ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಇತರ ಮೂಲಸೌಕರ್ಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮೋಹನ್‌ದಾಸ್ ಪೈ ಅವರು ಎಕ್ಸ್‌ನಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್, ಬೆಂಗಳೂರಿನ ಎಲ್ಲ ಬಹುರಾಷ್ಟ್ರೀಯ ಕಂಪನಿಗಳಿಗೆ (ಎಂನ್‌ಸಿ) ತಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.
ಕರ್ನಾಟಕದ ನಾಗರಿಕ ಸಮಸ್ಯೆಗಳ ತೀವ್ರ ಟೀಕಾಕಾರರೂ ಆಗಿರುವ ಪೈ ಅವರ ಟ್ವೀಟ್‌ಗೆ ನಾರಾ ಲೋಕೇಶ್ ಅವರ ಪ್ರತಿಕ್ರಿಯೆ ಬಂದಿದ್ದು, ಬೆಂಗಳೂರಿನಲ್ಲಿ ಹಲವಾರು ಎಂಎನ್‌ಸಿಗಳು ತೀವ್ರ ಮೂಲಸೌಕರ್ಯ ಸಮಸ್ಯೆಗಳಿಂದಾಗಿ ರಾಜ್ಯ ರಾಜಧಾನಿಯಿಂದ ಹೊರಗೆ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವುದನ್ನು ಪರಿಗಣಿಸಲು ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತಮ್ಮ ಭರವಸೆಗಳನ್ನು ಈಡೇರಿಸುತ್ತಿಲ್ಲ, ಇದು ಬೆಂಗಳೂರಿನ ನಿವಾಸಿಗಳಲ್ಲಿ ನಂಬಿಕೆ ಕುಸಿಯಲು ಕಾರಣವಾಗಿದೆ ಎಂದು ಪೈ ಹೇಳಿದರು.
“ಕಳೆದ 20 ವರ್ಷಗಳಲ್ಲಿ ಈ ರೀತಿಯ ಕೋಪ ಮತ್ತು ನೋವನ್ನು ನೋಡಿಲ್ಲ. ನಗರದ ದುರಾಡಳಿತದ ಬಗ್ಗೆ ತುಂಬಾ ದುಃಖವಾಗಿದೆ. ಸುಳ್ಳು ಭರವಸೆಗಳು, ಕ್ರಮಗಳ ಕೊರತೆ. ಇಂತಹ ಕಾರ್ಯನಿರ್ವಹಣೆಯಿಲ್ಲದ, ನಿಷ್ಠುರ, ಅಸಡ್ಡೆ ಸರ್ಕಾರವನ್ನು ಹೊಂದಲು ನಮಗೆಲ್ಲರಿಗೂ ದುಃಖದ ದಿನವಾಗಿದೆ. ತನ್ನದೇ ಆದ ನಾಗರಿಕರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ” ಎಂದು ಪೈ ಅಸಮಾಧಾನ ಹೊರಹಾಕಿದ್ದಾರೆ.
Namaskaram @TVMohandasPai Sir. With humble regards, I would like to extend an invitation to all MNCs to Andhra Pradesh, where Hon'ble Chief Minister Shri @ncbn Garu has introduced new, business-friendly policies. We view industries as vital stakeholders in our state’s welfare and… https://t.co/roCd8AG3Cu
— Lokesh Nara (@naralokesh) October 24, 2024
ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಾರಾ ಲೋಕೇಶ್, ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹೊಸ, ವ್ಯಾಪಾರ-ಸ್ನೇಹಿ ನೀತಿಗಳನ್ನು ಪರಿಚಯಿಸಿರುವ ಆಂಧ್ರಪ್ರದೇಶಕ್ಕೆ ಎಲ್ಲ ಎಂಎನ್‌ಸಿಗಳಿಗೆ ಆಹ್ವಾನವನ್ನು ನೀಡಲು ಬಯಸುತ್ತೇನೆ ಎಂದು ಗುರುವಾರ ಹೇಳಿದರು.
“ನಾವು ನಮ್ಮ ರಾಜ್ಯದ ಕಲ್ಯಾಣ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾಲುದಾರರಾಗಿ ಕೈಗಾರಿಕೆಗಳನ್ನು ನೋಡುತ್ತೇವೆ. ನಾವು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಅಸಾಧಾರಣ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ನೀಡಲು ಸಿದ್ಧರಿದ್ದೇವೆ, ವ್ಯಾಪಾರ ಮಾಡುವ ಸುಲಭ ಮತ್ತು ವೇಗ ಎರಡನ್ನೂ ಖಾತ್ರಿಪಡಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರಿ ಮಳೆಯಿಂದಾಗಿ ಬೆಂಗಳೂರಿನ ಟೆಕ್ ಪಾರ್ಕ್‌ಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು, ಕಂಪನಿಗಳು ಮನೆಯಿಂದ ಕೆಲಸ ಮಾಡುವುದಕ್ಕೆ ಸರ್ಕಾರ ಸಲಹೆ ನೀಡಿದೆ. ನಗರದಲ್ಲಿನ ಧಾರಾಕಾರ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಚೇರಿ, ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ, ನಗರದ ಟೆಕ್ ಹಬ್‌ಗಳನ್ನು ಕಾಡುತ್ತಿರುವ ಪ್ರವಾಹ ಮತ್ತು ಟ್ರಾಫಿಕ್ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರಗಳನ್ನು ಒದಗಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದೆ.
ಸಮಿತಿಯ ಅಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಇರುತ್ತಾರೆ.
ಬುಧವಾರ ರಾತ್ರಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಭಾರೀ ಪ್ರವಾಹದಿಂದ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಿಂದ ಸಾವಿರಾರು ಪ್ರಯಾಣಿಕರು ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು ನಡೆದುಕೊಂಡು ಹೋಗಬೇಕಾಯಿತು.
ಮೂರು ಗಂಟೆಗೂ ಹೆಚ್ಚು ಕಾಲ ಕಾಸ ನಂತರ, ಪ್ರಯಾಣಿಕರು ಮನೆಗೆ ತೆರಳಲು ನಿರ್ಧರಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವು ಅವ್ಯವಸ್ಥೆಯನ್ನು ಸೆರೆಹಿಡಿದಿದೆ. ಜನರು ತಮ್ಮ ವಾಹನಗಳಿಂದ ಇಳಿದು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ; ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಬೇಸತ್ತ ಟೆಕ್ಕಿಗಳು; ಫ್ಲೈಓವರ್ ಮೇಲೆ ವಾಹನಬಿಟ್ಟು ಮನೆಗೆ ತೆರಳಿದ ಜನರು


