‘ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ಶಿವಾಜಿ ಮಹಾರಾಜರ ಸಮಾಧಿಯನ್ನು ಕಂಡುಹಿಡಿದರು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರಿ ವಿವಾದ ಹುಟ್ಟುಹಾಕಿದೆ. ಭಾಗವತ್ ಅವರ ಈ ಹೇಳಿಕೆ ಫುಲೆ ಅವರ ಶ್ರೇಯವನ್ನು ಕಸಿದುಕೊಳ್ಳುವ ಪಿತೂರಿ ಎಂದು ಮಹಾರಾಷ್ಟ್ರದ ಒಬಿಸಿ ನಾಯರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ವಾರದ ಆರಂಭದಲ್ಲಿ ಪುಣೆಯಲ್ಲಿ ಮಾತನಾಡಿದ್ದ ಭಾಗವತ್, “ಶಿವಾಜಿಯನ್ನು ಸ್ಮರಿಸುವಂತೆ ಜಾಗೃತಿಯ ಆಂದೋಲನವನ್ನು ಪ್ರಾರಂಭಿಸಲಾಯಿತು. ರಾಯಗಡದಲ್ಲಿ ಈ ಆಚರಣೆಯನ್ನು ಪ್ರಾರಂಭಿಸಲಾಯಿತು. ತಿಲಕರು ಇದನ್ನೆಲ್ಲ ಕಂಡುಹಿಡಿದರು” ಎಂದು ಹೇಳಿದ್ದರು. ಅವರ ಹೇಳಿಕೆಗೆ ಅಕ್ರೋಶ ವ್ಯಕ್ತಪಡಿಸಿರುವ ಒಬಿಸಿ ನಾಯಕರು ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಅವರ ಶ್ರೇಯವನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
1869 ರಲ್ಲಿ ಜ್ಯೋತಿರಾವ್ ಫುಲೆ ಅವರು ಸ್ಮಾರಕಕ್ಕೆ ಭೇಟಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ. ಫುಲೆ 19ನೇ ಶತಮಾನದ ಭಾರತದ ಪ್ರಮುಖ ಸಮಾಜ ಸುಧಾರಕರಾಗಿದ್ದರು. ವಿಶೇಷವಾಗಿ ಒಬಿಸಿ ಸಮುದಾಯಗಳು ಮತ್ತು ತಳಸ್ಥರದ ಸಮುದಾಯಗಳ ಪರವಾಗಿ ಅವರು ಹೋರಾಟ ಮಾಡಿದ್ದರು. ಅಲ್ಲದೆ, ಅವರು ಜಾತಿ ವ್ಯವಸ್ಥೆಯ ತೀವ್ರ ಟೀಕಾಕಾರ ಕೂಡಾ ಆಗಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಯ ಮೂಲಕ ಒಬಿಸಿ ಸೇರಿದಂತೆ ಕೆಳ ಜಾತಿಗಳ ಸಬಲೀಕರಣಕ್ಕಾಗಿ ಅವರು ಕೆಲಸ ಮಾಡಿದ್ದರು.
ಫುಲೆ ರಾಯಗಡ ಕೋಟೆಗೆ ಭೇಟಿ ನೀಡಿದ ಅದೇ ವರ್ಷ, “ಛತ್ರಪತಿ ಶಿವಾಜಿ ರಾಜೇ ಭೋಸಲೆ ಯಂಚ ಪೋವಾಡ” ಎಂಬ ಲಾವಣಿಯೊಂದನ್ನು ಬರೆದಿದ್ದರು. ಅದು ಶಿವಾಜಿಯ ಇತಿಹಾಸವನ್ನು ಸಾಮಾನ್ಯ ಜನರ ದೃಷ್ಟಿಕೋನದಿಂದ ವಿವರಿಸುತ್ತದೆ ಮತ್ತು ಅವರನ್ನು ರಾಜರಿಗಿಂತ ಹೆಚ್ಚಾಗಿ ರೈತ ನಾಯಕ ಎಂದು ಚಿತ್ರಿಸುತ್ತದೆ. ಆ ಕಾಲದ ಬ್ರಾಹ್ಮಣ ಇತಿಹಾಸಕಾರರು ಶಿವಾಜಿಯನ್ನು ಬ್ರಾಹ್ಮಣರ ಕಲ್ಯಾಣಕ್ಕಾಗಿ ಸಮರ್ಪಿತವಾದ ರಾಜ ಎಂದು ಚಿತ್ರಿಸಿದ್ದರು.
