ಐಟಿ ಕಂಪನಿಗಳು, ಕಾರ್ಖಾನೆಗಳು ಮತ್ತು ರಾಜ್ಯದ ಎಲ್ಲ ಸಂಸ್ಥೆಗಳು ನವೆಂಬರ್ 1 ರಂದು ಕನ್ನಡ ಧ್ವಜಾರೋಹಣ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಘೋಷಿಸಿದ್ದಾರೆ.
“ನವೆಂಬರ್ 1 ರಂದು ಎಲ್ಲ ಸಂಸ್ಥೆಗಳ ಮುಂದೆ ಕನ್ನಡ ಧ್ವಜಾರೋಹಣ ಮಾಡಬೇಕು. ಐಟಿ, ಕಾರ್ಖಾನೆಗಳು ಮತ್ತು ಎಲ್ಲ ಸಂಸ್ಥೆಗಳಿಗೆ ಬೆಂಗಳೂರು ಉಸ್ತುವಾರಿ ಸಚಿವನಾಗಿ ಇಂದು ನಾನು ಮನವಿ ಮಾಡುತ್ತಿದ್ದೇನೆ” ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಹೆಮ್ಮೆಯನ್ನು ಬೆಳೆಸುವ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಬೆಂಗಳೂರಿನಲ್ಲಿ ಆಚರಿಸುವ ಮಹತ್ವವನ್ನು ಶಿವಕುಮಾರ್ ಒತ್ತಿ ಹೇಳಿದರು.
ಕನ್ನಡ ಭಾಷೆಯನ್ನು ಗೌರವಿಸುವ ಮತ್ತು ಬೆಳೆಸುವ ಅಗತ್ಯವನ್ನು ಹೇಳಿದ ಅವರು, ಕಾನೂನು ಬಾಹಿರ ಕ್ರಮ ಕೈಗೊಳ್ಳದಂತೆ ಕನ್ನಡ ಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು.
“ನವೆಂಬರ್ 1 ಅನ್ನು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ, ಇದು ರಾಜ್ಯ ರಚನೆಯ ಸಂಕೇತವಾಗಿದೆ” ಎಂದರು.
ಸೈನ್‌ಬೋರ್ಡ್‌ಗಳಲ್ಲಿ ಶೇ.60 ಕನ್ನಡ ಬಳಕೆ
ಈ ವರ್ಷದ ಫೆಬ್ರವರಿಯಲ್ಲಿ, ಕರ್ನಾಟಕ ವಿಧಾನಸಭೆಯು ರಾಜ್ಯಾದ್ಯಂತ ವ್ಯಾಪಾರ ಮತ್ತು ಸಂಸ್ಥೆಗಳ ಸೈನ್‌ಬೋರ್ಡ್‌ಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಆದೇಶ ಪಾಲಿಸದಿರುವ ಸಂಸ್ಥೆಗಳ ಪರವಾನಗಿಗಳನ್ನು ರದ್ದುಗೊಳಿಸುತ್ತದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಚ್ಚರಿಕೆ ನೀಡಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ 2022ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವ 2024ರ ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸಲಾಗಿದೆ.
ಇದನ್ನೂ ಓದಿ; ಕೋವಿಡ್-19 ವಂಚನೆ; ಡಿಕೆಶಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ಸಿಎಂ ಆದೇಶ


