ಆಂಧ್ರಪ್ರದೇಶದ ಪ್ರತಿಪಕ್ಷ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಯೋಜಿಸಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಶುಕ್ರವಾರ ತಿಳಿಸಿವೆ. ‘ಧರ್ಮ ಘೋಷಿಸಿ’ ಎಂದು ಆಂಧ್ರಪ್ರದೇಶ ಆಡಳಿತರೂಢ ಪಕ್ಷವು ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಕೇಳಿಕೊಂಡಿದ್ದರಿಂದ ತಿರುಪತಿ ದೇವಸ್ಥಾನದ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು TNIE ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರೆಡ್ಡಿ ಅವರ ಆಪ್ತ ಮೂಲಗಳು ಬೆಟ್ಟದ ದೇಗುಲಕ್ಕೆ ಅವರ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಆದರೆ ಅವರು ದೇವಾಲಯದ ಪಟ್ಟಣಕ್ಕೆ ಹೊರಡುವ ಕೆಲವೇ ಗಂಟೆಗಳ ಮೊದಲು ಬಂದ ನಿರ್ಧಾರದ ಹಿಂದಿನ ಕಾರಣವನ್ನು ತಕ್ಷಣವೇ ಬಹಿರಂಗಪಡಿಸಲಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.
ಅದಾಗ್ಯೂ, ದೇವಸ್ಥಾನವನ್ನು ಪ್ರವೇಶಿಸುವ ಮೊದಲು ತಮ್ಮ ನಂಬಿಕೆಯನ್ನು ಘೋಷಿಸಬೇಕು ಎಂಬ ಪಿಡಿಪಿ ಬೇಡಿಕೆಯ ನಡುವೆ ಜಗನ್ ಅವರ ಭೇಟಿಯನ್ನು ರದ್ದುಗೊಳಿಸಲಾಯಿತು ಎಂದು ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗನ್ ಮೋಹನ್, ದೇಶದ ಪ್ರತಿಯೊಬ್ಬರಿಗೂ ನನ್ನ ಧರ್ಮ ತಿಳಿದಿದೆ. ನಾನು ಸಿಎಂ ಆಗುವ ಮೊದಲು ಹಲವಾರು ಬಾರಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ಬೈಬಲ್ ಓದಿದರೂ ಇಸ್ಲಾಂ, ಹಿಂದೂ ಮತ್ತು ಸಿಖ್ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳಿದರು.
ತಮ್ಮ ನಾಯಕರು ದೇವಸ್ಥಾನಕ್ಕೆ ಹೋಗದಂತೆ ತಿರುಪತಿಯಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಟಿವಿಗಳು ತೋರಿಸುತ್ತಿವೆ ಎಂದು ಜಗನ್ ಹೇಳಿದ್ದಾರೆ. ಧರ್ಮ ಘೋಷಿಸಿ
ಇದನ್ನೂಓದಿ: ತಮ್ಮ ಬಗೆಗಿನ ಜನರ ಗ್ರಹಿಕೆಯನ್ನು ರಾಹುಲ್ ಗಾಂಧಿ ಬದಲಾಯಿಸಿದ್ದಾರೆ: ನಟ ಸೈಫ್ ಅಲಿ ಖಾನ್
“ತಮ್ಮ (ಚಂದ್ರಬಾಬು ನಾಯ್ಡು) 100 ದಿನಗಳ ಆಡಳಿತದ ವೈಫಲ್ಯವನ್ನು ಬೇರೆಡೆಗೆ ತಿರುಗಿಸಲು ಮತ್ತು ಗಮನವನ್ನು ಬೇರೆಡೆಗೆ ಸೆಳೆಯಲು ಚಂದ್ರಬಾಬು ನಾಯ್ಡು ಅವರು ಲಡ್ಡು ವಿಚಾರವನ್ನು ಮುಂದಿಟ್ಟರು. ಲಡ್ಡು ವಿಚಾರದಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಅವರು ಉದ್ದೇಶಪೂರ್ವಕವಾಗಿ ಧರ್ಮದ ಘೋಷಣೆ ಮಾಡುವಂತೆ ಕೇಳುತ್ತಿದ್ದಾರೆ. ಲಡ್ಡು ಗುಣಮಟ್ಟದ ಬಗ್ಗೆ ಅನುಮಾನದ ಬೀಜಗಳನ್ನು ಬಿತ್ತಿದೆ” ಎಂದು ರೆಡ್ಡಿ ಹೇಳಿದ್ದಾರೆ.
ವೆಂಕಟೇಶ್ವರ ಸ್ವಾಮಿಗೆ ಐದು ವರ್ಷಗಳ ಕಾಲ (ಅವರು ಸಿಎಂ ಆಗಿದ್ದಾಗ) ರೇಷ್ಮೆ ವಸ್ತ್ರವನ್ನು ಅರ್ಪಿಸುವ ಅವಕಾಶ ನನಗೆ ಸಿಕ್ಕಿತ್ತು. ನಾನು ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ಇದು ನನ್ನ ಮೊದಲ ಬಾರಿಯ ಭೇಟಿ ಅಲ್ಲ ಎಂದು ಅವರು ಹೇಳಿದ್ದಾರೆ. ಗುಣಮಟ್ಟದ ಕಾರಣಕ್ಕಾಗಿ ಟಿಟಿಡಿ ತಿರಸ್ಕರಿಸಿದ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಸಲು ಎಂದಿಗೂ ಬಳಸಲಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ತಿರುಪತಿ ಲಡ್ಡುಗಳಲ್ಲಿ ಗುಣಮಟ್ಟವಿಲ್ಲದ ತುಪ್ಪದ ಬಳಕೆ ಮತ್ತು ಅದರಲ್ಲಿ ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ಚಂದ್ರಬಾಬು ನಾಯ್ಡು ಕಳೆದ ವಾರ ಆರೋಪಿಸಿದ್ದರು.
ವಿಡಿಯೊ ನೋಡಿ: ದಲಿತ ಸಮುದಾಯಗಳ ಒಡಕಿನಲ್ಲೂ ಒಗ್ಗಟ್ಟಿದೆ: ಅಗ್ರಹಾರ ಕೃಷ್ಣಮೂರ್ತಿ


