ಮೂರು ಹಂತಗಳಲ್ಲಿ ನಡೆದ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹೊರ ಹೊಮ್ಮಿದೆ. ರಾಜ್ಯದ ಈ ಹಿಂದಿನ ಆಡಳಿತರೂಢ ಪಕ್ಷವಾದ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳಿಗೆ ಹಿನ್ನಡೆಯಾಗಿದೆ. Jammu and Kashmir Assembly Elections 2024 ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಈ ವರೆಗೆ ಟ್ರೆಂಡ್ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ 42 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮೈತ್ರಿ ಪಕ್ಷವಾದ ಕಾಂಗ್ರೆಸ್ 8 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಮೈತ್ರಿಯ ಮತ್ತೊಂದು ಪಕ್ಷವಾದ ಸಿಪಿಐ(ಎಂ) ಕೂಡಾ ತನಗೆ ಸಿಕ್ಕ 1 ಕ್ಷೇತ್ರದಲ್ಲಿ ಅನಾಯಸವಾಗಿ ಮುನ್ನಡೆ ಕಾಯ್ದುಕೊಂಡಿದೆ.
ವಿಡಿಯೊನೋಡಿ: ಜಾತಿ ಗಣತಿ ವರದಿ ಜಾರಿ | ಅ.18ರಂದು ಸಂಪುಟ ಸಭೆಯಲ್ಲಿ ತೀರ್ಮಾನ : ಸಿಎಂ ಸಿದ್ದರಾಮಯ್ಯ
90 ಕ್ಷೇತ್ರಗಳಿರುವ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಸಿಪಿಐ(ಎಂ) ಮೈತ್ರಿಯು ಒಟ್ಟು 51 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 30 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ರಾಜ್ಯದ ಮಾಜಿ ಆಡಳಿತರೂಢ ಪಕ್ಷವಾದ ಪಿಡಿಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಪಕ್ಷೇತರರು 6 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. Jammu and Kashmir Assembly
ನ್ಯಾಷನಲ್ ಕಾನ್ಫರೆನ್ಸ್ 42
BJP 30
ಕಾಂಗ್ರೆಸ್ 08
ಪಕ್ಷೇತರ 06
PDP 03
ಸಿಪಿಐ(ಎಂ) 01
ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಆರ್ಟಿಕಲ್ 370 ರದ್ದತಿ ಮತ್ತು ಹಿಂದಿನ ರಾಜ್ಯದ ವಿಭಜನೆಯ ನಂತರ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಪರಿಶಿಷ್ಟ ಪಂಗಡಕ್ಕೆ ಮತ್ತು 7 ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಕೊನೆಯ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿದ್ದವು. ಈ ವೇಳೆ ಪಿಡಿಪಿ ಮತ್ತು ಬಿಜೆಪಿ ಸಮ್ಮಿಶ್ರ ಆಡಳಿತ ನಡೆಸಿದ್ದವು. ಅದರ ನಂತರ ಸರ್ಕಾರ ವಿಸರ್ಜನೆಯಾಗಿ ರಾಜ್ಯಪಾಲರ ಆಡಳಿತ ರಾಜ್ಯದಲ್ಲಿ ಹೇರಲ್ಪಟ್ಟಿದ್ದವು. ತರುವಾಯ, 2019 ರಲ್ಲಿ ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ, ಕೇಂದ್ರ ಸರ್ಕಾರವು ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ರಚಿಸಿತು.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