ಇದನ್ನೂಓದಿ: ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಈ ಬಗ್ಗೆ ಮಾತನಾಡಿರುವ ಇತಿಹಾಸತಜ್ಞ ಇಂದ್ರಜಿತ್ ಸಾವಂತ್, “ಅರ್ಧ ಶತಮಾನಕ್ಕೂ ಹೆಚ್ಚು ಕಾಲ, ರಾಯಗಢ ಕೋಟೆಯ ಆವರಣದಲ್ಲಿ ದಟ್ಟವಾದ ಗಿಡಗಂಟಿಗಳಿಂದ ಶಿವಾಜಿ ಮಹಾರಾಜರ ಸಮಾಧಿ ಮುಚ್ಚಿಹೋಗಿತ್ತು. ಇಂತಹ ಪರಿಸ್ಥಿತಿಗಳಲ್ಲಿ ಮಹಾತ್ಮ ಜ್ಯೋತಿಬಾ ಫುಲೆ 1869 ರಲ್ಲಿ ರಾಯಗಡಕ್ಕೆ ಹೋದರು. ಯಾರೂ ಭೇಟಿ ನೀಡದ ಈ ಸ್ಥಳಕ್ಕೆ ತೆರಳಿ ಅವರು ಸಮಾಧಿಯನ್ನು ಹುಡುಕಿದರು. ಇಡೀ ಭೇಟಿಯನ್ನು ದೀನಬಂಧು ಪತ್ರಿಕೆಯಲ್ಲಿ ದಾಖಲಿಸಲಾಗಿದೆ” ಎಂದು ಹೇಳುತ್ತಾರೆ. ಇಂದ್ರಜಿತ್ ಸಾವಂತ್ ಅವರು ಶಿವಾಜಿಯ ಸಮಾಧಿಯ ಕುರಿತು ‘ಶಿವಛತ್ರಪತಿಂಚ್ಯಾ ಸಮಾಧಿಚಾ ಶೋದ್ ವಾ ಬೋಧ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಆದರೆ ಬಾಲಗಂಗಾಧರ ತಿಲಕ್ ಅವರು 1895 ರಲ್ಲಿ ಸ್ಮಾರಕವನ್ನು ದುರಸ್ತಿ ಮಾಡಲು ಮತ್ತು ಅದರ ಮೇಲೆ ಛತ್ರಿ ನಿರ್ಮಿಸಲು ಹಣವನ್ನು ಸಂಗ್ರಹಿಸಿದ್ದರು. ಆದರೆ 1925 ರಲ್ಲಿ, ಬ್ರಿಟಿಷ್ ಸರ್ಕಾರವು ಸಮಾಧಿ ನಿರ್ಮಾಣ ಮತ್ತು ದುರಸ್ತಿಗೆ ಅನುಮೋದನೆ ನೀಡಿತ್ತು.
ಶಿವಾಜಿ ಸಮಾಧಿ ಕಂಡುಹಿಡಿದ ಇತಿಹಾಸವನ್ನು ತಿರುಚುವುದು ಇತಿಹಾಸವನ್ನು ಪುನಃ ಬರೆಯುವ ಹಿಂದುತ್ವ ಪಿತೂರಿಯ ಭಾಗವಾಗಿದೆ ಎಂದು ರಾಜಕೀಯ ನಾಯಕರು ಆರೋಪಿಸಿದ್ದು, ಭಾಗವತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಧಿಯನ್ನು ಕಂಡುಹಿಡಿದ ವ್ಯಕ್ತಿ ಎಂದು ತಿಲಕರ ಹೆಸರನ್ನು ಸೇರಿಸುವುದನ್ನು ಇತಿಹಾಸಕಾರರು ಪ್ರಶ್ನಿಸಿದ್ದಾರೆ.
