ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿ ಬಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ವೃದ್ದರೊಬ್ಬರ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ ಎಂದು ರೈಲ್ವೆ ಪೊಲೀಸರು (ಜಿಆರ್‌ಪಿ) ಶನಿವಾರ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಜಿಆರ್‌ಪಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲಿನೊಳಗೆ ಹತ್ತಾರು ಜನರು ವೃದ್ದರೊಬ್ಬರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಖ್ಯಾತ ಫ್ಯಾಕ್ಟ್ ಚೆಕ್ಕರ್ ಮಹಮದ್ ಝುಬೇರ್ ಸೇರಿದಂತೆ ಹಲವರು ಈ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Haji Ashraf Munyar from a village in Jalgaon District travelling in a train to Kalyan to meet his daughter was abused and badly beaten up by goons in a train near Igatpuri alleging him of carrying beef. pic.twitter.com/uOr3vlqBqB
— Mohammed Zubair (@zoo_bear) August 30, 2024
ಜಿಆರ್‌ಪಿ ಪ್ರಕಾರ, ಸಂತ್ರಸ್ತ ವೃದ್ಧ ಜಲಗಾಂವ್ ಜಿಲ್ಲೆಯ ನಿವಾಸಿ ಹಾಜಿ ಅಶ್ರಫ್ ಮುನ್ಯಾರ್ ಕಲ್ಯಾಣ್‌ನಲ್ಲಿರುವ ತನ್ನ ಮಗಳ ಮನೆಗೆ ಹೋಗುತ್ತಿದ್ದಾಗ ಇಗತ್‌ಪುರಿ ಬಳಿ ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ಸಹ ಪ್ರಯಾಣಿಕರು ಥಳಿಸಿದ್ದಾರೆ.
“ನಾವು ವಿಡಿಯೋ ಗಮನಿಸಿದ್ದೇವೆ ಮತ್ತು ಸಂತ್ರಸ್ತನನ್ನು ಗುರುತಿಸಿದ್ದೇವೆ. ದಾಳಿಯಲ್ಲಿ ಭಾಗಿಯಾಗಿರುವ ಕೆಲವರನ್ನು ಕೂಡ ಗುರುತಿಸಲಾಗಿದೆ, ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ; ಪತಂಜಲಿ ‘ಸಸ್ಯಾಹಾರಿ’ ಟೂತ್ ಪೌಡರ್‌ನಲ್ಲಿ ಮಾಂಸದ ಅಂಶ! ರಾಮದೇವ್, ಕೇಂದ್ರಕ್ಕೆ ಕೋರ್ಟ್ ನೋಟಿಸ್


