಯಲು ಬಯಸಿದ್ದೆ. ಆದರೆ ನನಗೆ ಈ ಪ್ರಕ್ರಿಯೆ ಹೇಗಿತ್ತೆಂದರೆ  ಪಾಕಿಸ್ತಾನಕ್ಕೆ ಹೋಗಿ ಕಮಾಂಡರ್-ಇನ್-ಚೀಫ್ ಅವರನ್ನು ಭೇಟಿ ಮಾಡಿ ಬಂದಷ್ಟು ತ್ರಾಸದಾಯಕವಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ದನೆಯ ಸರತಿ ಸಾಲು ಇತ್ತು. ಅಲ್ಲಿದ್ದ ಬಹುತೇಕರು ಬಿಜೆಪಿಯ ಸ್ಥಳೀಯ ಕಾರ್ಯಕರ್ತರೇ ಆಗಿದ್ದರು. ಅವರು ಇಡೀ ಪ್ರಕ್ರಿಯೆಯನ್ನು ಅಡ್ಡಿಗೊಳಿಸಿದರು ಎಂದು ಹೇಳಿದ್ದಾರೆ.

‘ಮಾನವೀಯ ಭಾರತ್ ಪಕ್ಷ’ದಿಂದ ಸ್ಪರ್ಧೆ ಬಯಸಿದ್ದ ಶಿಕ್ಷಣ ತಜ್ಞ ಹೇಮಂತ್ ಯಾದವ್ ಮಾತನಾಡುತ್ತಾ, ಮೇ 7ರಂದು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಲ ಕಳೆದ ನಂತರ ಖಜಾನೆ ಚಲನ್ ಪಡೆಯುವಲ್ಲಿ ಯಶಸ್ವಿಯಾದೆ. ಆದರೆ ನಾನು ಫಾರ್ಮ್‌ನ್ನು ಕೇಳಿದಾಗ, ಮರುದಿನ ಬರಲು ಅಧಿಕಾರಿಗಳು ನನಗೆ ಹೇಳಿದ್ದಾರೆ. ಖಜಾನೆ ಚಲನ್ ಮತ್ತು ಫಾರ್ಮ್ ಒಟ್ಟಿಗೆ ನೀಡಬೇಕಿದೆ, ಆದರೆ ನನಗೆ ನೀಡಿಲ್ಲ ಎಂದು ಹೇಳಿದ್ದಾರೆ.

ತ್ರಿಪಾಠಿ ಮತ್ತು ಯಾದವ್ ಅವರು ವಾರಣಾಸಿಯಲ್ಲಿ ಸ್ಪರ್ಧಿಸಲು ನೂರಕ್ಕೂ ಹೆಚ್ಚು ಜನರು ಸರದಿಯಲ್ಲಿದ್ದಾರೆ ಎಂದು ಅಂದಾಜಿಸಿದ್ದಾರೆ. ಆದರೆ ಮೇ 7ರಿಂದ ಮೇ 10 ರವರೆಗೆ ನಾಲ್ಕು ದಿನಗಳಲ್ಲಿ ಚುನಾವಣಾಧಿಕಾರಿ ಕೇವಲ ಎಂಟು ಅಫಿಡವಿಟ್‌ಗಳನ್ನು ಮಾತ್ರ ಸ್ವೀಕರಿಸಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ತೋರಿಸುತ್ತದೆ. ಈ ವೇಳೆ ಇಷ್ಟೊಂದು ಸರತಿ ಸಾಲಿನಲ್ಲಿ ನಿಂತುಕೊಂಡು ಅರ್ಜಿ ಸಲ್ಲಿಕೆ ಮಾಡಿದವರ ಬಗ್ಗೆ ಸಂಶಯ ಮೂಡಿದೆ.

