ಬಿಜೆಪಿ ನಾಯಕ ರವಿ ನೇಗಿ ದೆಹಲಿಯಲ್ಲಿ ಅಂಗಡಿ ನಡೆಸುತ್ತಿರುವ ಮುಸ್ಲಿಂ ವ್ಯಕ್ತಿಗೆ ಕಿರುಕುಳ ನೀಡುತ್ತಿರುವ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ತಿಂಗಳ ಆರಂಭದಲ್ಲಿ ಕೂಡಾ ಅವರು ಅಂಗಡಿ ನಡೆಸುವ ಮುಸ್ಲಿಮರಿಗೆ ಬೆದರಿಕೆ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿತ್ತು. ಮುಸ್ಲಿಂ ವ್ಯಾಪಾರಿಗೆ
ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜ್ಯೂಸ್ ಸೆಂಟರ್ ಮಾಲೀಕ ನಸ್ರುಲ್ಲಾ ಖಾನ್ ಅವರ ಪೇಟಿಎಂ ಅನ್ನು ಪರಿಶೀಲಿಸುವ ಮೂಲಕ ಕಿರುಕುಳ ನೀಡುವುದು ದಾಖಲಾಗಿದೆ. ಅಂಗಡಿ ಮುಂದೆ ನಿಂತು ಪೇಟಿಎಂ ಸ್ಕ್ಯಾನರ್ ಅನ್ನು ಸ್ಕ್ಯಾನ್ ಮಾಡುವ ಅವರು ಅದರಲ್ಲಿ ಅಂಗಡಿಯ ಮಾಲಿಕನ ಹೆಸರನ್ನು ಓದುತ್ತಾರೆ. ಜೊತೆಗೆ ಈ ಹೆಸರನ್ನು ಅಂಗಡಿಯ ಶೋಕೇಶ್ ಅಲ್ಲಿ ಹಾಕುವಂತೆ ಅವರನ್ನು ಬೆದರಿಸುವುದು ವಿಡಿಯೊದಲ್ಲಿ ದಾಖಲಿಸುತ್ತಾರೆ. ಮುಸ್ಲಿಂ ವ್ಯಾಪಾರಿಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ವೇಳೆ ಅಂಗಡಿಯ ಮಾಲೀಕ ಹೆಸರು ಅಂಗಡಿಯ ಬೋರ್ಡ್ ಅಲ್ಲಿ ಮೇಲೆ ಬರೆದಿರುವುದಾಗಿ ಹೇಳಿದ್ದು, ಅದಕ್ಕೆ ಒಪ್ಪದ ಅವರು ಅಂಗಡಿಯ ಮುಂದಿನ ಶೋಕೇಶ್ ಅಲ್ಲಿ ಕೂಡಾ ಬರೆಯುವಂತೆ ಬೆದರಿಸುತ್ತಾರೆ. ಜನರಿಗೆ ಈ ಅಂಗಡಿ ಯಾರದ್ದು ಎಂದು ಗೊತ್ತಾಗುವಂತೆ ಇಲ್ಲಿ ಬೋರ್ಡ್ ಹಾಕಿ ಎಂದು ಅವರು ಹೇಳಿದ ನಂತರ ಅವರು, ಅಂಗಡಿಯ ಮಾಲೀಕನಿಗೆ ಲೈಸನ್ಸ್ ಇದೆಯಾ ಎಂದು ಲೈಸನ್ಸ್ ಕೂಡಾ ಕೇಳುತ್ತಾರೆ.
#Delhi: BJP MLA Ravi Negi is once again on streets harrasing Muslim shop keepers and vendors.
He can be witnessed harrasing owner of a juice centre Nasrullah Khan by checking his Paytm and asking to write his name on the shop despite having it written on the board. pic.twitter.com/BixLsZAIUZ
— Saba Khan (@ItsKhan_Saba) October 23, 2024
ರವಿ ನೇಗಿ 2020 ದೆಹಲಿ ಚುನಾವಣೆಯಲ್ಲಿ ದಹೆಲಿ ಉಪ ಮುಖ್ಯಮಂತ್ರಿಯಾಗಿದ್ದ ಮನಿಷ್ ಸಿಸೋಡಿಯ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಪ್ರಸ್ತುತ ಅವರು ಬಿಜೆಪಿಯಿಂದ ಕೌನ್ಸಿಲರ್ ಆಗಿದ್ದಾರೆ. ಅದಾಗ್ಯೂ, ಅವರ ಈ ಕೃತ್ಯದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಲೈಸನ್ಸ್ ಮತ್ತು ಹೆಸರು ಗೋಚರಿಸುವಂತೆ ಬರೆಯುವಂತೆ ಹೇಳಲು ನೀವು ಯಾರು ಎಂದು ಜನರು ಪ್ರಶ್ನಿಸಿದ್ದಾರೆ.
ಇತ್ತಚೆಗೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಅಂಗಡಿ ಮಾಲಿಕರ ಹೆಸರು ಗೋಚರಿಸುವಂತೆ ಬರೆಯುವಂತೆ ಅಲ್ಲಿನ ಆಡಳಿತ ವ್ಯಪಾರಿಗಳಿಗೆ ಕೇಳಿಕೊಂಡಿತ್ತು. ಧಾರ್ಮಿಕ ಗುರುತುಗಳ ಸುತ್ತ ನಡೆಯುತ್ತಿರುವ ರಾಜಕೀಯ ಚರ್ಚೆ ಆತಂಕಕಾರಿ ಘಟ್ಟ ತಲುಪಿದೆ.
ಇದನ್ನೂ ಓದಿ: ‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್
‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್


