ಏಪ್ರಿಲ್ ತಿಂಗಳ ವೇಳೆ ಕೇರಳದ ಕೊಚ್ಚಿಯಲ್ಲಿ ಪ್ಯಾಲೆಸ್ತೀನ್ ಪರ ಬ್ಯಾನರ್ ಮತ್ತು ಬೋರ್ಡ್‌ಗಳನ್ನು ಹರಿದು ಹಾಕಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾದ ಪ್ರವಾಸಿ ಜರಾ ಮಿಚೆಲ್ ಶಿಲಾನ್ಸ್ಕಿ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಪೋಸ್ಟರ್‌ಗಳು ಯಾವುದೇ ಸಂಘಟನೆಯ ಹೆಸರನ್ನು ಹೊಂದಿಲ್ಲ ಮತ್ತು ಅವುಗಳ ಪ್ರದರ್ಶನಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಯಾವುದೇ ಕಾನೂನು ಅಧಿಕಾರವಿಲ್ಲದೆ ಪೋಸ್ಟರ್‌ಗಳನ್ನು ಹಾಕಲಾಗಿದೆ. ಅವುಗಳಲ್ಲಿ ಜವಾಬ್ದಾರಿಯುತ ಯಾವುದೇ ಸಂಘಟನೆಯ ಹೆಸರನ್ನು ಹೊಂದಿಲ್ಲವಾದ್ದರಿಂದ, ಪೋಸ್ಟರ್‌ಗಳನ್ನು ತೆಗೆದುಹಾಕುವುದು ಅಥವಾ ಹರಿದು ಹಾಕುವುದು ಕಾನೂನುಬಾಹಿರ ಅಥವಾ ಗಲಭೆಯನ್ನು ಪ್ರಚೋದಿಸುವ ಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ” ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ತೀರ್ಪು ನೀಡಿದ್ದಾರೆ.
“IPC ಯ ಸೆಕ್ಷನ್ 153 ರ ಅಡಿಯಲ್ಲಿ ಅಪರಾಧಕ್ಕಾಗಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದ್ದು. ಈ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಕೌನ್ಸಿಲರ್‌ಗಳಿಗೆ ಗೋಮೂತ್ರ ಕುಡಿಸಿ ‘ಶುದ್ಧೀಕರಣ’ ಮಾಡಿದ ಬಿಜೆಪಿ ಶಾಸಕ!
ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಶಿಲಾನ್ಸ್ಕಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಶಿಲಾನ್ಸ್ಕಿಯನ್ನು ಪ್ರತಿನಿಧಿಸಿದ ವಕೀಲ ಬ್ಲೇಜ್ ಕೆ. ಜೋಸ್, ಶಿಲಾನ್ಸ್ಕಿ ಅವರ ವಿರುದ್ಧದ ಕಾನೂನು ಪ್ರಕ್ರಿಯೆಗಳು ಕೇವಲ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ವಾದಿಸಿದ್ದಾರೆ.
ಜಮಾತ್-ಎ-ಇಸ್ಲಾಮಿ ಹಿಂದ್‌ನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಕಮಲಕ್ಕಡವು ಜುಂಕಾರ್ ಜೆಟ್ಟಿಯಲ್ಲಿ ಅಳವಡಿಸಿದ್ದ ಪ್ಯಾಲೆಸ್ತೀನ್ ಪರ ಪೋಸ್ಟರ್‌ಗಳು ಮತ್ತು ಬೋರ್ಡ್‌ಗಳನ್ನು ಇಬ್ಬರು ವಿದೇಶಿ ಮಹಿಳಾ ಪ್ರವಾಸಿಗರು ಹರಿದು ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳೊಂದಿಗೆ ವಿವಾದ ಉಂಟಾಗಿದ್ದು, ಆಸ್ಟ್ರೇಲಿಯನ್ ಪ್ರವಾಸಿಗರೊಂದಿಗೆ ವಾಗ್ವಾದ ನಡೆದಿತ್ತು.
ಪೋಸ್ಟರ್‌ಗಳನ್ನು ಪ್ರಚೋದನೆಗಾಗಿ ಹರಿದು ಹಾಕಲಾಗಿದೆ ಅಥವಾ ಅದು ಗಲಭೆಗೆ ಪ್ರಚೋದನೆ ನೀಡುತ್ತದೆ ಎಂದು ಅಂತಿಮ ವರದಿಯಲ್ಲಿ ಸೂಚಿಸಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಶಿಲಾನ್ಸ್ಕಿಗೆ ತನ್ನ ಕೃತ್ಯದಿಂದ ಗಲಭೆ ನಡೆಯುತ್ತದೆ, ಮತ್ತು ಅದು ಸಂಭಾವ್ಯ ಅಪರಾಧಕ್ಕೆ ಕಾರಣವಾಗಬಹುದು ಅಥವಾ ಇದರಿಂದಾಗಿ ಇತರರು ಪ್ರಚೋದಿತರಾಗುತ್ತಾರೆ ಎಂದು ತಿಳಿದಿತ್ತೆ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಒತ್ತಿಹೇಳಿದೆ.
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


