ದೆಹಲಿಯ ಗಾಳಿಯ ಗುಣಮಟ್ಟ ಹದಗೆಡುತ್ತಿದ್ದು, ಈ ನಡುವೆ ರಾಜಧಾನಿಯ 69% ಕುಟುಂಬಗಳ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸದಸ್ಯರು ಗಂಟಲು ನೋವು, ಕೆಮ್ಮು ಸೇರಿದಂತೆ ಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ವಾಯು ಮಾಲಿನ್ಯ
ದೀಪಾವಳಿಯ ರಾತ್ರಿಯಲ್ಲಿ ದೆಹಲಿಯಲ್ಲಿ ಹೆಚ್ಚಿನ ಮಟ್ಟದ ವಾಯು ಮಾಲಿನ್ಯ ದಾಖಲಾಗಿದೆ. ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ರೀಡಿಂಗ್‌ಗಳು ಗರಿಷ್ಠ ಮಟ್ಟ 999 ಕ್ಕೆ ಏರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ರಾಜಧಾನಿ ದೆಹಲಿಯಾದ್ಯಂತ 21,000 ಕ್ಕೂ ಹೆಚ್ಚು ನಿವಾಸಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಇದರ ಆಧಾರದಲ್ಲಿ ದೆಹಲಿಯ ಜನಸಂಖ್ಯೆಯ ಮೇಲೆ ವಾಯು ಮಾಲಿನ್ಯದ ವ್ಯಾಪಕ ಪರಿಣಾಮಗಳನ್ನು ವರದಿಯು ಬಹಿರಂಗಪಡಿಸಿದೆ.
ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ 62% ಕುಟುಂಬಗಳ ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರು ಕಣ್ಣು ಉರಿಯನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವು ಹೇಳಿದೆ. ಜೊತೆಗೆ 46% ಜನರು ಮೂಗು ಸೋರುವಿಕೆ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅದು ಬಹಿರಂಗಪಡಿಸಿದೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 31% ದಷ್ಟು ಜನರು ಉಸಿರಾಟದ ತೊಂದರೆ ಅಥವಾ ಆಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ. ಜೊತೆಗೆ 31% ದಷ್ಟು ಜನರು ತಲೆನೋವು ಅನುಭವಿಸುತ್ತಿದ್ದಾರೆಂದು ತಿಳಿಸಿದ್ದಾರೆ. ಸುಮಾರು 23% ಜನರು ಆತಂಕ ಅಥವಾ ಏಕಾಗ್ರತೆಯ ತೊಂದರೆಯನ್ನು ವ್ಯಕ್ತಪಡಿಸಿದ್ದು, 15% ದಷ್ಟು ಜನರು ನಿದ್ರಾಹೀನತೆ ಬಗ್ಗೆ ಉಲ್ಲೇಖಿಸಿದ್ದಾರೆ.
ಆದಾಗ್ಯೂ, 31% ರಷ್ಟು ಜನರು ತಾವು ಅಥವಾ ಅವರ ಕುಟುಂಬ ಸದಸ್ಯರು ಮಾಲಿನ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಸೂಚಿಸಿದ್ದಾರೆ.
“ಹಲವರಿಗೆ ಈಗಾಗಲೇ ಕೆಮ್ಮು ಮತ್ತು ಶೀತವಿದೆ. ಕೆಲವರು ಈಗಾಗಲೇ ಆಸ್ತಮಾ, ಬ್ರಾಂಕೈಟಿಸ್, ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ನಂತಹ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ದೀಪಾವಳಿಯ ನಂತರದ ವಾಯು ಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದ ಪರಿಸ್ಥಿತಿಯಿಂದ ರಾಜಧಾನಿಯ ಜನರು ಆರೋಗ್ಯ ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ” ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ಮುಂದುವರಿದ ಇಸ್ರೇಲ್ ಆಕ್ರಮಣ | ಗಾಝಾದಲ್ಲಿ 84 ಸಾವು, ಲೆಬನಾನ್‌ನಲ್ಲೂ ಹಲವರ ಹತ್ಯೆ
ಮುಂದುವರಿದ ಇಸ್ರೇಲ್ ಆಕ್ರಮಣ | ಗಾಝಾದಲ್ಲಿ 84 ಸಾವು, ಲೆಬನಾನ್‌ನಲ್ಲೂ ಹಲವರ ಹತ್ಯೆ