ಮೇ.13ರಂದು 6 ನಾಮಪತ್ರಗಳ ಸಲ್ಲಿಕೆ ಕಾರ್ಯ ನಡೆದಿದೆ. ಸಂಜಯ್ ಕುಮಾರ್ ತಿವಾರಿ ಅವರು ಮೇ 10ರಂದು ಚುನಾವಣಾಧಿಕಾರಿಗೆ ಅಫಿಡವಿಟ್ ಸಲ್ಲಿಸಿದ್ದು, ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು ಮೇ 13ರಂದು ಮತ್ತೊಮ್ಮೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ನನ್ನನ್ನು ಬ್ಯಾರಿಕೇಡ್‌ನಲ್ಲಿ ನಿಲ್ಲಿಸಲಾಯಿತು ಮತ್ತು ಆರು ಗಂಟೆಗಳ ಕಾಲ ಅಲ್ಲಿ ಕಾಯುವಂತೆ ಮಾಡಲಾಯಿತು ಎಂದು ತಿವಾರಿ ಆರೋಪಿಸಿದ್ದಾರೆ. ವಾರಣಾಸಿಯಿಂದ ಸ್ಪರ್ಧಿಸುವ ಇಂಗಿತವನ್ನು ಪ್ರಕಟಿಸಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ, ಆ ದಿನ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಇದೇ ರೀತಿಯ ಆರೋಪವನ್ನು ಮಾಡಿದ್ದಾರೆ.

ಮೇ.13ರಂದು ನಾಮಪತ್ರ ಸಲ್ಲಿಸಿದ ಆರು ಅಭ್ಯರ್ಥಿಗಳಲ್ಲಿ ಕನಿಷ್ಠ ಐವರು ಸ್ವತಂತ್ರ ಅಭ್ಯರ್ಥಿಗಳು ಅಂದರೆ – ವಿಕಾಸ್ ಕುಮಾರ್ ಸಿಂಗ್, ನೀರಜ್ ಸಿಂಗ್, ಸಚಿನ್ ಕುಮಾರ್ ಸೋಂಕರ್, ಅಮಿತ್ ಕುಮಾರ್ ಸಿಂಗ್ ಮತ್ತು ಶಿವಂ ಸಿಂಗ್  ವಾರಣಾಸಿಯಲ್ಲಿ ಬಿಜೆಪಿ ಪದಾಧಿಕಾರಿಗಳು ಎಂಬುವುದನ್ನು ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆ ತೋರಿಸುತ್ತದೆ ಎನ್ನುವುದನ್ನು ಸ್ಕ್ರಾಲ್‌ ಪತ್ತೆ ಹಚ್ಚಿದೆ.

ನಾಮಪತ್ರ ಸಲ್ಲಿಸಿದ್ದ ಶಿವಂ ಸಿಂಗ್ ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅವರು ವಾರಣಾಸಿಯ ಬಾಗೇಶ್ವರಿ ಮಂಡಲದ ಬಿಜೆಪಿ ಉಪಾಧ್ಯಕ್ಷ ಎಂದು ಹೇಳುತ್ತದೆ. ವಿಕಾಸ್ ಕುಮಾರ್ ಸಿಂಗ್ ರಾಜರ್ಷಿ ಮಂಡಲದ ಬಿಜೆಪಿ ಸದಸ್ಯ, ಸಚಿನ್ ಕುಮಾರ್ ಸೋಂಕರ್ ಅವರು ಸ್ಥಳೀಯ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದಲ್ಲಿ ಪದಾಧಿಕಾರಿಯಾಗಿದ್ದಾರೆ.  ನೀರಜ್ ಸಿಂಗ್ ಅವರು ಕಳೆದ ವರ್ಷದ ಪುರಸಭೆ ಚುನಾವಣೆಯಲ್ಲಿ ನಗರದ ದಿಥೋರಿ ಮಹಲ್ ವಾರ್ಡ್‌ನಲ್ಲಿ ಬಿಜೆಪಿ ಸ್ಪರ್ಧಿಯಾಗಿದ್ದರು. 30 ವರ್ಷದ ಅಮಿತ್ ಕುಮಾರ್ ಸಿಂಗ್ ಅವರು ಸ್ಥಳೀಯ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯ ಎಂದು ಮಾಹಿತಿ ಇದೆ. ಇವರು ಸಲ್ಲಿಸಿದ ಅಫಿಡವಿಟ್‌ಗಳು ಬಹುತೇಕ ಅಪೂರ್ಣವಾಗಿವೆ. ಸೋಂಕರ್ ಅವರ ಅಫಿಡವಿಟ್, ಉದಾಹರಣೆಗೆ ಅವರ ವಯಸ್ಸು ಅಥವಾ ಫೋನ್ ಸಂಖ್ಯೆಯನ್ನು ಸಹ ಉಲ್ಲೇಖಿಸಿಲ್ಲ. ಅವರೆಲ್ಲರಿಗೂ ವಕೀಲ ಕಮಲೇಶ್ ಸಿಂಗ್ ನೋಟರೈಸ್ ನೀಡಿದ್ದಾರೆ. ಅವರ ಅಫಿಡವಿಟ್ ಕೂಡ ಕಳಪೆಯಾಗಿ ಭರ್ತಿ ಮಾಡಲಾಗಿದೆ.

