ಎಂಟು ಅಗತ್ಯ ಔಷಧಿಗಳ ಬೆಲೆಯನ್ನು 50% ರಷ್ಟು ಹೆಚ್ಚಿಸುವ ಕೇಂದ್ರದ ಬಿಜೆಪಿಯ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ವಿಪಕ್ಷ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದ್ದು, ಬೆಲೆ ಏರಿಕೆಯಿಂದ ರೋಗಿಗಳು ಮತ್ತು ಜನರ ಆರೋಗ್ಯ ರಕ್ಷಣೆಯ ಮೇಲೆ ಬೀರುವ ಪರಿಣಾಮವನ್ನು ನಿರ್ಣಯಿಸಲು ಸ್ವತಂತ್ರ ಪರಿಶೀಲನಾ ಸಮಿತಿ ರಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಒತ್ತಾಯಿಸಿದೆ. ಸಾಮಾನ್ಯ ಬಳಕೆಯ
ಸಾಮಾನ್ಯವಾಗಿ ಬಳಸುವ ಎಂಟು ಔಷಧಿಗಳ ಸೀಲಿಂಗ್ ಬೆಲೆಯನ್ನು 50%ದಷ್ಟು ಹೆಚ್ಚಿಸುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಇತ್ತೀಚಿನ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಮೋದಿಗೆ ಪತ್ರ ಬರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಟ್ಯಾಗೋರ್ ಅವರು ಈ ಪತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಈ ಬೆಲೆ ಹೆಚ್ಚಳಕ್ಕೆ ಸರ್ಕಾರವು ‘ಅಸಾಧಾರಣ ಸಂದರ್ಭಗಳು’ ಮತ್ತು ‘ಸಾರ್ವಜನಿಕ ಹಿತಾಸಕ್ತಿ’ ಕಾರಣಗಳನ್ನು ಉಲ್ಲೇಖಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅಂತಹ ಮಹತ್ವದ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಸ್ಪಷ್ಟಪಡಿಸುವುದು ನಿರ್ಣಾಯಕ ಎಂದು ನಾನು ನಂಬುತ್ತೇನೆ” ಎಂದು ಪತ್ರದಲ್ಲಿ ಕೇಳಿದ್ದಾರೆ. ಸಾಮಾನ್ಯ ಬಳಕೆಯ
“ಈ ಬೆಲೆ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಅಗತ್ಯವಾದ ಆಸ್ತಮಾ, ಕ್ಷಯ, ಬೈಪೋಲಾರ್ ಡಿಸಾರ್ಡರ್ ಮತ್ತು ಗ್ಲುಕೋಮಾದಂತಹ ರೋಗಗಳ ಪ್ರಮುಖ ಔಷಧಿಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.
Wrote a letter to Prime Minister expressing serious concern over the recent 50% price hike in essential medicines by NPPA. This increase strains millions of families who rely on vital medications for asthma, tuberculosis, and more. Urging the government to resist pressure from1/2 pic.twitter.com/u2I8ryr1sf
— Manickam Tagore .B🇮🇳மாணிக்கம் தாகூர்.ப (@manickamtagore) November 2, 2024
ದೇಶದ ಅನೇಕ ರೋಗಿಗಳು ಮತ್ತು ಅವರ ಕುಟುಂಬಗಳು ಅಗತ್ಯ ಚಿಕಿತ್ಸೆಗಳನ್ನು ಪಡೆಯಲು ಈಗಾಗಲೆ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಔಷಧದ ಬೆಲೆಗಳಲ್ಲಿನ ಈ ಹಠಾತ್ ಹೆಚ್ಚಳವು ಇಂತಹ ವ್ಯಕ್ತಿಗಳ ಮೇಲೆ ಹೆಚ್ಚುವರಿ ಹೊರೆಯನ್ನು ಉಂಟುಮಾಡಬಹುದು ಮತ್ತು ಅವರ ಆರೋಗ್ಯದ ಮೇಲೆ ಅವರು ರಾಜಿ ಮಾಡುವ ಸಂಭವವಿರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ಈ ಬೆಲೆ ಏರಿಕೆಗೆ ಅಗತ್ಯವಾದ ಅಸಾಮಾನ್ಯ ಸಂದರ್ಭಗಳ ಬಗ್ಗೆ ಹೆಚ್ಚು ವಿವರವಾದ ವಿವರಣೆಯನ್ನು ನೀಡಲು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದಲ್ಲದೆ, ರೋಗಿಗಳು ಮತ್ತು ಆರೋಗ್ಯ ಕ್ಷೇತ್ರದ ಮೇಲೆ ಈ ಬೆಲೆ ಹೆಚ್ಚಳದ ನೈಜ ಪರಿಣಾಮವನ್ನು ನಿರ್ಣಯಿಸಲು ಸ್ವತಂತ್ರ ಪರಿಶೀಲನಾ ಸಮಿತಿಯನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ಇಂತಹ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕಾಗಿದ್ದು ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಸಂಪೂರ್ಣ ಪರಿಶೀಲನೆಯು ಒಳ್ಳೆಯ ನೀತಿಗಳು ತರುವಂತೆ ಮಾಡುತ್ತದೆ. ಹೀಗಾದರೆ ಅಗತ್ಯ ಔಷಧಗಳು ಕೈಗೆಟುಕುವ ದರರಲ್ಲಿ ಎಲ್ಲರಿಗೂ ಪಡೆಯುವಂತೆ ಇರುತ್ತದೆ” ಎಂದು ಸಂಸದ ಟ್ಯಾಗೋರ್ ಹೇಳಿದ್ದಾರೆ.
ಅಕ್ಟೋಬರ್ 14 ರಂದು ಕೇಂದ್ರ ಸರ್ಕಾರವು ಎಂಟು ಔಷಧಿಗಳ 11 ನಿಗದಿತ ಸೂತ್ರೀಕರಣಗಳನ್ನು ಅವುಗಳ ಪ್ರಸ್ತುತ ಸೀಲಿಂಗ್ ಬೆಲೆಯ ಶೇಕಡಾ 50 ರಷ್ಟು ಹೆಚ್ಚಿಸಲು ಅನುಮೋದಿಸಿದೆ ಎಂದು ಘೋಷಿಸಿತ್ತು. ಔಷಧೀಯ ಪದಾರ್ಥಗಳ ನಿರಂತರ ಹೆಚ್ಚಳವಾದ ವೆಚ್ಚ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಬೆಲೆಗಳ ಏರಿಕೆಗಾಗಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಮಾಡಿತ್ತು.
ಇದನ್ನೂ ಓದಿ: ವಕ್ಫ್ ಭೂಮಿ ವಿವಾದ | ರೈತರಿಗೆ ನೀಡಿದ ನೋಟಿಸ್ ತಕ್ಷಣವೆ ವಾಪಸ್ – ಸಿಎಂ ಸಿದ್ದರಾಮಯ್ಯ
ವಕ್ಫ್ ಭೂಮಿ ವಿವಾದ | ರೈತರಿಗೆ ನೀಡಿದ ನೋಟಿಸ್ ತಕ್ಷಣವೆ ವಾಪಸ್ – ಸಿಎಂ ಸಿದ್ದರಾಮಯ್ಯ


