ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಮತ್ತೊಂದು ಜಟಾಪಟಿ ನಡೆದಿದೆ. ವಿರೋಧ ಪಕ್ಷದ ಸಂಸದರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸಮಿತಿಯ ಮುಖ್ಯಸ್ಥರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದು, ಇದು ಹೀಗೆಯೆ ಮುಂದುವರೆದರೆ, ಸಮಿತಿಯಿಂದ ತಾವು ನಿರ್ಗಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ವಕ್ಫ್ ತಿದ್ದುಪಡಿ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸರ್ಕಾರವು ವಕ್ಫ್ ಮಸೂದೆಯನ್ನು ಮಂಡಿಸಿದ ನಂತರ ಲೋಕಸಭೆಯು ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಪರಿಶೀಲಿಸಲು ವಹಿಸಿತ್ತು. ಮಸೂದೆಯ ವಿರುದ್ಧ ವಿರೋಧ ಪಕ್ಷಗಳು ಮತ್ತು ಹಲವಾರು ಮುಸ್ಲಿಂ ಸಂಘಟನೆಗಳು ತೀವ್ರ ಪ್ರತಿಭಟನೆ ಸಲ್ಲಿಸಿವೆ. ಅದಾಗ್ಯೂ ಇತ್ತೀಚೆಗಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಪ್ರತಿಪಾದಿಸಿದ್ದಾರೆ. ವಕ್ಫ್ ತಿದ್ದುಪಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಪಕ್ಷಗಳ ಸಂಸದರು ಲೋಕಸಭೆ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ, ‘ಬಹುಮತ’ವನ್ನು ಪ್ರಜಾಸತ್ತಾತ್ಮಕವಾಗಿ ಬಳಸದೆ ಸಂಸತ್ತಿನ ಪ್ರಕ್ರಿಯೆಯನ್ನು ನಿರ್ಲಕ್ಷಿಸಿ ಕೇಂದ್ರ ಸರ್ಕಾರವು ಬಯಸಿದಂತೆ ಮಸೂದೆಯನ್ನು ಅಂಗೀಕರಿಸಲು ಜಂಟಿ ಸಂಸದೀಯ ಸಮಿತಿಯನ್ನು ಕೇವಲ ವೆಂಟಿಲೇಷನ್ ರೂಮ್ ಎಂಬಂತೆ ಪರಿಗಣಿಸಬಾರದು ಎಂದು ತಿಳಿಸಿದ್ದಾರೆ.
“ಸಮಿತಿಯ ಅಧ್ಯಕ್ಷರು ಸತತ ಮೂರು ದಿನಗಳ ಕಾಲ ಕೂಡಾ ಸಭೆಯ ದಿನಾಂಕಗಳನ್ನು ನಿಗದಿಪಡಿಸುವ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಿ ವ್ಯಕ್ತಿಗಳು/ಸಂಘಟನೆಗಳನ್ನು ಸಾಕ್ಷಿಗಳಾಗಿ ಕರೆಯುತ್ತಾರೆ. ಇದು ಸಂಸದರು ಸಂವಹನ ನಡೆಸಲು ಪ್ರಾಯೋಗಿಕವಾಗಿ ತಯಾರಿ ಮಾಡಲು ಸಾಧ್ಯವಿಲ್ಲ” ಎಂದು ಪತ್ರವು ಹೇಳಿದೆ.
“ಆದ್ದರಿಂದ, ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಸಮಂಜಸವಾದ ಸಮಯ ವಿರಾಮವನ್ನು ನೀಡದೆ ಸಮಿತಿಯ ಕಲಾಪಗಳನ್ನು ಬುಡಮೇಲು ಮಾಡುವುದು ಸಾಂವಿಧಾನಿಕ ಧರ್ಮ ಮತ್ತು ಸಂಸತ್ತಿನ ಮೇಲಿನ ದೌರ್ಜನ್ಯದ ಕೃತ್ಯವಲ್ಲದೆ ಬೇರೇನೂ ಅಲ್ಲ ಎಂದು ನೋವಿನಿಂದ ನಿಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯ” ಎಂದು ಪತ್ರವು ಹೇಳಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಮಿತಿಯ ಸದಸ್ಯರೊಂದಿಗೆ ಔಪಚಾರಿಕ ಸಮಾಲೋಚನೆ ನಡೆಸುವಂತೆ ಸಮತಿಯ ಅಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಸದಸ್ಯರು ಸ್ಪೀಕರ್ ಅವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸಮಿತಿಯು ನವೆಂಬರ್ 5-6 ರಂದು ಎರಡು ದಿನಗಳ ಸಭೆ ನಡೆಸಲಿದ್ದು, ನವೆಂಬರ್ 9 ರಿಂದ ಐದು ರಾಜ್ಯಗಳ ಪ್ರವಾಸವನ್ನು ನಡೆಸಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರದಲ್ಲಿ ಸಮಿತಿಯು ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ಕೇವಲ ಹಿಂದಿ ಏಕೆ?’ | ಹಿಂದಿಯಲ್ಲಿ ಕಲಾಪ ನಡೆಸುವಂತೆ ಕೇಳಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್!
‘ಕೇವಲ ಹಿಂದಿ ಏಕೆ?’ | ಹಿಂದಿಯಲ್ಲಿ ಕಲಾಪ ನಡೆಸುವಂತೆ ಕೇಳಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್!


