ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಡುತ್ತಿದೆ ಎಂದು ಅಮೆರಿಕ ಸರ್ಕಾರದ ಆಯೋಗವು ಆರೋಪಿಸಿದ್ದು, ಭಾರತವನ್ನು “ನಿರ್ದಿಷ್ಟ ಆತಂಕದ ದೇಶ” ಎಂದು ಹೆಸರಿಸಲು ಕರೆ ನೀಡಿದೆ. ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಮೆರಿಕ ಆಯೋಗ’ (USCIRF)ದ ಭಾರತ ವಿಭಾಗ ವರದಿಯಲ್ಲಿ, ಸರ್ಕಾರಿ ಅಧಿಕಾರಿಗಳ ದ್ವೇಷ ಭಾಷಣ ಸೇರಿದಂತೆ, ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ವಿರುದ್ಧ ಹಿಂಸಾತ್ಮಕ ದಾಳಿಗಳಿಗೆ ನಡೆಸಲು ಸುಳ್ಳು ಮತ್ತು ತಪ್ಪು ಮಾಹಿತಿಯ ಬಳಕೆಯನ್ನು ವಿವರಿಸಿದೆ.ಭಾರತದಲ್ಲಿ ಅಲ್ಪಸಂಖ್ಯಾತರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
USCIRF ತನ್ನ ವಾರ್ಷಿಕ ವರದಿಯಲ್ಲಿ, ಭಾರತವು ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧ ವ್ಯವಸ್ಥಿತವಾಗಿ ಮತ್ತು ಅತಿರೇಕದ ಉಲ್ಲಂಘನೆಯಲ್ಲಿ ತೊಡಗಿದೆ ಎಂದು ಹೇಳಿದ್ದು, ಅದಕ್ಕಾಗಿ ಭಾರತವನ್ನು “ನಿರ್ದಿಷ್ಟ ಆತಂಕದ ದೇಶ” ಎಂದು ಹೆಸರಿಸುವಂತೆ ಅಮೆರಿಕ ಡಿಪಾರ್ಪೆಂಟ್ ಆಫ್ ಸ್ಟೇಟ್‌ಗೆ ಶಿಫಾರಸು ಮಾಡಿದೆ. ಆದರೆ ರಾಜ್ಯ ಇಲಾಖೆ ಇದುವರೆಗೆ ಶಿಫಾರಸುಗಳನ್ನು ಸ್ವೀಕರಿಸಿಲ್ಲ.
ಇದನ್ನೂಓದಿ: ‘ನಸ್ರಲ್ಲಾ, ನೆತನ್ಯಾಹು ಇಬ್ಬರೂ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು..’; ಲೆಬನಾನ್ ಮಂತ್ರಿ ಹೇಳಿಕೆ
“2024 ರ ಉದ್ದಕ್ಕೂ, ದುಷ್ಕರ್ಮಿಗಳ ಗುಂಪುಗಳಿಂದ ಜನರು ಸಾವಿಗೀಡಾದ, ಥಳಿಸಲ್ಪಟ್ಟ ಮತ್ತು ಹತ್ಯೆಯಾಗಿರುವ ಬಗ್ಗೆ ವರದಿ ಹೇಳಿದೆ. ಧಾರ್ಮಿಕ ಮುಖಂಡರನ್ನು ನಿರಂಕುಶವಾಗಿ ಬಂಧಿಸಲಾಗಿದ್ದು, ಅವರ ಮನೆ ಮತ್ತು ಪೂಜಾ ಸ್ಥಳಗಳನ್ನು ಕೆಡವಲಾಗಿದೆ” ಎಂಬುದನ್ನು ಈ ವರದಿಯು ಎತ್ತಿ ತೋರಿಸುತ್ತದೆ. ಈ ಘಟನೆಗಳು ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಯಾಗಿದೆ ಎಂದು USCIRF ಹೇಳಿದೆ.
ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಿಂದ ಆರಂಭಗೊಂಡು, ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ “ಹಸ್ತಕ್ಷೇಪ” ವನ್ನು ಉಲ್ಲೇಖಿಸಿ, USCIRF ಸದಸ್ಯರಿಗೆ ದೇಶಕ್ಕೆ ಭೇಟಿ ನೀಡಲು ಸತತವಾಗಿ ವೀಸಾಗಳನ್ನು ನಿರಾಕರಿಸಿದೆ ಎಂದು ಅದು ಹೇಳಿದೆ.ಭಾರತದಲ್ಲಿ ಅಲ್ಪಸಂಖ್ಯಾತರ
“ಈ ವರದಿಯು ಪೌರತ್ವ ತಿದ್ದುಪಡಿ ಕಾಯಿದೆ, ಏಕರೂಪದ ನಾಗರಿಕ ಸಂಹಿತೆ ಮತ್ತು ಹಲವಾರು ರಾಜ್ಯ ಮಟ್ಟದ ಮತಾಂತರ ವಿರೋಧಿ ಮತ್ತು ಗೋಹತ್ಯೆ ಕಾನೂನುಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಮತ್ತು ಅವರ ಹಕ್ಕು ನಿರಾಕರಣೆ ಮಾಡಲು ಭಾರತದ ಕಾನೂನು ಚೌಕಟ್ಟಿನ ಬದಲಾವಣೆಗಳನ್ನು ಮತ್ತು ಜಾರಿಗೊಳಿಸುವಿಕೆಯನ್ನು ವಿವರಿಸುತ್ತದೆ” ಎಂದು USCIRF ಹೇಳಿದೆ.
ವಿಡಿಯೊ ನೋಡಿ: ‘ಗಾಂಧೀಜಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ’ ಪುಸ್ತಕ ಬಿಡುಗಡೆ: ದಿನೇಶ್ ಗುಂಡೂರಾವ್ ಅವರ ಮಾತು


