ಸಿಎಎ ವಿರೋಧಿ ಆಂದೋಲನದ ವೇಳೆ ನಡೆದ ಹಿಂಸಾಚಾರದಲ್ಲಿ ಅಸ್ಸಾಂನ ರೈಜೋರ್ ದಳ ಪಕ್ಷದ ಶಾಸಕ ಅಖಿಲ್ ಗೊಗೊಯ್ ಮತ್ತು ಅವರ ಮೂವರು ಸಹಚರರ ಕೈವಾಡವಿದೆ ಎಂದು ಅವರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯವು ಕಠಿಣ ಯುಎಪಿಎ ಮತ್ತು ಐಪಿಸಿಯ ಸೆಕ್ಷನ್‌ಗಳ ಅಡಿಯಲ್ಲಿ ಮಂಗಳವಾರ ಆರೋಪಗಳನ್ನು ದಾಖಲಿಸಿದೆ. ಸಿಎಎ ವಿರೋಧಿ ಪ್ರತಿಭಟನೆ
NIA ವಿಶೇಷ ನ್ಯಾಯಾಧೀಶ ಎಸ್.ಕೆ. ಶರ್ಮಾ ಅವರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 18 (ಪಿತೂರಿ) ಮತ್ತು IPC ಸೆಕ್ಷನ್‌ಗಳಾದ 120B (ಅಪರಾಧದ ಪಿತೂರಿ), 153A (ಹಗೆತನದ ಪ್ರಚಾರ), ಮತ್ತು 153B (ರಾಷ್ಟ್ರೀಯ ಏಕೀಕರಣಕ್ಕೆ ಅಪಾಯ) ಅಡಿಯಲ್ಲಿ ಗೊಗೋಯ್ ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ ಎಂದು ಅವರ ವಕೀಲ ಸಾಂತನು ಬೋರ್ತಕೂರ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮತ್ತೊಂದೆಡೆ, ಅಖಿಲ್ ಅವರ ಸಹಚರರಾದ ಧೈಜ್ಯಾ ಕೊನ್ವರ್, ಬಿಟ್ಟು ಸೋನೊವಾಲ್ ಮತ್ತು ಮನಶ್ ಕೊನ್ವರ್ ವಿರುದ್ಧ ಯುಎಪಿಎ ಸೆಕ್ಷನ್ 18 ಮತ್ತು ಐಪಿಸಿಯ 120 ಬಿ ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
NIA ತನ್ನ ಚಾರ್ಜ್ ಶೀಟ್‌ನಲ್ಲಿ ಅಖಿಲ್ ವಿರುದ್ಧ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ್ದಾರೆ ಮತ್ತು ದೇಶದ್ರೋಹ ಮಾಡಿದ್ದಾರೆ ಎಂದು UAPA ಸೆಕ್ಷನ್ 39 ಮತ್ತು IPC ಸೆಕ್ಷನ್ 124A (ದೇಶದ್ರೋಹ) ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿದೆ. ಸಿಎಎ ವಿರೋಧಿ ಪ್ರತಿಭಟನೆ
ಇದಕ್ಕೆ ಪ್ರತಿಕ್ರಿಯಿಸಿದ ಗೊಗೊಯ್, “ನಾವು ಜನರೊಂದಿಗೆ ಇದ್ದೇವೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಈ ಸರ್ಕಾರವು ನಮ್ಮನ್ನು ಜೈಲಿನೊಳಗೆ ಇರಿಸಲು ಬಯಸುತ್ತದೆ. ಫ್ಯಾಸಿಸ್ಟ್ ಮತ್ತು ಕೋಮುವಾದಿ ಸರ್ಕಾರದ ವಿರುದ್ಧದ ಹೋರಾಟವು ತುಂಬಾ ಕಷ್ಟಕರವಾಗಿದ್ದು, ದುಬಾರಿ ವ್ಯವಹಾರವಾಗಿದೆ.” ಎಂದು ಹೇಳಿದ್ದಾರೆ.
ನಾವು ನಾಲ್ವರೂ ನಮ್ಮ ವಿರುದ್ಧ ಆರೋಪಗಳನ್ನು ರೂಪಿಸುವುದರ ವಿರುದ್ಧ ಗುವಾಹಟಿ ಹೈಕೋರ್ಟ್‌ಗೆ ಮೊರೆ ಹೋಗಲಿದ್ದೇವೆ ಎಂದು ಅಖಿಲ್ ಗೊಗೋಯ್ ಅವರು ಹೇಳಿದ್ದಾರೆ.
ಡಿಸೆಂಬರ್ 2019 ರಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ವಿರುದ್ಧ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಅಖಿಲ್ ಗೊಗೊಯ್ ಮತ್ತು ಅವರ ಮೂವರು ಸಹಚರರ ಪಾತ್ರ ಇದೆ ಎಂದು ಎನ್‌ಐಎ 2 ಪ್ರಕರಣಗಳನ್ನು ದಾಖಲಿಸಿದ್ದು, ಅವರ ವಿರುದ್ಧ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಬಹ್ರೈಚ್ ಪ್ರಕರಣ: ಬುಲ್ಡೋಜರ್ ಕ್ರಮದ ವಿರುದ್ಧ ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪರೋಕ್ಷ ಎಚ್ಚರಿಕೆ
ಬಹ್ರೈಚ್ ಪ್ರಕರಣ: ಬುಲ್ಡೋಜರ್ ಕ್ರಮದ ವಿರುದ್ಧ ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪರೋಕ್ಷ ಎಚ್ಚರಿಕೆ


