ಲೋಕಸಭೆ ಚುನಾವಣೆಯ ಮತ ಎಣಿಕೆಯ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿನ್ನಡೆ ಅನುಭವಿಸಿದ್ದರು. ಅಲ್ಲದೆ, ಎನ್‌ಡಿಎ ಮೈತ್ರಿಕೂಟ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಪಡೆದಿಲ್ಲ.
ಈ ಬೆಳವಣಿಗೆಯನ್ನು ಮೋದಿಯವರ ‘ರಾಜಕೀಯ ಮತ್ತು ನೈತಿಕ ಸೋಲು’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬಣ್ಣಿಸಿದ್ದು, ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿ ಹಿನ್ನಡೆ ಅನುಭವಿಸಿದ ಇತಿಹಾಸವಿಲ್ಲ. ಈ ರೀತಿ ಇದುವರೆಗೆ ನಡೆದಿಲ್ಲ. ಪ್ರಧಾನಿಯವರು ತಮ್ಮ ಚುನಾವಣಾ ಪ್ರಚಾರದಲ್ಲಿ ಟ್ರೈಲರ್ ನೋಡಿ ಎಂದು ಹೇಳುತ್ತಿದ್ದರು. ಈಗ ಅವರ ಕ್ಷೇತ್ರದಲ್ಲಿಯೇ ತಮ್ಮ ಟ್ರೈಲರ್ ನೋಡುತ್ತಿದ್ದಾರೆ. ಮೋದಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹಿಮಾಲಯಕ್ಕೆ ಹೋಗಲಿ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಡಿಸೆಂಬರ್ 3,2016 ರಂದು ಮೊರಾದಾಬಾದ್‌ನಲ್ಲಿ ಮಾತನಾಡಿದ್ದ ಪ್ರಧಾನಿ, ನಾನು ಬಡವ, ನಾನು ಏನು ಮಾಡಬಹುದು? ಬ್ಯಾಗ್ ಎತ್ತಿಕೊಂಡು ಹೋಗಬಹುದು ಎಂದಿದ್ದರು. ಆ ಮಾತಿನಂತೆ ಈಗ ಬ್ಯಾಗ್ ಎತ್ತಿಕೊಂಡು ಹಿಮಾಲಯಕ್ಕೆ ಹೋಗಿ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ ಫಲಿತಾಂಶ 2024: ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ಓಟಕ್ಕೆ ಬ್ರೇಕ್ ಹಾಕಿದ ಎಸ್‌ಪಿ-ಕಾಂಗ್ರೆಸ್


