ತನ್ನ ಮಗಳ ಪ್ರೇಮ ಸಂಬಂಧದಿಂದ ಅಸಮಾಧಾನಗೊಂಡಿದ್ದ ತಾಯಿಯೊಬ್ಬರು, ಮಗಳನ್ನು ಕೊಲ್ಲಲು ಬಾಡಿಗೆ ಕೊಲೆಗಾರನನ್ನು ನೇಮಿಸಿದ್ದು, ಕೊನೆಗೆ ತಾಯಿ ಆತನಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿಪರ್ಯಾಸವೇನೆಂದರೆ, ತನ್ನ ಮಗಳನ್ನು ಕೊಲ್ಲಲು ತಾಯಿ ಸುಪಾರಿ ನೀಡಿದ್ದ ವ್ಯಕ್ತಿಯೆ ಮಗಳ ಪ್ರಿಯಕರನಾಗಿದ್ದ ಎಂಬುವುದು ಅವರಿಗೆ ತಿಳಿದಿರಲಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಮಗಳನ್ನು ಕೊಲ್ಲಲು ನೇಮಿಸಿದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಕ್ಟೋಬರ್ 6 ರಂದು ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಜಸ್ರತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿ ಗದ್ದೆಯಲ್ಲಿ ಅಲ್ಕಾ ಅವರ ಮೃತದೇಹ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿತ್ತು. ಮಗಳನ್ನು ಕೊಲ್ಲಲು ನೇಮಿಸಿದ
ಕಳೆದ ವಾರ, ಅಕ್ಟೋಬರ್ 5 ರಂದು, ಅಲ್ಕಾ ದೇವಿ ಅವರು ತಮ್ಮ ಮಗಳ ಪ್ರೇಮ ಪ್ರಕರಣದ ವಿಚಾರದ ಬಗ್ಗೆ ಮಾತನಾಡಲು ಇಟಾಹ್‌ಗೆ ಹೋಗಿದ್ದರು. ಸಂಜೆಯವರೆಗೂ ಅವರು ವಾಪಸ್ ಬಾರದೆ ಇದ್ದಾಗ, ಅವರ ಪತಿ ರಮಾಕಾಂತ್ ಅವರು ಅಲ್ಕಾ ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಎಷ್ಟು ಹುಡುಕಿದರೂ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು.
ಭಾನುವಾರ ಸಂಜೆಯ ನಂತರ ಮೃತ ದೇಹವೊಂದನ್ನು ಗುರುತಿಸಲು ಪೊಲೀಸರು ಕರೆಸಿದ್ದು, ಅಲ್ಲಿ ಅವರು ತನ್ನ ಪತ್ನಿ ಅಲ್ಕಾ ಅವರ ಮೃತದೇಹವನ್ನು ಗುರುತಿಸಿದ್ದರು. ನಂತರ, ಅಲ್ಕಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಪತ್ನಿಯ ಸಾವಿನ ಬಗ್ಗೆ ರಮಾಕಾಂತ್ ತನ್ನ ಗ್ರಾಮದ ಅಖಿಲೇಶ್ ಮತ್ತು ಅನಿಕೇತ್ ಎಂಬ ಇಬ್ಬರ ವಿರುದ್ಧ ಜಸ್ರತ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಇಬ್ಬರು ಹಿಂದೆ ಅವರ ಅಪ್ತಾಪ್ತ ಮಗಳನ್ನು ಆಮಿಷವೊಡ್ಡಿ ಅಪಹರಿಸಿದ್ದರು ಎಂಬ ಆರೋಪವಿತ್ತು. ಹಾಗಾಗಿ ಪೊಲೀಸರು ಅಖಿಲೇಶ್ ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಜೊತೆಗೆ ಅಪ್ರಾಪ್ತ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿ ಕುಟುಂಬಕ್ಕೆ ವರ್ಗಾಯಿಸಲಾಗಿತ್ತು.
