ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕೇರಳದಲ್ಲಿ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಕೇಂದ್ರ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.
ವಿಜಯೋತ್ಸವದ ನೆಪದಲ್ಲಿ ಕೋಝಿಕ್ಕೋಡ್‌ನ ಮೀಡಿಯಾ ಒನ್ ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಚೇರಿಯ ಕಾಂಪೌಂಡ್ ಒಳಗೆ ಪಟಾಕಿ ಎಸೆದು ಹಾನಿಗೊಳಿಸಿದ್ದು, ಸ್ಟುಡಿಯೋಗೆ ನುಗ್ಗಲು ಯತ್ನಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ಬಿಜೆಪಿ ಧ್ವಜ ಹಿಡಿದ ಕೆಲ ವ್ಯಕ್ತಿಗಳು ಗೇಟ್‌ಗೆ ಒದ್ದು ಒಳ ನುಗ್ಗಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ.
Breaking: BJP workers attack MediaOne TV headquarters amid election victory celebration
Saffron-clad BJP activists threw firecrackers and tried to trespass on the channel studio premises in Kerala’s Kozhikode.
The channel was previously banned for its critical coverage of RSS… pic.twitter.com/3EQY3WaoNx
— Maktoob (@MaktoobMedia) June 4, 2024
ಆರ್‌ಎಸ್‌ಎಸ್ ಮತ್ತು ಆಡಳಿತಾರೂಢ ಬಿಜೆಪಿಯಯನ್ನು ಟೀಕಿಸಿ ವರದಿ ಮಾಡಿದ ಬೆನ್ನಲ್ಲೇ ಮೀಡಿಯಾ ಒನ್ ಸುದ್ದಿ ವಾಹಿನಿಯ ಪ್ರಸಾರಕ್ಕೆ 2022ರಲ್ಲಿ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. ಇದರ ವಿರುದ್ದ ಮೀಡಿಯಾ ಒನ್ ಕಾನೂನು ಹೋರಾಟ ನಡೆಸಿದ ಕಾರಣ ಸುಪ್ರೀಂ ಕೋರ್ಟ್ ನಿಷೇಧವನ್ನು ತೆಗೆದು ಹಾಕಿತ್ತು. ಕೇಂದ್ರದ ಕ್ರಮ ‘ನಿರಂಕುಶ ಮತ್ತು ಅನ್ಯಾಯ’ ಎಂದು ಹೇಳಿತ್ತು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಲಯಾಳಂನ ಜನಪ್ರಿಯ ನಟ ಸುರೇಶ್ ಗೋಪಿ ಅವರು ತ್ರಿಶೂರ್ ಕ್ಷೇತ್ರದಿಂದ 74,686 ಮತಗಳ ಅಂತರದೊಂದಿಗೆ ಗೆಲ್ಲುವ ಮೂಲಕ ಕೇರಳದಲ್ಲಿ ಎನ್‌ಡಿಎ ಒಕ್ಕೂಟದ ಖಾತೆ ತೆರೆದಿದ್ದಾರೆ. ಈ ಹಿನ್ನೆಲೆ ರಾಜ್ಯದ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಇದನ್ನೂ ಓದಿ : ಮೋದಿ ನೇತೃತ್ವದ ಎನ್‌ಡಿಎಗೆ ಬೆಂಬಲಿಸಬೇಡಿ: ನಿತೀಶ್, ನಾಯ್ಡುಗೆ ಮಮತಾ ಬ್ಯಾನರ್ಜಿ ಆಗ್ರಹ


