ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಜಮ್ಮು ಕಾಶ್ಮೀರದಿಂದ ಸಂವಿಧಾನವನ್ನು ಬೇರ್ಪಡಿಸಲು ಬಯಸುತ್ತಿದೆ ಎಂದು ಶುಕ್ರವಾರ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದು, ವಿಶ್ವದ ಯಾವುದೇ ಶಕ್ತಿಗೆ ಅಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟುತ್ತಿದೆ, ಆದ್ದರಿಂದ ಜನರು ಒಗ್ಗಟ್ಟಾಗಿ ಇರಬೇಕೆಂದು ಎಚ್ಚರಿಸಿದ್ದಾರೆ.
ನವೆಂಬರ್ 20 ರ ವಿಧಾನಸಭಾ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ನಡೆಸಿದ ತನ್ನ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದಲಿತರು ಮತ್ತು ಆದಿವಾಸಿಗಳನ್ನು ಪ್ರಚೋದಿಸಲು ಇಂಡಿಯಾ ಒಕ್ಕೂಟವು ಖಾಲಿ ಪುಸ್ತಕಗಳನ್ನು ಸಂವಿಧಾನ ಎಂದು ತೋರ್ಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಕಾರ್ಯಸೂಚಿಯನ್ನು ಪ್ರೋತ್ಸಾಹಿಸಬಾರದು ಮತ್ತು ಪ್ರತ್ಯೇಕತಾವಾದಿಗಳ ಭಾಷೆಯಲ್ಲಿ ಮಾತನಾಡಬಾರದು ಎಂದು ಪ್ರಧಾನಿ ಹೇಳಿದ್ದಾರೆ. ಜನರ ಆಶೀರ್ವಾದ ಇರುವವರೆಗೂ ಈ ಕಾರ್ಯಸೂಚಿ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ 370ನೇ ವಿಧಿಯನ್ನು ವಾಪಸ್ ತರುವ ಕುರಿತು ನಿರ್ಣಯ ಮಂಡಿಸಿರುವ ಬಗ್ಗೆ ಮತ್ತು ಬಿಜೆಪಿ ಶಾಸಕರು ಪ್ರತಿಭಟಿಸಿದಾಗ ಅವರನ್ನು ಹೊರಹಾಕಿರುವ ಬಗ್ಗೆ ನೀವು ನೋಡಿದ್ದೀರಿ. ಇದನ್ನು ದೇಶ ಮತ್ತು ಮಹಾರಾಷ್ಟ್ರ ಅರ್ಥಮಾಡಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ. ಜಾತಿ ಮತ್ತು ಸಮುದಾಯಗಳನ್ನು ವಿಭಜಿಸುವ ಅಪಾಯಕಾರಿ ಆಟವನ್ನು ಕಾಂಗ್ರೆಸ್ ಆಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಿಶ್ವದ ಯಾವುದೇ ಶಕ್ತಿಗೆ
ಎಸ್‌ಟಿ (ಪರಿಶಿಷ್ಟ ಪಂಗಡಗಳು), ಎಸ್‌ಸಿ (ಪರಿಶಿಷ್ಟ ಜಾತಿಗಳು) ಮತ್ತು ಒಬಿಸಿಗಳು (ಇತರ ಹಿಂದುಳಿದ ವರ್ಗಗಳು) ಒಗ್ಗಟ್ಟಾಗಿದ್ದರೆ ಕಾಂಗ್ರೆಸ್ ರಾಜಕೀಯ ಕೊನೆಗೊಳ್ಳುತ್ತದೆ. ಕಾಂಗ್ರೆಸ್ ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿಕಟ್ಟಲು ಮತ್ತು ಎಸ್‌ಸಿ, ST ಮತ್ತು OBC ಗಳ ಒಗ್ಗಟ್ಟನ್ನು ದುರ್ಬಲಗೊಳಿಸಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
“ನೆಹರೂ ಕಾಲದಿಂದಲೂ ಕಾಂಗ್ರೆಸ್ ಮತ್ತು ಅವರ ಕುಟುಂಬ ಮೀಸಲಾತಿಯನ್ನು ವಿರೋಧಿಸಿತು. ಈಗ ಅವರ ನಾಲ್ಕನೇ ತಲೆಮಾರಿನ ‘ಯುವರಾಜ’ ಜಾತಿ ವಿಭಜನೆಗಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ. ಭಾರತ ವಿಭಜನೆಗೆ ಕಾರಣವಾದ ಧರ್ಮದ ಮೇಲೆ ಕಾಂಗ್ರೆಸ್ ರಾಜಕೀಯ ಮಾಡಿದೆ ಮತ್ತು ಈಗ ಪಕ್ಷವು ಜಾತಿ ರಾಜಕಾರಣದಲ್ಲಿ ತೊಡಗಿದೆ” ಎಂದು ಮೋದಿ ಆರೋಪಿಸಿದರು.
ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಚಕ್ರಗಳು ಮತ್ತು ಬ್ರೇಕ್‌ಗಳಿಲ್ಲದ ವಾಹನದಂತಾಗಿದೆ. ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳಲು ಅಲ್ಲಿ ಜಗಳ ನಡೆಯುತ್ತಿದೆ ಎಂದು ಮೋದಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ‘ಪುರುಷರು ಮಹಿಳೆಯರ ಬಟ್ಟೆ ಹೊಲಿಯುವುದು, ಕೂದಲು ಕತ್ತರಿಸುವುದು ಮಾಡಬಾರದು..’; ಯುಪಿ ಮಹಿಳಾ ಆಯೋಗದಿಂದ ವಿಚಿತ್ರ ಪ್ರಸ್ತಾಪ


