ಅಮೆರಿಕ, ಯುನೈಟೆಡ್ ಕಿಂಗ್‌ಡಂ ಮತ್ತು ಕೆನಡಾದ ಸಿಖ್ ಯಾತ್ರಾರ್ಥಿಗಳು ತಮ್ಮ ಧಾರ್ಮಿಕ ಸ್ಥಳಗಳಿಗೆ ಗೌರವ ಸಲ್ಲಿಸಲು ದೇಶಕ್ಕೆ ಆಗಮಿಸಿದ 30 ನಿಮಿಷಗಳಲ್ಲಿ ಉಚಿತ ಆನ್‌ಲೈನ್ ವೀಸಾವನ್ನು ಪಡೆಯುವ ನಿಯಮವನ್ನು ಪಾಕಿಸ್ತಾನ ಪರಿಚಯಿಸಿದೆ. ಈ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದಾರೆ. ಮೂರು ದೇಶಗಳ ಸಿಖ್ಖರಿಗೆ
ಗುರುವಾರ ಲಾಹೋರ್‌ನಲ್ಲಿ ಸಿಖ್ ಯಾತ್ರಾರ್ಥಿಗಳ 44 ಸದಸ್ಯರ ವಿದೇಶಿ ನಿಯೋಗವನ್ನು ಭೇಟಿಯಾದಾಗ ನಖ್ವಿ ಈ ಹೇಳಿಕೆ ನೀಡಿದ್ದಾರೆ. ಸಿಖ್ ಯಾತ್ರಿಕರ ನಿಯೋಗದೊಂದಿಗೆ ಮಾತನಾಡಿದ ನಖ್ವಿ, ಸಿಖ್ ಸಂದರ್ಶಕರು ಎದುರಿಸಿದ ಹಿಂದಿನ ಸವಾಲುಗಳನ್ನು ಒಪ್ಪಿಕೊಳ್ಳುತ್ತಾ, ಧಾರ್ಮಿಕ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವನ್ನು ಸರಳಗೊಳಿಸುವ ತಮ್ಮ ಆಡಳಿತದ ಪ್ರಯತ್ನಗಳನ್ನು ಒತ್ತಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಿಖ್ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಅಮೇರಿಕನ್, ಕೆನಡಿಯನ್ ಮತ್ತು ಯುಕೆ ಪಾಸ್‌ಪೋರ್ಟ್ ಹೊಂದಿರುವವರು ಈಗ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ವರ್ಷಕ್ಕೆ 10 ಬಾರಿ ಪಾಕಿಸ್ತಾನಕ್ಕೆ ಬರಬಹುದು ಹಾಗೂ ನಾವು ನಿಮ್ಮನ್ನು ಪ್ರತಿ ಬಾರಿ ಸ್ವಾಗತಿಸುತ್ತೇವೆ” ಎಂದು ನಖ್ವಿ ಹೇಳಿದ್ದಾರೆ. ಮೂರು ದೇಶಗಳ ಸಿಖ್ಖರಿಗೆ
ಮುಸ್ಲಿಮರಿಗೆ ಸೌದಿ ಅರೇಬಿಯಾ ಹೇಗೋ ಹಾಗೆ ಪಾಕಿಸ್ತಾನ ಸಿಖ್ಖರಿಗೆ ಮಹತ್ವದ ಸ್ಥಳವಾಗಿದೆ ಎಂದು ನಖ್ವಿ ಹೇಳಿದ್ದಾರೆ. ಪಾಕಿಸ್ತಾನದಾದ್ಯಂತ ವಿವಿಧ ಸಿಖ್ ಪರಂಪರೆಯ ತಾಣಗಳನ್ನು ತೆರೆಯುವುದಾಗಿ ಘೋಷಿಸಿದ ಅವರು, ಅಲ್ಲಿ ಯಾವುದೇ ಅನುಮತಿಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ ಅವರು, ಪಾಕಿಸ್ತಾನಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರ ವಾರ್ಷಿಕ ಸಂಖ್ಯೆಯನ್ನು 1 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಯೋಜನೆಗಳನ್ನು ನಖ್ವಿ ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳಲು ಒತ್ತು ನೀಡುವುದಾಗಿ ಅವರು ಹೇಳಿದ್ದಾರೆ.
ಸಿಖ್ ನಿಯೋಗವು ಪಾಕಿಸ್ತಾನದ ಆತಿಥ್ಯಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು, ಸುವ್ಯವಸ್ಥಿತ ವೀಸಾ ಪ್ರಕ್ರಿಯೆಯನ್ನು ಶ್ಲಾಘಿಸಿದೆ. “ನೀವು ನಮ್ಮ ಹೃದಯಗಳನ್ನು ಗೆದ್ದಿದ್ದೀರಿ” ಎಂದು ಅವರು ಹೇಳಿದ್ದಾರೆ.
ಈ ನೀತಿ ಬದಲಾವಣೆಯು ಪ್ರವಾಸೋದ್ಯಮ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಪಾಕಿಸ್ತಾನದ ವಿಶಾಲ ಉಪಕ್ರಮದ ಭಾಗವಾಗಿದೆ. ಕಳೆದ ಆಗಸ್ಟ್ 14 ರಿಂದ 124 ದೇಶಗಳ ನಾಗರಿಕರಿಗೆ ವೀಸಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾದ ಸಿಖ್ ಯಾತ್ರಾರ್ಥಿಗಳಿಗೆ ಉಚಿತ ಆನ್‌ಲೈನ್ ವೀಸಾಗಳನ್ನು ನೀಡುವ ಪಾಕಿಸ್ತಾನಿ ಸರ್ಕಾರದ ನಿರ್ಧಾರವನ್ನು ಉತ್ತರ ಅಮೆರಿಕಾದ ಪಂಜಾಬಿ ಅಸೋಸಿಯೇಷನ್ (NAPA) ಸ್ವಾಗತಿಸಿದೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಉಡುಪಿನಲ್ಲಿ ಪ್ರಜ್ವಲ್ ರೇವಣ್ಣನ ಡಿಎನ್‌ಎ ಪತ್ತೆ: ಎಸ್‌ಐಟಿ
ಅತ್ಯಾಚಾರ ಸಂತ್ರಸ್ತೆಯ ಉಡುಪಿನಲ್ಲಿ ಪ್ರಜ್ವಲ್ ರೇವಣ್ಣನ ಡಿಎನ್‌ಎ ಪತ್ತೆ: ಎಸ್‌ಐಟಿ


