ಖ್ಯಾತ ಕುಸ್ತಿಪಟು, ಹರಿಯಾಣ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಪೋಗಟ್ (Vinesh Phogat) ಅವರು ಜುಲಾನ ವಿಧಾನಸಭಾ ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದಾರೆ. ತಮ್ಮ ನೇರ ಪ್ರತಿಸ್ಪರ್ಧಿ ಜೆಜೆಪಿಯ ಅಮರ್‌ಜಿತ್ ಧಂಡಾ ಅವರ ವಿರುದ್ಧ ವಿನೇಶ್ ಅವರು ಸುಮಾರು 5 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಅವರು ಜಯಭೇರಿ ಭಾರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭಾರತೀಯ ಮಹಿಳಾ ಕುಸ್ತಿಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿದ್ದ ಬಿಜೆಪಿಯ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ವಿನೇಶ್ ಅವರು ಕಳೆದ ಒಲಿಂಪಿಕ್ಸ್ ನಂತರ ಕಾಂಗ್ರೆಸ್ ಸೇರಿದ್ದರು. 2019 ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ, JJP ಯ ಅಮರಜೀತ್ ಧಂಡಾ ಈ ಕ್ಷೇತ್ರದಲ್ಲಿ ಬಿಜೆಪಿಯ ಪರ್ಮಿಂದರ್ ಸಿಂಗ್ ಧುಲ್ ಅವರನ್ನು 24,193 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಈ ಕ್ಷೇತ್ರವನ್ನು ವಿನೇಶ್ ಅವರು ವಶಕ್ಕೆ ಪಡೆದುಕೊಂಡಿದ್ದಾರೆ.Vinesh Phogat
90 ಕ್ಷೇತ್ರಗಳಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಘಾತವುಂಟಾಗಿದ್ದು, ಆಡಳಿತರೂಢ ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದಲ್ಲಿ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.Haryana Assembly Elections
ಹರಿಯಾಣದಲ್ಲಿ ಈ ವರೆಗಿನ ಟ್ರೆಂಡ್‌ನಂತೆ ಬಿಜೆಪಿ 51 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ 34 ಕ್ಷೇತ್ರದಗಳಲ್ಲಿ ಮುನ್ನಡೆಯಲ್ಲಿದೆ. ಅಲ್ಲದೆ, ಪಕ್ಷೇತರರು 3 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಐಎನ್‌ಎಲ್‌ಡಿ ಮತ್ತು ಬಿಎಸ್‌ಪಿ ಕ್ರಮವಾಗಿ ಒಂದೊಂದು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಬಿಜೆಪಿ 51
ಕಾಂಗ್ರೆಸ್ 34
ಪಕ್ಷೇತರ 03
ಐಎನ್‌ಎಲ್‌ಡಿ 01
ಬಿಎಸ್‌ಪಿ 01
ಇದನ್ನೂಓದಿ: FACT CHECK : ಶಿವಲಿಂಗ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು
ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ 17 ಕ್ಷೇತ್ರಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿದ್ದು, ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 3, 2024 ರಂದು ಕೊನೆಗೊಳ್ಳುತ್ತದೆ.Haryana Assembly Elections
ರಾಜ್ಯದಲ್ಲಿ ಬಿಜೆಪಿ 2014 ಮತ್ತು 2019 ರಲ್ಲಿ ಸತತ ಚುನಾವಣೆಗಳನ್ನು ಗೆದ್ದು, ಎರಡೂ ಸಂದರ್ಭಗಳಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 2.04 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು.
ಪ್ರಮುಖ ಚುನಾವಣಾ ವಿಷಯಗಳು ಅಗ್ನಿಪಥ್ ಯೋಜನೆ, ಎಂಎಸ್‌ಪಿಗೆ ಕಾನೂನು ಖಾತರಿಗಾಗಿ ಒತ್ತಾಯಿಸಿ ರೈತರ ಪ್ರತಿಭಟನೆ ಮತ್ತು ರಾಜ್ಯದ ಕುಸ್ತಿಪಟುಗಳಿಂದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬಿಜೆಪಿ ವಿರುದ್ಧ ಹೊರಿಸಲಾಗಿತ್ತು. ಆದರೆ ಇವೆಲ್ಲವನ್ನು ರಾಜ್ಯದ ಜನತೆ ಪರಿಗಣಿಸದೆ, ಜಾತಿ ಸಂಯೋಜನೆಯೆ ಚುನಾವಣೆಯ ಪ್ರಮುಖ ವಿಷಯ ಎಂಬುವುದು ಫಲಿತಾಂಶದಲ್ಲಿ ತಿಳಿದುಬಂದಿದೆ.
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


