18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸಾಯೋನಿ ಘೋಷ್ ಅವರು ನಿದ್ರಿಸುತ್ತಿದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋದ ಸತ್ಯಾಸತ್ಯತೆ ಪರಿಶೀಲಿಸಲು ಗೂಗಲ್ ರಿವರ್ಸ್ ಫೋಟೋ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಜೂನ್ 26ರಂದು ಸಂಸದ್ ಟಿವಿಯಲ್ಲಿ ಅಪ್ಲೋಡ್ ಮಾಡಲಾದ ಫೋಟೋಗೆ ಸಂಬಂಧಿಸಿದ ವಿಡಿಯೋವೊಂದು ಲಭ್ಯವಾಗಿದೆ.
ವಿಡಿಯೋದಲ್ಲಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಶಿವಸೇನೆ (ಯುಬಿಟಿ) ಪಕ್ಷದ ಸಂಸದರಾಗಿರುವ ಅರವಿಂದ್ ಗಣಪತ್ ಸಾವಂತ್ ಅವರು ಲೋಕಸಭಾ ಸ್ಪೀಕರ್ ಆಗಿ ಮರು ಆಯ್ಕೆಯಾದ ಓಂ ಬಿರ್ಲಾ ಅವರನ್ನು ಅಭಿನಂದಿಸುವ ದೃಶ್ಯವಿದೆ.

ಅರವಿಂದ್ ಸಾವಂತ್ ಮಾತನಾಡಿರುವ ವಿಡಿಯೋದಲ್ಲಿ 1:57 ಸೆಕೆಂಡ್‌ನಲ್ಲಿ ಮುಹುವಾ ಮೊಯಿತ್ರಾ ಮತ್ತು ಸಾಯೋನಿ ಘೋಷ್ ಅವರನ್ನು ನೋಡಬಹುದು. ಇಬ್ಬರೂ ಕೂಡ ಒಂದು ಕ್ಷಣ ಕಣ್ಣು ಮಿಟುಕಿಸಿರುವುದು ವಿಡಿಯೋದಲ್ಲಿದೆ. ಅದನ್ನೇ ಸ್ಕ್ರೀನ್ ಶಾಟ್ ತೆಗೆದು, ಅವರು ನಿದ್ದೆ ಮಾಡಿದ್ದಾರೆ ಎಂದು ಹಂಚಲಾಗಿದೆ.
ವೈರಲ್ ಪೋಟೋ ಮತ್ತು ವಿಡಿಯೋದ ತುಣುಕು ಕೆಳಗಡೆಯಿದ್ದು, ಅದರಲ್ಲಿ ಸತ್ಯಾಸತ್ಯತೆ ಗಮನಿಸಬಹುದು.
ಒಟ್ಟಿನಲ್ಲಿ ಸಂಸತ್ ಅಧಿವೇಶನದ ವೇಳೆ ಟಿಎಂಸಿ ಸಂಸದರು ನಿದ್ದೆ ಮಾಡಿದ್ದರು ಎಂಬ ಸಾಮಾಜಿಕ ಜಾಲತಾಣದ ಸುದ್ದಿ ಸುಳ್ಳಾಗಿದೆ. ಇಬ್ಬರು ಮಹಿಳಾ ಸಂದರು ಕಣ್ಣು ಮಿಟುಕಿಸುರುವುದನ್ನು ಸ್ಕ್ರೀನ್ ಶಾಟ್ ತೆಗೆದು ಸುಳ್ಳು ಸಂದೇಶದೊಂದಿಗೆ ಹಂಚಲಾಗ್ತಿದೆ.
ಇದನ್ನೂ ಓದಿ : FACT CHECK : ಮಾಜಿ ಕ್ರಿಕೆಟಿಗ ಅಝರುದ್ದೀನ್ ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂಬುವುದು ಸುಳ್ಳು