ಇದನ್ನೂಓದಿ: ಹರಿಯಾಣ | 89 ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್; ಸಿಪಿಐ(ಎಂ)ಗೆ 1 ಸ್ಥಾನ; ಎಎಪಿ ಜೊತೆಗಿಲ್ಲ ಮೈತ್ರಿ
“ತಿಲಕರು ಸಮಾಧಿಯನ್ನು ಕಂಡುಹಿಡಿದ ಬಗ್ಗೆ ಯಾವುದೇ ಐತಿಹಾಸಿಕ ಉಲ್ಲೇಖಗಳಿಲ್ಲ. 1895 ರಿಂದ ಸ್ಮಾರಕಕ್ಕಾಗಿ ಚಳುವಳಿಯನ್ನು ಮುನ್ನಡೆಸುವಲ್ಲಿ ತಿಲಕರು ಪಾತ್ರವಹಿಸಿದ್ದರು ಮತ್ತು ಯೋಜನೆಗೆ ಹಣವನ್ನು ಸಂಗ್ರಹಿಸಿದ್ದರು. ಅದನ್ನು ಠೇವಣಿ ಮಾಡಿದ ಬ್ಯಾಂಕ್ ಬಸ್ಟ್ ಆದ ನಂತರ ಸಂಪೂರ್ಣ ಮೊತ್ತವು ಕಳೆದುಹೋಯಿತು. 1920ರಲ್ಲಿ ತಿಲಕರ ಮರಣದ ವೇಳೆಗೆ ಆಂದೋಲನವು ಭಗ್ನಗೊಂಡಿತ್ತು. ತಿಲಕ್ ಅವರು ಅದನ್ನು ಕಂಡುಹಿಡಿದಿದ್ದಾರೆ ಎಂದು ಹೇಳುವ ಮೂಲಕ ಸ್ಮಾರಕಕ್ಕೆ ಲಿಂಕ್ ಮಾಡುವುದು ಇತಿಹಾಸವನ್ನು ತಿರುಚುವ ಮತ್ತೊಂದು ಪ್ರಯತ್ನವಾಗಿದೆ” ಎಂದು ಇತಿಹಾಸಗಾರ ಸಾವಂತ್ ಹೇಳಿದ್ದಾರೆ.
“ಶಿವಾಜಿ ಮಹಾರಾಜರ ಸಮಾಧಿಯನ್ನು ಮೊದಲು ಕಂಡುಹಿಡಿದದ್ದು ಜ್ಯೋತಿರಾವ್ ಫುಲೆ ಎಂಬುದು ಸತ್ಯ. ಈ ಐತಿಹಾಸಿಕ ಸತ್ಯವನ್ನು ಈ ಜಗತ್ತಿನ ಯಾವ ವ್ಯಕ್ತಿಯೂ ಬದಲಾಯಿಸಲು ಸಾಧ್ಯವಿಲ್ಲ. ಶಿವಜಯಂತಿ ಆಚರಣೆಯನ್ನು ಪ್ರಾರಂಭಿಸಲು ಸಹ ಫುಲೆ ಕಾರಣರಾಗಿದ್ದರು” ಎಂದು ರಾಜ್ಯದ ಪ್ರಮುಖ ಒಬಿಸಿ ನಾಯಕರಲ್ಲಿ ಒಬ್ಬರಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಜ್ಯ ಕ್ಯಾಬಿನೆಟ್ ಸಚಿವ ಚಗ್ಗನ್ ಭುಜಬಲ್ ಹೇಳಿದ್ದಾರೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