ಮೇಲಿನ ಘಟನೆಯ ನಂತರ ಹೆದರಿದ್ದ ಅಲ್ಕಾ ದೇವಿ ಅವರು ತನ್ನ ಮಗಳನ್ನು ಫರೂಕಾಬಾದ್ ಜಿಲ್ಲೆಯ ಸಿಕಂದರಪುರ ಖಾಸ್ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದ್ದರು. ಇಲ್ಲಿ ಬಾಲಕಿ 38 ವರ್ಷದ ಸುಭಾಷ್ ಜೊತೆ ಸಂಬಂಧ ಬೆಳೆಸಿದ್ದರು. ಸುಭಾಷ್ ಈ ಹಿಂದೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಅಪರಾಧಿಯಾಗಿದ್ದ. ಈತ ಬಾಲಕಿಗೆ ಮಾತನಾಡಲು ಮೊಬೈಲ್ ಫೋನ್ ಖರೀದಿಸಿಕೊಟ್ಟಿದ್ದ.
ಇದನ್ನೂ ಓದಿ: ಉತ್ತರ ಪ್ರದೇಶ | ಕೋಮು ಪ್ರಚೋದಕ ಘೋಷಣೆಗಳನ್ನು ಕೂಗಿ ರಸ್ತೆ ತಡೆ ಆರೋಪ : 1000 ಮಂದಿ ಅಪರಿಚಿತರ ವಿರುದ್ದ ಎಫ್‌ಐಆರ್
ಆದರೆ ಇದನ್ನು ಅರಿಯದ ಅಲ್ಕಾ ಮಗಳ ಪ್ರೇಮ ಪ್ರಕರಣದಿಂದ ಬೇಸತ್ತು ಬೇಸರಗೊಂಡಿದ್ದರು. ಹೀಗಾಗಿ ಮಗಳನ್ನು ಕೊಲ್ಲಲು ನಿರ್ಧರಿಸಿ, ಕೊಲೆ ಮಾಡಲು ಸುಭಾಷ್‌ಗೆ ₹ 50,000 ನೀಡಿದ್ದಾರೆ. ಆದರೆ, ತನ್ನ ಮಗಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ವ್ಯಕ್ತಿ ಸುಭಾಷ್ ಎಂಬುವುದು ತಾಯಿಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ತಾಯಿಯ ಯೋಜನೆಯನ್ನು ಸುಭಾಷ್ ಹುಡುಗಿಗೆ ಬಹಿರಂಗಪಡಿಸಿದ್ದು, ಈ ವೇಳೆ ಚುರುಕಾದ ಹುಡುಗಿ ತನ್ನ ತಾಯಿಯನ್ನು ಕೊಂದರೆ ಮದುವೆಯಾಗುವುದಾಗಿ ಹೇಳಿದ್ದಾರೆ. ನಂತರ ಒಟ್ಟಾಗಿ, ಮೂಲಕ ತಂತ್ರ ರೂಪಿಸಿ, ಕೊಲೆ ನಡೆಸಿದ ಹಾಗೆ ನಟಿಸಿ ಅಲ್ಕಾ ದೇವಿಯನ್ನು ಮೂರ್ಖರನ್ನಾಗಿಸಿದ್ದರು.
ಆದರೆ ಅಲ್ಕಾ ದೇವಿ ಭರವಸೆ ನೀಡಿದ ₹50,000 ಪಾವತಿಸದಿದ್ದಾಗ, ಸುಭಾಷ್ ಅವರನ್ನು ಆಗ್ರಾಕ್ಕೆ ಕರೆದು ಅವರ ಮಗಳ ಜೊತೆಗೆ ಭೇಟಿ ಮಾಡಿಸಿದ್ದಾರೆ. ಮೂವರು ಆಗ್ರಾದಿಂದ ಇಟಾಹ್‌ಗೆ ಪ್ರಯಾಣಿಸಿ ರಾಮಲೀಲಾ ಜಾತ್ರೆಗೆ ಹೋಗಿದ್ದಾರೆ. ಅಲ್ಲಿಂದ ಅಲಿಗಂಜ್‌ಗಿಂತ ಮೊದಲು ಇಳಿದು ಅಲ್ಕಾ ಅವರನ್ನು ನಾಗ್ಲಾ ಚಂದನ್‌ಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಒಂದು ಪಟಾಕಿ ಕೊಡೋ ಯೋಗ್ಯತೆ ಇಲ್ಲ, ಆನೆ ಓಡಿಸ್ತೀರೇನ್ರೀ ನೀವು?: ಕಳ್ಳಬೇಟೆ ನಿಗ್ರಹ ಶಿಬಿರಕ್ಕೆ ನುಗ್ಗಿದ ಸ್ಥಳೀಯರು


