ಹೈದರಾಬಾದ್‌ನಲ್ಲಿ ಮುಸ್ಲಿಮರು ದುರ್ಗಾ ಮೂರ್ತಿಯನ್ನು ಧ್ವಸಂಗೊಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
ವಿಡಿಯೋದಲ್ಲಿ ದುರ್ಗಾ ಮೂರ್ತಿಯ ಕೈ ಸೇರಿದಂತೆ ಕೆಲ ಭಾಗಗಳು ಮುರಿದಿರುವುದು ಮತ್ತು ಸುತ್ತಮುತ್ತ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ನೋಡಬಹುದು.
ಅರುಣ್ ಕುಮಾರ್ ಹಿಂದೂ (@arukumrhin11669)ಎಂಬ ಎಕ್ಸ್ ಬಳಕೆದಾರ ಅಕ್ಟೋಬರ್ 12ರಂದು ವಿಡಿಯೋ ಹಂಚಿಕೊಂಡು ” ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮ ನಾಶ ನಿಶ್ಚಿತ” ಎಂದು ಬರೆದುಕೊಂಡಿದ್ದರು.
ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮ ನಾಶ ನಿಶ್ಚಿತ pic.twitter.com/hMzeGvcpbh
— ಅರುಣ್ ಕುಮಾರ್ ಹಿಂದೂ 🚩 (@arukumrhin11669) October 12, 2024
ಶ್ರೇಯಾ ಸನಾತನಿ (@Shreya_Sanatani) ಎಂಬವರು ಅಕ್ಟೋಬರ್ 12ರಂದು ವಿಡಿಯೋ ಹಂಚಿಕೊಂಡು ” ಇದು ಎಲ್ಲೋ ದೂರದ ಪಾಕಿಸ್ತಾನ ಮತ್ತು ಪಕ್ಕದ ಬಾಂಗ್ಲಾದೇಶದಲ್ಲಿ ನಡೆದಿರುವ ಘಟನೆ ಅಲ್ಲವೇ ಅಲ್ಲ. ನಮ್ಮ ಪಕ್ಕದ ಕಾಂಗ್ರೆಸ್ ಆಡಳಿತದ ತೆಲಂಗಾಣದ ಹೈದರಾಬಾದ್ ನಗರದಲ್ಲಿ…ದುರ್ಗಾ ಮಾತೆಯನ್ನ ಧ್ವಂಸ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದರು.
ಇದು ಎಲ್ಲೋ ದೂರದ ಪಾಕಿಸ್ತಾನ ಮತ್ತು ಪಕ್ಕದ ಬಾಂಗ್ಲಾದೇಶದಲ್ಲಿ ನಡೆದಿರುವ ಘಟನೆ ಅಲ್ಲವೇ ಅಲ್ಲ.
ನಮ್ಮ ಪಕ್ಕದ ಕಾಂಗ್ರೆಸ್ ಆಡಳಿತದ ತೆಲಂಗಾಣದ ಹೈದರಾಬಾದ್ ನಗರದಲ್ಲಿ…ದುರ್ಗಾ ಮಾತೆಯನ್ನ ಧ್ವಂಸ ಮಾಡಿದ್ದಾರೆ… pic.twitter.com/KwaWhJJ0p5— ಶ್ರೇಯಾ🚩🚩🚩Shreya🌹❤️🇮🇳श्रेया 🚩🚩🚩 (@Shreya_Sanatani) October 12, 2024
ಸುಳ್ಳು, ಕೋಮು ದ್ವೇಷದ ಸುದ್ದಿಗಳನ್ನು ಹಬ್ಬಿಸುವುದರಲ್ಲಿ ಕುಖ್ಯಾತಿ ಪಡೆದಿರುವ ಬಲಪಂಥೀಯ ಎಕ್ಸ್ ಬಳಕೆದಾರ ರೌಶನ್ ಸಿನ್ಹಾ ಅಥವಾ ಮಿ.ಸಿನ್ಹಾ (@MrSinha_) ಅಕ್ಟೋಬರ್ 11ರಂದು ವಿಡಿಯೋ ಹಂಚಿಕೊಂಡು “ಅತಿರೇಕ: ಹೈದರಾಬಾದ್‌ನಲ್ಲಿ ಮಾತೆ ದುರ್ಗೆಯ ಮೂರ್ತಿ ಧ್ವಂಸಗೊಳಿಸಲಾಗಿದೆ. ಇದು ಪಾಕಿಸ್ತಾನದ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತ ಭಾರತದ ಹೈದರಾಬಾದ್” ಎಂದು ಬರೆದುಕೊಂಡಿದ್ದರು.

