ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗೋರಖ್‌ಪುರದ ಐದು ದಿನಗಳ ಭೇಟಿಯನ್ನು ಮುಗಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗದೆ ಇರುವುದು ಕುತೂಲ ಮೂಡಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎನ್ನುವ ಊಹಾಪೋಹಗಳಿಗೆ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಅವಧ್, ಕಾಶಿ, ಕಾನ್ಪುರ್ ಮತ್ತು ಗೋರಖ್‌ಪುರದಿಂದ ಆರ್‌ಎಸ್‌ಎಸ್ ಕಾರ್ಯಕರ್ತರ ಸುಮಾರು ಅರ್ಧ ಡಜನ್ ಸಭೆಗಳನ್ನು ಉದ್ದೇಶಿಸಿ ಭಾಗವತ್ ಅವರು ಮಾತನಾಡಿದ್ದಾರೆ.
ಭಾಗವತ್ ಅವರು ಗೋರಖ್‌ಪುರದ ಮಣಿರಾಮ್ ಚಿಯುತಾಹ ಪ್ರದೇಶದಲ್ಲಿ ಎಸ್.ವಿ.ಎಂ. ಪಬ್ಲಿಕ್ ಸ್ಕೂಲ್, ಆದಿತ್ಯನಾಥ್ ನೇತೃತ್ವದ ಗೋರಖನಾಥ ದೇವಸ್ಥಾನದಿಂದ ಕೇವಲ 12 ಕಿ.ಮೀ. ದೂರದಲ್ಲಿದೆ. ಆದರೆ, ಅವರು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ, ಅಂತಹ ಭೇಟಿಯ ಎಲ್ಲ ವಿನಂತಿಗಳನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಗೋರಖ್‌ಪುರಕ್ಕೆ ಭಾಗವತ್ ಆಗಮಿಸಿದ ದಿನವಾದ ಬುಧವಾರದಂದು ಆದಿತ್ಯನಾಥ್ ಅವರನ್ನು ಜೂನ್ 15 ರಂದು ಭೇಟಿಯಾಗಲಿದ್ದಾರೆ ಎಂದು ತಿಳಿಸಲಾಗಿತ್ತು ಎಂದು ಹಲವು ಸಂಘ ಮತ್ತು ಬಿಜೆಪಿ ಮುಖಂಡರು ಈ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಆದಿತ್ಯನಾಥ್ ಶನಿವಾರ ಮತ್ತು ಭಾನುವಾರ ಅವರ ದೇವಸ್ಥಾನದಲ್ಲಿದ್ದರೂ ಅಂತಹ ಯಾವುದೇ ಸಭೆ ನಡೆಯಲಿಲ್ಲ.
ಗೋರಖ್‌ಪುರದ ರಾಜಕೀಯ ವೀಕ್ಷಕರೊಬ್ಬರು ಆರೆಸ್ಸೆಸ್-ಬಿಜೆಪಿ ಭಿನ್ನಾಭಿಪ್ರಾಯವು “ನಿಜವಾದ ವಿರೋಧವನ್ನು ಮರೆಮಾಚುವ” ನಾಟಕವಾಗಿರಬಹುದು ಎಂದು ಅನುಮಾಣ ವ್ಯಕ್ತಪಡಿಸಿದ್ದಾರೆ.
“ಭಾಗವತ್ ಅವರು ತಮ್ಮ ಕಾರ್ಯಕರ್ತರನ್ನು ಅಥವಾ ಮೋದಿಯನ್ನು ದೂಷಿಸಲು ಸಾಧ್ಯವಿಲ್ಲ. ಮೋದಿ ಪ್ರಧಾನಿಯಾದ ನಂತರ ಸಂಘವು ತನ್ನ ಕಾರ್ಯಕರ್ತರಿಗೆ ಬಿಜೆಪಿ ರಾಜಕಾರಣಿಗಳೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿತು” ಎಂದರು.
ಇದನ್ನೂ ಓದಿ; ಪನ್ನುನ್‌ನನ್ನು ಹತ್ಯೆ ಸಂಚಿನ ಆರೋಪ: ನಿಖಿಲ್ ಗುಪ್ತಾನನ್ನು ಕೋರ್ಟ್‌ಗೆ ಹಾಜರುಪಡಿಸಿದ ಯುಎಸ್ ಅಧಿಕಾರಿಗಳು


