ತಂಜಾವೂರಿನ 15 ವರ್ಷದ ದಲಿತ ಬಾಲಕಿಯು ಪಶ್ಚಿಮ ಚೆನ್ನೈನ ಅಮಿಂಜಿಕರೈನಲ್ಲಿರುವ ದಂಪತಿಯ ಮನೆಯ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ, ಅಲ್ಲಿ ಆಕೆ ಮನೆಗೆಲಸವಾಗಿ ಮಾಡುತ್ತಿದ್ದಳು ಎಂದು ಗ್ರೇಟರ್ ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಹಿಂಸೆ ನೀಡಿದ ಆರೋಪದ ಮೇಲೆ ದಂಪತಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ಬಾಲಕಿಯ ಮೈಮೇಲೆ ಸುಟ್ಟ ಗಾಯಗಳಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಪೊಲೀಸರು ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ (ಎಸ್‌ಸಿ/ಎಸ್‌ಟಿ ಪಿಒಎ) ಅಡಿಯಲ್ಲಿ ನಿಬಂಧನೆಗಳನ್ನು ವಿಧಿಸುವ ಸಾಧ್ಯತೆಯಿದೆ.
ಮೃತ ಬಾಲಕಿಯು, ಮೊಹಮ್ಮದ್ ನಿಶಾತ್ (36) ಮತ್ತು ಆತನ ಪತ್ನಿ ನಸ್ರಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ನಿಶಾತ್ ನಗರದಲ್ಲಿ ಹೊಟೇಲ್ ಡೀಲರ್ ಆಗಿದ್ದಾರೆ. ನವೆಂಬರ್ 1 ರಂದು ಬಾಲಕಿ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕುಟುಂಬದಲ್ಲಿನ ವೈಯಕ್ತಿಕ ಸಮಸ್ಯೆಗಳಿಂದ ಮನೆಕೆಲ ಮಾಡುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ; ಜಮ್ಮು-ಕಾಶ್ಮೀರ: ಶ್ರೀನಗರದ ಜನನಿಬಿಡ ಮಾರುಕಟ್ಟೆಯಲ್ಲಿ ಗ್ರೆನೇಡ್ ಸ್ಪೋಟ, 10 ಮಂದಿಗೆ ಗಂಭೀರ ಗಾಯ