ಹಾಗಾದರೆ, ಮುಸ್ಲಿಮರು ದುರ್ಗಾ ಮೂರ್ತಿಯನ್ನು ಧ್ವಂಸಗೊಳಿಸಿರುವುದು ನಿಜಾನಾ? ಎಂದು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ, ಹೈದರಾಬಾದ್‌ನ ನಾಂಪಲ್ಲಿಯ ಎಕ್ಸಿಬಿಷನ್ ಗ್ರೌಂಡ್ (ವಸ್ತು ಪ್ರದರ್ಶನ ಮೈದಾನ) ನಲ್ಲಿ ಸ್ಥಾಪಿಸಿದ್ದ ದುರ್ಗಾ ಮೂರ್ತಿಗೆ ಹಾನಿ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಈ ಕುರಿತು ಅಕ್ಟೋಬರ್ 11ರಂದು ವರದಿ ಪ್ರಕಟಿಸಿದ್ದ ತೆಲಂಗಾಣ ಟುಡೇ ಸುದ್ದಿ ವೆಬ್‌ಸೈಟ್ “ಹೈದರಾಬಾದ್‌ನ ನಾಂಪಲ್ಲಿಯ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ದುರ್ಗಾ ಮೂರ್ತಿಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಬೇಗಂ ಬಝಾರ್ ಪೊಲೀಸರು ಬೇಧಿಸಿದ್ದು, ಆರೋಪಿ ನಾಗರ್‌ಕರ್ನೂಲ್ ಜಿಲ್ಲೆಯ ಕೃಷ್ಣಯ್ಯ ಗೌಡ್ ಎಂಬಾತನನ್ನು ಬಂಧಿಸಿದ್ದಾರೆ” ಎಂದು ತಿಳಿಸಿತ್ತು.
“ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯ ಡಿಸಿಪಿ ಅಕ್ಷಾಂಶ್ ಯಾದವ್, ಕೃಷ್ಣಯ್ಯಗೌಡ್ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಮತ್ತು ಅವರು ಹಸಿದಿದ್ದರು. ಹಾಗಾಗಿ, ಆಹಾರಕ್ಕಾಗಿ ದುರ್ಗಾ ಮೂರ್ತಿಯ ಬಳಿ ದಾಂಧಲೆ ನಡೆಸಿದ್ದಾರೆ” ಎಂದು ವಿವರಿಸಿದ್ದಾಗಿ ಹೇಳಿತ್ತು.

‘ಸಿಯಾಸತ್ ಡೈಲಿ‘ ಮತ್ತೊ ‘ಇಂಡಿಯಾ ಟುಡೇ‘ ಅಕ್ಟೋಬರ್ 12ರಂದು ಪ್ರಕಟಿಸಿದ್ದ ವರದಿಯಲ್ಲೂ ಇದೇ ವಿಷಯವನ್ನು ಹೇಳಲಾಗಿತ್ತು. ಆದ್ದರಿಂದ, ದುರ್ಗಾ ಮೂರ್ತಿಯನ್ನು ಮುಸ್ಲಿಮರು ಧ್ವಂಸಗೊಳಿಸಿದ್ದಾರೆ ಎಂಬುವುದು ಸುಳ್ಳು
ಇದನ್ನೂ ಓದಿ : FACT CHECK | ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್, ಬಿಜೆಪಿಯನ್ನು ಹೊಗಳಿದ್ದಾರೆ ಎಂಬುವುದು ಸುಳ್ಳು