ಅಮಿತ್ ಕುಮಾರ್ ಸಿಂಗ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವುದನ್ನು ನಿರಾಕರಿಸಿದ್ದಾರೆ. ಆದರೆ ಅವರ ಫೇಸ್‌ಬುಕ್‌ನಲ್ಲಿ ಈ ತಿಂಗಳು ಕನಿಷ್ಠ ಎರಡು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ವಿಕಾಸ್ ಮತ್ತು ಸಚಿನ್ ಅವರು ನಮಗೆ ಸ್ಪರ್ಧಿಸುವ ಹಕ್ಕಿದೆ ಎಂದು ಹೇಳಿದ್ದಾರೆ. ಶಿವಂ ಎಂಬವರು ಮಾತನಾಡುತ್ತಾ ಡಿಸಿ ಯಾವಾಗಲು ಬ್ಯುಸಿ ಇರುತ್ತಾರಲ್ಲ,ನಾನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಭೇಟಿಯಾಗಲು ಬಯಸಿದ್ದರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೊತೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಮೇ.14 ಕೊನೆಯ ದಿನಾಂಕವಾಗಿತ್ತು. ಆ ದಿನ ತಮ್ಮ ಪತ್ರಗಳನ್ನು ಸಲ್ಲಿಸಿದ ಮೊದಲ ಇಬ್ಬರು ವ್ಯಕ್ತಿಗಳು ನರೇಂದ್ರ ಮೋದಿ ಮತ್ತು ಬಿಜೆಪಿಯ ಬದಲಿ ಅಭ್ಯರ್ಥಿ ಸುರೇಂದ್ರ ನಾರಾಯಣ್ ಸಿಂಗ್. ಮೋದಿ ನಾಮಪತ್ರ ಸಲ್ಲಿಸುವ ವೇಳೆಗೆ ಮಧ್ಯಾಹ್ನವಾಗಿತ್ತು. ಚುನಾವಣಾ ಮಾರ್ಗಸೂಚಿಯಂತೆ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿರುವ ಸ್ವತಂತ್ರ ಅಭ್ಯರ್ಥಿಗಳ ಹೊಸ ದಂಡೇ ಈ ದಿನ ಕೂಡ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಾಣಿಸಿಕೊಂಡಿದೆ ಎಂದು ಹಲವಾರು ಅರ್ಜಿದಾರರು ತಿಳಿಸಿದ್ದಾರೆ. ಬಿಜೆಪಿ- ಆರೆಸ್ಸೆಸ್‌ಗೆ ಸಂಬಂಧಿಸಿದ ಅಶೋಕ್ ಕುಮಾರ್, ದಿನೇಶ್ ಕುಮಾರ್ ಯಾದವ್, ನೇಹಾ ಜೈಸ್ವಾಲ್, ಅಜಿತ್ ಕುಮಾರ್ ಜೈಸ್ವಾಲ್, ಸಂದೀಪ್ ತ್ರಿಪಾಠಿ, ಅಮಿತ್ ಕುಮಾರ್, ನಿತ್ಯಾನಂದ ಪಾಂಡೆ ಮತ್ತು ವಿಕ್ರಮ್ ಕುಮಾರ್ ವರ್ಮಾ ಇದ್ದರು ಎನ್ನಲಾಗಿದೆ.

