ಸೆಬಿ ಅಧ್ಯಕ್ಷೆ ಮಧಬಿ ಪುರಿ ಬುಚ್ ಅವರು ಗುರುವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಹಾಜರಾಗಲಿದ್ದಾರೆ ಎಂದು ವರದಿಯಾಗಿದೆ. ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು ಕೈಗೊಂಡಿದ್ದ ಈ ಕ್ರಮ ರಾಜಕೀಯ ಪ್ರೇರಿತ ಎಂದು ಬಿಜೆಪಿಯ ಹಿರಿಯ ಸದಸ್ಯರು ಆರೋಪಿಸಿದ್ದು, ಸಭೆಯಯಲ್ಲಿ ಬಿರುಸಿನ ಚರ್ಚೆ ನಡೆಯುವ ಬಗ್ಗೆ ನಿರೀಕ್ಷೆಯಿದೆ. ಸಂಸದೀಯ ಸಮಿತಿ
ಹಣಕಾಸು ಸಚಿವಾಲಯ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ದ ಪ್ರತಿನಿಧಿಗಳ ಮೌಖಿಕ ಪುರಾವೆಗಳ ಬಗ್ಗೆ ಸಭೆಯ ಕಾರ್ಯಸೂಚಿಯು ಒಳಗೊಂಡಿದೆ. “ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾದ ನಿಯಂತ್ರಕ ಸಂಸ್ಥೆಗಳ ಕಾರ್ಯಕ್ಷಮತೆಯ ಪರಿಶೀಲನೆ” ನಡೆಸುವುದು ಸಮಿತಿಯ ನಿರ್ಧಾರವಾದೆ. ಸಂಸದೀಯ ಸಮಿತಿ
ಕಾಯ್ದೆಯಗಳ ಮೂಲಕ ಸ್ಥಾಪಿಸಲಾದ ನಿಯಂತ್ರಕ ಸಂಸ್ಥೆಗಳ ಕಾರ್ಯಕ್ಷಮತೆಯ ಪರಿಶೀಲನೆಯನ್ನು ತನ್ನ ಕಾರ್ಯಸೂಚಿಯಲ್ಲಿ ಸೇರಿಸಿರುವ ಸಮಿತಿಯ ನಿರ್ಧಾರದ ವಿರುದ್ಧ ಯಾವುದೆ ಪ್ರತಿಭಟನೆ ದಾಖಲಾಗದಿದ್ದರೂ, ಬುಚ್ ಅವರಿಗೆ ಸಮನ್ಸ್ ನೀಡಿರುವ ಸಮಿತಿಯ ಅಧ್ಯಕ್ಷ ವೇಣುಗೋಪಾಲ್ ಅವರ ನಿರ್ಧಾರ ಬಿಜೆಪಿಯನ್ನು ಕೆರಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಮೆರಿಕಾದ ಸಂಸ್ಥೆ ಹಿಂಡೆನ್‌ಬರ್ಗ್ ವರದಿಯ ನಂತರ ಸೆಬಿ ಮುಖ್ಯಸ್ಥೆ ಬುಚ್ ವಿರುದ್ಧ ನಿರಂತರ ಆರೋಪಗಳನ್ನು ಮಾಡಲಾಗುತ್ತಿದೆ. ಸೆಬಿ ಮುಖ್ಯಸ್ಥೆ ಬುಚ್ ಅವರು ಅದಾನಿ ಅವರ ಕಂಪೆನಿಗೆ ಸಹಾಯ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದ್ದು, ಇದಕ್ಕಾಗಿ ಬುಚ್ ಅವರಿಗೆ ಅದಾನಿ ಶೇರ್‌ಗಳನ್ನು ನೀಡಿತ್ತು ಎಂದು ಆರೋಪಿಸಲಾಗಿದೆ.
ಈ ನಡುವೆ ಸಮಿತಿಯ ಸದಸ್ಯ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ವೇಣುಗೋಪಾಲ್ ವಿರುದ್ಧ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕೇಂದ್ರ ಸರ್ಕಾರವನ್ನು ದೂಷಿಸಲು ಮತ್ತು ದೇಶದ ಆರ್ಥಿಕ ರಚನೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಅಸ್ತಿತ್ವದಲ್ಲಿಲ್ಲದ ವಿಷಯಗಳನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಗುರುವಾರದ ಸಮಿತಿಯ ಕಾರ್ಯಸೂಚಿಯಲ್ಲಿ ಬುಚ್ ನೇತೃತ್ವದ ಸೆಬಿ ಸೇರಿದಂತೆ, ಸಂವಹನ ಸಚಿವಾಲಯ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಪ್ರತಿನಿಧಿಗಳಿಂದ ಮೌಖಿಕ ಸಾಕ್ಷ್ಯವನ್ನು ಪಡೆಯುವುದು ಸಹ ಒಳಗೊಂಡಿದೆ.
ಇದನ್ನೂ ಓದಿ: ‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್
‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್


