ಗುರುವಾರ ಮಧ್ಯಾಹ್ನ ಮಥುರಾದಲ್ಲಿ ಚಲಿಸುತ್ತಿದ್ದ ವ್ಯಾನ್‌ನಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಮೂವರು ಯುವಕರು ಬಾಲಕಿಗೆ ಅಮಲೇರಿದ ನೀರನ್ನು ನೀಡಿದ ನಂತರ ಆಕೆಯನ್ನು ಅಪಹರಿಸಿದ್ದಾರೆ. ಚಲಿಸುವ ವ್ಯಾನ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಅತ್ಯಾಚಾರದ ಬಳಿಕ ತಂಡವು ಬಾಲಕಿಯನ್ನು ಫ್ಲೈ ಓವರ್ ಕೆಳಗೆ ಎಸೆದು ಪರಾರಿಯಾಗಿದೆ. ಹುಡುಗಿಗೆ ಪ್ರಜ್ಞೆ ಬಂದಾಗ ಆಕೆ ಮನೆಗೆ ಹಿಂದಿರುಗುವ ದಾರಿಯನ್ನು ಕಂಡುಕೊಂಡು, ತನ್ನ ಹೆತ್ತವರಿಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ ಎಂದು ವರದಿಯಿಂದ ತಿಳಿದುಬಂದಿದೆ.
ಬಾಲಕಿ ಕಿರಾಣಿ ಅಂಗಡಿಗೆ ಹೋಗಿದ್ದ ವೇಳೆ ಯುವಕನೊಬ್ಬ ನೀರಿನ ಬಾಟಲಿ ನೀಡಿದ್ದಾನೆ. ಅದನ್ನು ಸೇವಿಸಿದ ಬಳಿಕ ಒಮ್ಮೆಲೇ ತಲೆಸುತ್ತು ಬಂದಂತಾಯಿತು. ಇದಾದ ನಂತರ ಮತ್ತಿಬ್ಬರು ಯುವಕರು ಸೇರಿಕೊಂಡು ಆಕೆಯನ್ನು ಬಲವಂತವಾಗಿ ವ್ಯಾನ್‌ಗೆ ಹತ್ತಿಸಿಕೊಂಡಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಛಾಟಾ ಪೊಲೀಸರು ಪರಾರಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ; ಒಕ್ಕೂಟ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕಕ್ಕೆ ಬಾಂಬೆ ಹೈಕೋರ್ಟ್ ತಡೆ; ತೀರ್ಪು ಸ್ವಾಗತಿಸಿದ ಕಾಂಗ್ರೆಸ್