ನೇಹಾ ಜೈಸ್ವಾಲ್ ಅವರ ಫೇಸ್‌ಬುಕ್‌ನಲ್ಲಿ ವಾರಣಾಸಿಯ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ಎಂದು ವಿವರಿಸುತ್ತದೆ. ಅಜಿತ್ ಕುಮಾರ್ ಜೈಸ್ವಾಲ್ ವಾರಣಾಸಿಯ ಖಜೂರಿ ಪ್ರದೇಶದಲ್ಲಿ ಬಿಜೆಪಿ ವಲಯದ ಮುಖ್ಯಸ್ಥರಾಗಿದ್ದರು ಎಂದು ಸೆಪ್ಟೆಂಬರ್ 2020ರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡ ಪಕ್ಷದ ಪೋಸ್ಟ್‌ ಪ್ರಕಾರ ತಿಳಿದು ಬರುತ್ತದೆ.

ಅಮಿತ್ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಅವರು ಉತ್ತರ ವಾರಣಾಸಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಾಂಸ್ಕೃತಿಕ ವಿಭಾಗದ ಸಂಯೋಜಕ ಎಂದು ಹೇಳುತ್ತದೆ. ವಿಕ್ರಮ್ ಕುಮಾರ್ ವರ್ಮಾ ರೊಹನಿಯಾ ಮಂಡಲದ ಬಿಜೆಪಿ ಅಧ್ಯಕ್ಷ ಎಂದು ಹೇಳುತ್ತದೆ. ಸಂದೀಪ್ ತ್ರಿಪಾಠಿ ಅವರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದವರಾಗಿದ್ದಾರೆ. ಅಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಯಲ್ಲಿದ್ದ ಅಖಿಲ ಭಾರತೀಯ ಪರಿವಾರ ಪಕ್ಷದ ಹರ್‌ಪ್ರೀತ್ ಸಿಂಗ್ ಅವರು  ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಬಿಜೆಪಿಗರು ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದಿನೇಶ್ ಕುಮಾರ್ ಯಾದವ್ ಮತ್ತು ಅಶೋಕ್ ಕುಮಾರ್ ಸೇರಿ ಕೆಲ ಅಭ್ಯರ್ಥಿಗಳು ಆವರಣದ ಹಿಂಬಾಗಿಲ ಮೂಲಕ ಪ್ರವೇಶಿಸಿದರು. ನೇಹಾ ಜೈಸ್ವಾಲ್ ಮತ್ತು ಅಜಿತ್ ಕುಮಾರ್ ಜೈಸ್ವಾಲ್ ಅವರು ಚುನಾವಣಾಧಿಕಾರಿಗಳ ಕಚೇರಿಯ ಬಾಗಿಲಿನ ಹೊರಗೆ ನಿಂತರು ಮತ್ತು ಇತರರಿಗೆ ಸರತಿ ಸಾಲನ್ನು ಮೀರಿ ಒಳಗೆ ಹೋಗಲು ಬಿಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಅಂದು ಮಧ್ಯಾಹ್ನ ಡಿಸಿ ಕಚೇರಿಯೊಳಗೆ ಹರ್‌ಪ್ರೀತ್‌ ಸಿಂಗ್‌ ಕೋಪಗೊಂಡು  ಮಧ್ಯಪ್ರವೇಶಿಸಿದವರನ್ನು ಸರತಿ ಸಾಲಿನಲ್ಲಿ ಬಂದು ನಾಮಪತ್ರ ಸಲ್ಲಿಕೆಗೆ ಆಗ್ರಹಿಸಿದ್ದಾರೆ. ಮೋದಿ ಮತ್ತು ಅವರ ಬದಲಿ ಅಭ್ಯರ್ಥಿ ಹೊರತುಪಡಿಸಿ, ರಾಜಲಿಂಗಂ ಅವರು ನಾಮಪತ್ರಗಳ ಕೊನೆಯ ದಿನದಂದು 27 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಪರಿಶೀಲಿಸಿದರು. ಈ ಪ್ರಕ್ರಿಯೆಯು ಚುನಾವಣಾ ಆಯೋಗದ ಗಡುವು ಮಧ್ಯಾಹ್ನ 3 ಗಂಟೆಗೆ ಮೀರಿದೆ. ಇದರಿಂದಾಗಿ ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಅತ್ಯಂತ ನಿರ್ಣಾಯಕ ಲೋಪವೆಂದರೆ ಅಭ್ಯರ್ಥಿಗಳಿಗೆ ಕಡ್ಡಾಯ ಪ್ರಮಾಣವಚನ ಬೋಧಿಸಬೇಕಾಗಿತ್ತು. ಮಧ್ಯಪ್ರದೇಶದ ಜಬಲ್‌ಪುರದಿಂದ ಬಂದಿದ್ದ ಸ್ವತಂತ್ರ ಅಭ್ಯರ್ಥಿ ರಾಮ್‌ ಕುಮಾರ್‌ ಜೈಸ್ವಾಲ್‌ ಮಾತನಾಡಿ, ಚುನಾವಣಾಧಿಕಾರಿ ಯಾರಿಗೂ ಪ್ರಮಾಣ ವಚನ ಬೋಧಿಸಿಲ್ಲ. ಇದು ಉದ್ದೇಶಪೂರ್ವಕವಾಗಿತ್ತು ಮತ್ತು ಅದು ಅವರು ಮಾಡಿದ ತಪ್ಪು ಎಂದು ಹೇಳಿದ್ದಾರೆ.

