ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಅವರ ಪ್ರಚಾರ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಬಾನೆಟ್ ಮತ್ತು ಮುಂಭಾಗದ ಗಾಜುಗಳನ್ನು ತುಳಿದು ಗಾಜನ್ನು ಹಾನಿಗೊಳಿಸಿದ್ದಾನೆ.
ಘಟನೆ ನಡೆದಾಗ ಕಾರಿನಲ್ಲಿದ್ದ ಇಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಶೇಖ್ ಅಬ್ದುಲ್ ರಶೀದ್ (57) ಇದ್ದರು ಎನ್ನಲಾಗಿದೆ.
ಉತ್ತರ ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನದಂದು ಕುಪ್ವಾರ ಜಿಲ್ಲೆಯ ಲಾಂಗೇಟ್ ಪ್ರದೇಶದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ದಾಳಿಯ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ವಾಹನದ ಬಾನೆಟ್ ಮತ್ತು ಮುಂಭಾಗದ ವಿಂಡ್ ಶೀಲ್ಡ್ ಮೇಲೆ ಹತ್ತಿ ತುಳಿದಿರುವುದನ್ನು ಕಾಣಬಹುದಾಗಿದೆ.
Engineer Rashid's ex PA Noorul Shahbaz breaking Enginner's front glass pic.twitter.com/4sEzDpTM1k
— waseem Ahmad (@waseemahmad1823) September 29, 2024
ರಶೀದ್ ಅವರ ಅವಾಮಿ ಇತ್ತೆಹಾದ್ ಪಾರ್ಟಿ ಘಟನೆಯ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ದಾಳಿಕೋರನು ಸಂಸದರ ಮಾಜಿ ಸಹಾಯಕನಾಗಿದ್ದು, ಏಪ್ರಿಲ್-ಮೇನಲ್ಲಿ ಅವರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಆದರೆ, ಚುನಾವಣೆ ಬಳಿಕ ಅವರೊಂದಿಗೆ ಜಗಳವಾಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ತ್ರಿಪುರಾದಲ್ಲೊಂದು ಆಘಾತಕಾರಿ ಘಟನೆ: 62 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿ ಮಕ್ಕಳಿಂದಲೇ ಸಜೀವ ದಹನ


