ಜಾಮೀನಿಗೆ ಪೂರ್ವ ಷರತ್ತಾಗಿ ಯೂಟ್ಯೂಬರ್ ಫೆಲಿಕ್ಸ್ ಜೆರಾಲ್ಡ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಫೆಲಿಕ್ಸ್ ಅವರ ಯೂಟ್ಯೂಬ್ ಚಾನೆಲ್ ‘ರೆಡ್‌ಪಿಕ್ಸ್ 24 × 7’ ಅನ್ನು ತೆಗೆದುಹಾಕುವಂತೆ ಕೇಳಿಕೊಂಡು ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸೆಪ್ಟೆಂಬರ್ 6 ತಡೆಹಿಡಿಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸುಪ್ರೀಂ ಕೋರ್ಟ್ ಪೀಠವು ಸೆಪ್ಟೆಂಬರ್ 6 ರಂದು ನೀಡಿದ್ದ ತನ್ನ ಆದೇಶವನ್ನು ಶುಕ್ರವಾರ ದೃಢಪಡಿಸಿದ್ದು, “ಅಂತಹ ಷರತ್ತನ್ನು ಹೇರುವುದು ಅನಗತ್ಯ ಮತ್ತು ಜಾಮೀನು ಅರ್ಜಿಯ ನಿರ್ಧಾರಕ್ಕಿಂತ ಹೊರಗಿನದ್ದಾಗಿದೆ” ಎಂದು ಹೇಳಿದೆ.
“ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯಿದೆ-2002 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ-2000 ರ ಶಿಕ್ಷಾರ್ಹ ಅಪರಾಧಗಳ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅರ್ಜಿದಾರರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದಾಗ್ಯೂ, YouTube ಚಾನಲ್ ಅನ್ನು ಮುಚ್ಚಿ ಎಂದು ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್ ನಿರ್ದೇಶಿಸಿದೆ. ಇಂತಹ ಷರತ್ತನ್ನು ಹೇರುವುದು ಅನಗತ್ಯ ಮತ್ತು ಜಾಮೀನು ಅರ್ಜಿಯ ನಿರ್ಧಾರಕ್ಕೆ ಹೊರಗಿನದ್ದಾಗಿದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ಪೀಠವು ಹೇಳಿದೆ.
“ಹೈಕೋರ್ಟ್ ವಿಧಿಸಿರುವ ಷರತ್ತಿನಿಂದ ಸ್ವತಂತ್ರವಾಗಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ಪ್ರತಿವಾದಿಯು ತನ್ನ ಯೂಟ್ಯೂಬ್ ಚಾನೆಲ್ ಅನ್ನು ಮುಚ್ಚಬೇಕು ಎಂಬ ಹೈಕೋರ್ಟಿನ ಷರತ್ತುಗಳನ್ನು ನಾವು ತಳ್ಳಿ ಹಾಕಿದ್ದೇವೆ. ಈ ನ್ಯಾಯಾಲಯವು ನೀಡಿದ ಸೆಪ್ಟೆಂಬರ್ 6, 2024 ರ ಆದೇಶವು ಮೇಲಿನ ಸ್ಪಷ್ಟೀಕರಣದೊಂದಿಗೆ ದೃಢೀಕರಿಸಲ್ಪಡುತ್ತದೆ” ಎಂದು ಸುಪ್ರೀಂಕೋರ್ಟ್ ಪೀಠವು ಆದೇಶಿಸಿದೆ.
ಯೂಟ್ಯೂಬರ್ ಫೆಲಿಕ್ಸ್ ಅವರು ಹೋರಾಟಗಾರ ಸವುಕ್ಕು ಶಂಕರ್ ಅವರೊಂದಿಗೆ ಚಾನೆಲ್‌ನಲ್ಲಿ “ಆಕ್ಷೇಪಾರ್ಹ” ಸಂದರ್ಶನವನ್ನು ಆಯೋಜಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಶನದಲ್ಲಿ ಶಂಕರ್ ಅವರು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಜುಲೈ 31 ರಂದು ಫೆಲಿಕ್ಸ್‌ಗೆ ಜಾಮೀನು ನೀಡಿದ್ದ ಹೈಕೋರ್ಟ್, ಆದಾಗ್ಯೂ ಅವರ ಚಾನೆಲ್ ಅನ್ನು ಮುಚ್ಚುವಂತೆ ಸೂಚಿಸಿತ್ತು.
ವಿಡಿಯೊ ನೋಡಿ: ಅಟ್ರಾಸಿಟಿ’ ಕಾದಂಬರಿ; ಮನುಷ್ಯ ಲೋಕದ ರೂಪಾಂತರವನ್ನ ಕಟ್ಟುತಿದೆಯಾ? ಡಾ. ಗೀತಾ ವಸಂತ


