ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳನ್ನು ಪರಿಶೀಲಿಸಲು ಶಿಕ್ಷಣ ಸಚಿವಾಲಯ ನಾಲ್ವರು ಸದಸ್ಯರ ಸಮಿತಿ ರಚಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ತಿಳಿಸಿದೆ.
ಜೂನ್ 4ರಂದು ಪ್ರಕಟಗೊಂಡ ಫಲಿತಾಂಶ ಪ್ರಕಟಗೊಂಡ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಎನ್‌ಟಿಎ “ಪರೀಕ್ಷೆಯ ಸಮಗ್ರತೆಯಲ್ಲಿ ರಾಜಿಯಾಗಿಲ್ಲ” ಎಂದಿದೆ.
“ಈ ಸಮಸ್ಯೆ ಆರು ಕೇಂದ್ರಗಳ ಕೇವಲ 1,600 ಅಭ್ಯರ್ಥಿಗಳಿಗೆ ಮಾತ್ರ ಸಂಬಂಧಿಸಿದೆ” ಎಂದು ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
#NEET | The issue concerning the NEET exam is pertinent to 6 centres and 1600 candidates
To allay the fear of 1600 candidates especially, and other 23 lakh candidates, National Testing Agency (NTA) has decided that a high powered committee will analyze the recommendations by the… pic.twitter.com/68KWfEB06T
— DD News (@DDNewslive) June 8, 2024
“ಗ್ರೇಸ್ ಅಂಕಗಳನ್ನು ನೀಡುವಿಕೆಯು ಪರೀಕ್ಷೆಯ ಅರ್ಹತಾ ಮಾನದಂಡಗಳ ಮೇಲೆ ಪರಿಣಾಮ ಬೀರಿಲ್ಲ ಮತ್ತು ಸಮಸ್ಯೆಗೊಳಗಾದ ಅಭ್ಯರ್ಥಿಗಳ ಫಲಿತಾಂಶಗಳ ಪರಿಶೀಲನೆಯು ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಸುಭೋದ್ ಕುಮಾರ್ ತಿಳಿಸಿದ್ದು, ಸಮಿತಿಯು ಒಂದು ವಾರದೊಳಗೆ ಶಿಫಾರಸುಗಳನ್ನು ಮತ್ತು ಫಲಿತಾಂಶವನ್ನು ಸಲ್ಲಿಸಲಿದೆ. ಈ ವಿದ್ಯಾರ್ಥಿಗಳನ್ನು ಪರಿಷ್ಕರಿಸಬಹುದು” ಎಂದು ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅನೇಕ ಅಭ್ಯರ್ಥಿಗಳು ಮತ್ತು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದಿರುವುದು ಮತ್ತು ಈ ಪೈಕಿ ಆರು ಅಭ್ಯರ್ಥಿಗಳು ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದವರು ಎಂಬುವುದು ಅನುಮಾನಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಎನ್‌ಟಿಎ
“ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಅಧೀಕ್ಷಕರ ಕಾರಣದಿಂದ ಪರೀಕ್ಷೆ ಬರೆಯಲು ಕಡಿಮೆ ಸಮಯ ಸಿಕ್ಕಿದೆ ಎಂದು ಆರೋಪಿಸಿದ್ದಾರೆ” ಎಂದು ಸಿಂಗ್ ಹೇಳಿದ್ದು, “ಗ್ರೇಸ್ ಅಂಕಗಳನ್ನು ನೀಡುವ ನಿರ್ಧಾರವು 2018 ರ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಆಧಾರಿತವಾಗಿದೆ” ಎಂದಿದ್ದಾರೆ.
“ಸಮಯದಲ್ಲಿ ಸಮಯದ ಕೊರತೆಯಾಗಿದ್ದರೆ, ಆ ಸಮಸ್ಯೆ ಪರಿಹರಿಸಲು ಒಂದು ಸೂತ್ರವಿದೆ. 2018ರ ಸುಪ್ರೀಂ ಕೋರ್ಟ್ ಆದೇಶದಂತೆ ಈ ಸಮಸ್ಯೆ ಗ್ರೇಸ್ ಮಾರ್ಕ್ ಸೂಕ್ತವೆಂದು ಭಾವಿಸಿ ಪ್ರತಿಯೊಬ್ಬ ಅಂಕ ಹೆಚ್ಚಿಸಲಾಗಿದೆ” ಎಂದು ಸುಬೋಧ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
718 ಮತ್ತು 719 ಅಂಕಗಳನ್ನು ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಭೋದ್ ಕುಮಾರ್, ಆ ರೀತಿ ಅಂಕ ನೀಡಲು ಸಾಧ್ಯವಿಲ್ಲ. +4-1 ನೆಗೆಟಿವ್ ಮಾರ್ಕಿಂಗ್ ಸಿಸ್ಟಮ್‌ನಿಂದ ಇದು ಸಾಧ್ಯವಿಲ್ಲ. ಆದರೆ, ಸ್ಕೇಲ್ ಫಾರ್ಮುಲಾದಿಂದ ಇದು ಆಗಿರಬಹುದು ಎಂದಿದ್ದಾರೆ.
ಅಭ್ಯರ್ಥಿಗಳು 718 ಮತ್ತು 719 ಅಂಕಗಳನ್ನು ಗಳಿಸಿರುವ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ನ ಜೂನಿಯರ್ ವೈದ್ಯರು ಪ್ರಶ್ನೆ ಎತ್ತಿದ್ದು, ಈ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಇಂಡಿಯಾ ಒಕ್ಕೂಟ ನಿತೀಶ್ ಕುಮಾರ್‌ಗೆ ಪ್ರಧಾನಿ ಹುದ್ದೆಯ ಆಫರ್ ನೀಡಿದೆ ಎಂದ ಜೆಡಿಯು: ಕಾಂಗ್ರೆಸ್ ಪ್ರತಿಕ್ರಿಯೆ