ನಾಮ ಪತ್ರಗಳ ಪರಿಶೀಲನೆಯ ಸಮಯದಲ್ಲಿ, ಚುನಾವಣಾಧಿಕಾರಿಯೊಬ್ಬರು ಅರ್ಜಿದಾರರ ನಮೂನೆಗಳು ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಚುನಾವಣಾ ನಿಯಮಗಳ ನಡವಳಿಕೆ, 1961ರ ನಿಬಂಧನೆಗಳನ್ನು ಅನುಸರಿಸುತ್ತವೆಯೇ ಎಂದು ಪರಿಶೀಲಿಸುತ್ತಾರೆ. ಸಂಜೆಯ ವೇಳೆಗೆ, ವಾರಣಾಸಿಯ 41 ಅಭ್ಯರ್ಥಿಗಳ ಪೈಕಿ 33 ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ಘೋಷಿಸಿದೆ. ನಾಮಪತ್ರ ತಿರಸ್ಕೃತ ಪಟ್ಟಿಯಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಅಭ್ಯರ್ಥಿಗಳಿದ್ದರು. ಈ ಪಟ್ಟಿಯಲ್ಲಿ ಹರ್‌ಪ್ರೀತ್ ಸಿಂಗ್, ಸುನಿಲ್ ಬಿಂದ್, ಹೇಮಂತ್ ಯಾದವ್ ಮತ್ತು ಸ್ವತಂತ್ರ ಅಭ್ಯರ್ಥಿ ರಾಮ್ ಕುಮಾರ್ ಜೈಸ್ವಾಲ್ ಸೇರಿದಂತೆ ಇತರರು ಇದ್ದರು.

ಹರ್‌ಪ್ರೀತ್ ಸಿಂಗ್ ಅವರು ಈ ಕುರಿತು ಮೇ 16ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ನಮ್ಮ ಫಾರ್ಮ್‌ಗಳನ್ನು ತಿರಸ್ಕರಿಸಲು ಮೋಸ ನಡೆದಿದೆ. ಕೆಲವು ಸಮಾಜವಿರೋಧಿ ಶಕ್ತಿಗಳು ಒಳಗೆ ಇದ್ದುದರಿಂದ ಅವರು ಈ ರೀತಿ ಫಾರ್ಮ್‌ಗಳನ್ನು ತಿರಸ್ಕರಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಕೊಲ್ಲಲಾಯಿತು ಮತ್ತು ನಮ್ಮ ಕಣ್ಣುಗಳ ಮುಂದೆ ಸಂವಿಧಾನಕ್ಕೆ ಧಕ್ಕೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತ ಸುದ್ದಿಯನ್ನು ಹಂಚಿಕೊಂಡ ಯೋಗೇಂದ್ರ ಯಾದವ್‌, ಇಷ್ಟೊಂದು ನಾಮಪತ್ರ ತಿರಸ್ಕೃತಗೊಂಡ ಕ್ಷೇತ್ರವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಯಾರಾದರೂ ಇದನ್ನು ಸಂಶೋಧಿಸಬಹುದೇ ಎಂದು ಕೇಳಿದ್ದಾರೆ.

ಇದನ್ನು ಓದಿ: ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...