ಸಂವಿಧಾನದ 348(1)ನೇ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಲಾಪಗಳನ್ನು ಹಿಂದಿಯಲ್ಲಿ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಹಿಂದಿಗೆ ಮಾತ್ರ ವಿಷೇಶ ಮಹತ್ವ ಯಾಕೆ ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಪ್ರಶ್ನಿಸಿದೆ. ಕೇವಲ ಹಿಂದಿ ಏಕೆ?
ಸಂವಿಧಾನದ 348(1)ನೇ ವಿಧಿ ಸುಪ್ರೀಂ ಕೋರ್ಟ್ ಮತ್ತು ಎಲ್ಲಾ ಹೈಕೋರ್ಟ್‌ಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಮಾಡಬೇಕು ಎಂದು ಹೇಳುತ್ತದೆ. ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದೇಶದ ವಿವಿಧ ರಾಜ್ಯಗಳ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ ಪ್ರಕರಣಗಳನ್ನು ಸಲ್ಲಿಸುತ್ತಾರೆ. ಆದರೆ ಹಿಂದಿ ಭಾಷೆಗೆ ಮಾತ್ರ ವಿಶೇಷ ಮಹತ್ವ ಯಾಕೆ ಏಕೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಅರ್ಜಿದಾರರನ್ನು ಕೇಳಿದ್ದಾರೆ. ಕೇವಲ ಹಿಂದಿ ಏಕೆ?
ಕೇವಲ ಹಿಂದಿ ಮಾತ್ರ ಏಕೆ? ಮೇಲ್ಮನವಿಗಳು ಮತ್ತು ಎಸ್‌ಎಲ್‌ಪಿಗಳು ಎಲ್ಲಾ ರಾಜ್ಯಗಳಿಂದ ಈ ನ್ಯಾಯಾಲಯಕ್ಕೆ ಬರುತ್ತವೆ. ನಾವು ಈಗ ಸಂವಿಧಾನದಿಂದ ಗುರುತಿಸಲ್ಪಟ್ಟ ಪ್ರತಿಯೊಂದು ಭಾಷೆಯ ಕಕ್ಷದಾರರನ್ನು ಕೇಳಬೇಕು, ಹಾಗಾದರೆ ಹಿಂದಿ ಭಾಷೆಯಲ್ಲಿ ಮಾತ್ರ ಮಾಡಿದರೆ ಕೆಲಸ ಸಾಧ್ಯವೆ? ಎಂದು ಅವರು ಕೇಳಿದ್ದಾರೆ.
ಸಂವಿಧಾನದ 348(1)ನೇ ವಿಧಿಯು ಮೂಲ ಸಂವಿಧಾನದ ಭಾಗವಾಗಿದೆ ಎಂದು ಅವರು ಸೂಚಿಸಿದ್ದಾರೆ. “ಸಂವಿಧಾನದ 348(1) ನೇ ವಿಧಿಯ ಸಿಂಧುತ್ವವನ್ನು ನೀವು ಹೇಗೆ ಪ್ರಶ್ನಿಸುತ್ತೀರಿ? ಇದು ಮೂಲ ಸಂವಿಧಾನದ ಭಾಗ” ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಭಾಷಾವಾರು ಅಡೆತಡೆಯ ಕಾರಣಕ್ಕೆ ನ್ಯಾಯ ನಿರಾಕರಣೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ ಪೀಠವು ಈ ವಿಷಯವಾಗಿ ಮತ್ತಷ್ಟು ವಿಚಾರಣೆ ನಡೆಸಲು ನಿರಾಕರಿಸಿ, ಅದನ್ನು ವಜಾಗೊಳಿಸಿದೆ. “ರಿಟ್ ಅರ್ಜಿಯು ಅರ್ಹತೆಯ ಕೊರತೆ ಹೊಂದಿದ್ದು, ಅದರಂತೆ ಅರ್ಜಿಯನ್ನು ವಜಾಗೊಳಿಸಲಾಗಿದೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: 370 ವಿಧಿ ರದ್ದತಿ ವಿರುದ್ಧ ನಿರ್ಣಯ | ಜಮ್ಮು ಕಾಶ್ಮೀರದ ಮೊದಲ ಅಧಿವೇಶನದಲ್ಲಿ ಗದ್ದಲ
370 ವಿಧಿ ರದ್ದತಿ ವಿರುದ್ಧ ನಿರ್ಣಯ | ಜಮ್ಮು ಕಾಶ್ಮೀರದ ಮೊದಲ ಅಧಿವೇಶನದಲ್ಲಿ ಗದ್ದಲ


