ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರ ತಲೆಯನ್ನು ಸಾರ್ವಜನಿಕ ಸ್ಥಳದಲ್ಲಿ ಬಲವಂತವಾಗಿ ಬೋಳಿಸಿ ಅವಮಾನಿಸುವ ಮೂಲಕ ದೌರ್ಜನ್ಯವೆಸಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಸೇರಿದಂತೆ ಅನೇಕರು ವಿಡಿಯೋ ಹಂಚಿಕೊಂಡು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
यूपी के झांसी से एक वायरल वीडियो सामने आया है।
वीडियो में कुछ लोग एक आदमी के जबरन बाल काट रहे हैं।
इनका गुनाह सिर्फ इतना था कि इन्होंने दबंगों के यहां बेगारी करने से मना कर दिया।
फिर क्या था…
घमंड के नशे में चूर दबंगों ने इनके साथ मार-पीट की, पेड़ से उल्टा लटका दिया,… pic.twitter.com/kp2FEZGFA7
— Congress (@INCIndia) October 25, 2024
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಝಾನ್ಸಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪ್ರಭಾವಿ ಕುಟುಂಬವೊಂದು ತಮ್ಮ ಪ್ರಾಣಿಗಳಿಗೆ ಆಹಾರ, ನೀರು ಕೊಡುವುದು ಸೇರಿದಂತೆ ಅವುಗಳನ್ನು ನೋಡಿಕೊಳ್ಳಲು ಸಂತ್ರಸ್ತ ವ್ಯಕ್ತಿಗೆ ಹೇಳಿತ್ತು, ಅವರು ಅದಕ್ಕೆ ಒಪ್ಪಿರಲಿಲ್ಲ. ಈ ಕಾರಣಕ್ಕೆ ತಲೆ ಬೋಳಿಸಿ ದೌರ್ಜನ್ಯ ನಡೆಸಲಾಗಿದೆ.
ಪತ್ರಕರ್ತ ರಣವಿಜಯ್ ಸಿಂಗ್ ಎಂಬವರು ಮೊದಲು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆ ಬಳಿಕ ಅದು ವೈರಲ್ ಆಗಿದೆ. ರಣವಿಜಯ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಝಾನ್ಸಿ ಪೊಲೀಸರು ” ಇದು ಸಿಪ್ರಿ ಬಝಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಕೆಲ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಅಕ್ಟೋಬರ್ 22ರಂದು ಮಧ್ಯಾಹ್ನ 2.30ರ ಸುಮಾರಿಗೆ ನನಗೆ ಥಳಿಸಿ ದೌರ್ಜನ್ಯ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಕ್ಟೋಬರ್ 23ರಂದು ಬಾಬಾ ಎಂಬವರು ದೂರು ನೀಡಿದ್ದಾರೆ. ದೂರಿನ ಅನ್ವಯ ನಾಲ್ಕು ಮಂದಿಯ ವಿರುದ್ದ ಸಂಬಂಧಿತ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಶೀಘ್ರ ಬಂಧನಕ್ಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ये वीडियो वायरल है
यूपी के झांसी में इस आदमी के बाल इसलिए काटे जा रहे हैं, क्योंकि इसने बेगारी करने से मना कर दिया.
गांव के दबंग चाहते थे कि ये आदमी उनके यहां जानवरों को भूसा-पानी दे.
इसने मना किया तो इसके साथ मारपीट की गई, पेड़ से उल्टा लटका दिया, बाल भी काटे.
इतना ही नहीं… pic.twitter.com/JvnOyA6CgA
— Ranvijay Singh (@ranvijaylive) October 25, 2024
“ಸಾಮಾಜಿಕ ಜಾಲತಾಣಗಳ ಮೂಲಕ ದೌರ್ಜನ್ಯದ ವಿಡಿಯೋ ಬೆಳಕಿಗೆ ಬಂದಿದೆ. ಅದರಲ್ಲಿ ದೂರುದಾರನ ತಲೆ ಬೋಳಿಸಿರುವುದು ಕಂಡು ಬಂದಿದೆ. ಅದನ್ನೂ ಪರಿಗಣಿಸಿ ಈಗಾಗಲೇ ದಾಖಲಾದ ಪ್ರಕರಣದಲ್ಲಿ ಸೇರಿಸಲಾಗುವುದು. ಸೂಕ್ತ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ “ಉತ್ತರ ಪ್ರದೇಶದ ಝಾನ್ಸಿಯಿಂದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬರ ತಲೆಯನ್ನು ಬಲವಂತವಾಗಿ ಬೋಳಿಸುತ್ತಿರುವುದು ಕಾಣಬಹುದು. ವಿಡಿಯೋದಲ್ಲಿರುವ ವ್ಯಕ್ತಿ ಮಾಡಿರುವ ತಪ್ಪೆಂದರೆ ಬಲವಂತದ ದುಡಿಮೆಗೆ ನಿರಾಕರಿಸಿರುವುದು. ಇಷ್ಟಕ್ಕೆ ದುರಹಂಕಾರಿಗಳು ಅವರಿಗೆ ಹೊಡೆದು, ಮರಕ್ಕೆ ತಲೆಕೆಳಗಾಗಿ ನೇತುಹಾಕಿ, ಅವರ ಕೂದಲನ್ನು ಕತ್ತರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ. ಬಡ ಮತ್ತು ಅಸಹಾಯಕ ಕಾರ್ಮಿಕರ ಘನತೆ ಮತ್ತು ಸ್ವಾಭಿಮಾನವನ್ನು ಬಹಿರಂಗವಾಗಿ ತುಳಿಯುವ ಬಿಜೆಪಿಯ ಜಂಗಲ್ ರಾಜ್‌ನ ಹೃದಯವಿದ್ರಾವಕ ಚಿತ್ರಣ ಇದಾಗಿದೆ. ಅಲ್ಲಿ ಪೊಲೀಸರು, ಆಡಳಿತ ಮತ್ತು ಸರ್ಕಾರ ಕೇವಲ ರೌಡಿಗಳ ಮತ್ತು ಅಪರಾಧಿಗಳ ರಕ್ಷಣೆಗಾಗಿ ಕೆಲಸ ಮಾಡುತ್ತದೆ. ಆದರೆ, ಬಡವರ ಬಗ್ಗೆ ಕೇಳುವುದೇ ಇಲ್ಲ. ನಾಚಿಕೆಗೇಡು” ಎಂದು ಬರೆದುಕೊಂಡಿದೆ.
ಇದನ್ನೂ ಓದಿ : ಕಡಪ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಅಧಿಕಾರಿ; ಪೋಕ್ಸೋ ಕೇಸ್ ದಾಖಲು


