ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಯಾವುದೇ ರೀತಿಯ ಹ್ಯಾಕಿಂಗ್‌ನಿಂದ ರಕ್ಷಿಸಲು ದೃಢವಾದ ಆಡಳಿತಾತ್ಮಕ ಸುರಕ್ಷತೆಗಳನ್ನು ಹೊಂದಿರುವ ಸ್ವತಂತ್ರ ವ್ಯವಸ್ಥೆಯಾಗಿದೆ, ಅದನ್ನು ಅನ್ಲಾಕ್ ಮಾಡಲು ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಅಗತ್ಯವಿಲ್ಲ ಎಂದು ಮುಂಬೈನ ಚುನಾವಣಾಧಿಕಾರಿಯೊಬ್ಬರು ಹೇಳಿದರು.
ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ ಅವರು 48 ಮತಗಳ ಅಂತರದಿಂದ ಜಯಶಾಲಿಯಾದ ಶಿವಸೇನಾ ಅಭ್ಯರ್ಥಿ ರವೀಂದ್ರ ವೈಕರ್ ಅವರ ಸಂಬಂಧಿ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಗೆ ಪ್ರತಿಕ್ರಿಯಿಸಿದರು. ಜೂನ್ 4 ರಂದು (ಮಂಗಳವಾರ) ಮತ ಎಣಿಕೆ ಸಮಯದಲ್ಲಿ ಇವಿಎಂಗೆ ಮೊಬೈಲ್ ಫೋನ್ ಸಂಪರ್ಕಪಡಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
“ಇಬಿಎಂ ಒಂದು ಸ್ವತಂತ್ರ ವ್ಯವಸ್ಥೆಯಾಗಿದ್ದು, ಅದನ್ನು ಅನ್ಲಾಕ್ ಮಾಡಲು ಒಟಿಪಿಯ ಅಗತ್ಯವಿಲ್ಲ. ಇದು ಪ್ರೋಗ್ರಾಮೆಬಲ್ ಅಲ್ಲ ಮತ್ತು ವೈರ್‌ಲೆಸ್ ಸಂವಹನ ಸಾಮರ್ಥ್ಯಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.
ಪತ್ರಿಕೆಯೊಂದು ಹಬ್ಬಿಸುತ್ತಿರುವ ಸಂಪೂರ್ಣ ಸುಳ್ಳು; ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499, 505 ರ ಅಡಿಯಲ್ಲಿ ಮಾನನಷ್ಟ ಮತ್ತು ಸುಳ್ಳು ಸುದ್ದಿಗಳನ್ನು ಹರಡಿದ ಪತ್ರಿಕೆಗೆ ನಾವು ನೋಟಿಸ್ ನೀಡಿದ್ದೇವೆ ಎಂದು ಸೂರ್ಯವಂಶಿ ಇಂದು ಹೇಳಿದ್ದಾರೆ.
ಜೂನ್ 4 ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾದಾಗ, ಗೋರೆಗಾಂವ್‌ನ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ವೈಕರ್ ಅವರ ಸೋದರ ಮಾವ ಮಂಗೇಶ್ ಪಾಂಡಿಲ್ಕರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 188 (ಅಧಿಕೃತ ಆದೇಶವನ್ನು ಪಾಲಿಸದಿರುವುದು) ಅಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ವನ್ರೈ ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯವಂಶಿ, ಜೋಗೇಶ್ವರಿ ವಿಧಾನಸಭಾ ಕ್ಷೇತ್ರದ ಡಾಟಾ ಎಂಟ್ರಿ ಆಪರೇಟರ್ ದಿನೇಶ್ ಗುರವ್ ಅವರ ವೈಯಕ್ತಿಕ ಮೊಬೈಲ್ ಫೋನ್ ಅನಧಿಕೃತ ವ್ಯಕ್ತಿಯ ಕೈಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಡೇಟಾ ಎಂಟ್ರಿ, ಮತ ಎಣಿಕೆ 2 ವಿಭಿನ್ನ ಅಂಶಗಳಾಗಿವೆ ಎಂದರು.
“ಡೇಟಾ ಎಂಟ್ರಿ ಮತ್ತು ಮತ ಎಣಿಕೆ ಎರಡು ವಿಭಿನ್ನ ಅಂಶಗಳಾಗಿವೆ. ಡೇಟಾ ಎಂಟ್ರಿಗಾಗಿ ಎನ್‌ಕೋರ್ ಲಾಗಿನ್ ಸಿಸ್ಟಮ್ ಅನ್ನು ತೆರೆಯಲು ‘ಒಟಿಪಿ ಎಆರ್‌ಒ’ ಅನ್ನು ಸಕ್ರಿಯಗೊಳಿಸುತ್ತದೆ. ಎಣಿಕೆ ಪ್ರಕ್ರಿಯೆಯು ಸ್ವತಂತ್ರವಾಗಿದೆ ಮತ್ತು ಮೊಬೈಲ್ ಫೋನ್‌ನ ಅನಧಿಕೃತ ಬಳಕೆಗೆ ಯಾವುದೇ ಸಂಬಂಧವಿಲ್ಲ, ಇದು ದುರದೃಷ್ಟಕರ ಘಟನೆಯಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಸೂರ್ಯವಂಶಿ ಹೇಳಿದರು.
“ಹ್ಯಾಕಿಂಗ್ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಲು ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ದೃಢವಾದ ಆಡಳಿತಾತ್ಮಕ ಸುರಕ್ಷತೆಗಳು ಅದರಲ್ಲಿವೆ. ಅಭ್ಯರ್ಥಿಗಳು ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಎಲ್ಲವನ್ನೂ ನಡೆಸುವುದು ಸುರಕ್ಷತೆಗಳನ್ನು ಒಳಗೊಂಡಿರುತ್ತದೆ” ಎಂದು ಅವರು ಹೇಳಿದರು.
ವೈಕರ್ ಅಥವಾ ಶಿವಸೇನೆಯ (ಯುಬಿಟಿ) ಸೋತ ಅಭ್ಯರ್ಥಿ ಅಮೋಲ್ ಕೀರ್ತಿಕರ್ ಮರು ಎಣಿಕೆಗೆ ಕೋರಲಿಲ್ಲ. ಆದರೆ, ಅಮಾನ್ಯ ಅಂಚೆ ಮತಗಳ ಪರಿಶೀಲನೆಗೆ ಒತ್ತಾಯಿಸಲಾಯಿತು ಮತ್ತು ಅದನ್ನು ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.
ಸಕ್ಷಮ ನ್ಯಾಯಾಲಯದ ಆದೇಶದ ಹೊರತು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲಾಗುವುದಿಲ್ಲ ಎಂದು ಸೂರ್ಯವಂಶಿ ಹೇಳಿದರು.
ಇದನ್ನೂ ಓದಿ; ಪಶ್ಚಿಮ ಬಂಗಾಳ: ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ; 5 ಸಾವು, 30 ಮಂದಿ ಗಾಯ


