ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಮುಸ್ಲಿಂ ಬಾಹುಳ್ಯ ಪ್ರದೇಶ ಅಕ್ಬರ್ ನಗರದಲ್ಲಿ ಜೂನ್ 10ರಿಂದ ಮನೆ, ಅಂಗಡಿಗಳು ಸೇರಿದಂತೆ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಲಕ್ನೋ ಅಭಿವೃದ್ದಿ ಪ್ರಾಧಿಕಾರ (ಎಲ್‌ಡಿಎ) ಅಕ್ಬರ್ ನಗರ ಹಂತ 1 ಮತ್ತು 2ರಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಮೂರು ದಿನಗಳಲ್ಲಿ ಕಾರ್ಯಾಚರಣೆ ಅಂತ್ಯವಾಗಲಿದೆ ಎಂದು ಜೂನ್ 14ರಂದು ಎಲ್‌ಡಿಎ ವಿಸಿ ಇಂದ್ರಮಣಿ ತ್ರಿಪಾಠಿ ತಿಳಿಸಿದ್ದಾರೆ. ಅಕ್ಬರ್ ನಗರದಲ್ಲಿ ಈ ಹಿಂದೆಯೂ ತೆರವು ಕಾರ್ಯಾಚರಣೆ ನಡೆದಿದೆ. ಈ ನಡುವೆ ನ್ಯಾಯಾಲಯದ ಮಧ್ಯಪ್ರವೇಶದಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
This is from Akbar Nagar, Lucknow💔#Akbarnagar pic.twitter.com/kuVRFte0C0
— هارون خان (@iamharunkhan) June 15, 2024
ಕುಕ್ರೈಲ್ ನದಿಪಾತ್ರದ ಅಭಿವೃದ್ದಿ ಮತ್ತು ಅತಿಕ್ರಮಣ ತೆರವಿಗಾಗಿ ಕಟ್ಟಡಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಎಲ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ (ಜೂನ್ 14) ಒಟ್ಟು 165 ನಿರ್ಮಾಣಗಳನ್ನು ಕಡೆವಲಾಗಿದ್ದು, ಜೂನ್ 10ರಿಂದ ಇದುವರೆಗೆ ಒಟ್ಟು 614 ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಅಕ್ಬರ್ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸದಂತೆ ತಡೆ ನೀಡಿತ್ತು. ತಡೆ ಅವಧಿ ಪೂರ್ಣಗೊಂಡ ಹಿನ್ನೆಲೆ ತೆರವು ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ವರದಿಯಾಗಿದೆ.
2015ರಲ್ಲಿ ಗೋಮತಿ ರಿವರ್ ಫ್ರಂಟ್ ಪ್ರಾಜೆಕ್ಟ್ ಅನ್ನು ಲಕ್ನೋ ಅಭಿವದ್ದಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಈ ಯೋಜನೆಯಡಿ ನಗರದ ನದಿ ಮತ್ತು ಅದರ ಪಾತ್ರದ ಅಭಿವೃದ್ದಿ. ನದಿ ಪಾತ್ರದ ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಯೋಜನೆಯ ಭಾಗವಾಗಿ ಕುಕ್ರೈಲ್ ನದಿ ಪಾತ್ರದ ಅಕ್ಬರ್ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬೀದಿಗೆ ಬಿದ್ದ ಸಾವಿರಾರು ಜನರು
ಅಕ್ರಮವೋ ಸಕ್ರವೋ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಎಲ್‌ಡಿಎ ಮನೆ, ಅಂಗಡಿಗಳನ್ನು ಧ್ವಂಸ ಮಾಡಿರುವುದರಿಂದ ಅಕ್ಬರ್ ನಗರ ಜನರು ಬೀದಿಗೆ ಬಿದ್ದಿದ್ದಾರೆ. ಇರಲು ಮನೆಯಿಲ್ಲದೆ, ಜೀವನೋಪಾಯಕ್ಕೆ ದಾರಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
This is from Akbar Nagar, Lucknow💔#AkbarNagar pic.twitter.com/fTNLnjBJ2c
— هارون خان (@iamharunkhan) June 12, 2024
ಅಕ್ಬರ್ ನಗರ ಮುಸ್ಲಿಂ ಬಾಹುಳ್ಯದ ಪ್ರದೇಶವಾದ್ದರಿಂದ ಯೋಗಿ ಅದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿ ತೆರವು ಕಾರ್ಯಾಚರಣೆ ನಡೆಸಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಇದನ್ನೂ ಓದಿ : ಮಾರ್ಕ್ಸ್‌ವಾದಿ ಇ ಕೆ ನಾಯನಾರ್ ನನ್ನ ರಾಜಕೀಯ ಗುರು: ಕೇಂದ್ರ ಸಚಿವ ಸುರೇಶ್ ಗೋಪಿ


