ಭೂ ಮ್ಯುಟೇಶನ್ ದಾಖಲೆಗಳನ್ನು ಬದಲಾಯಿಸುವ ಮತ್ತು ವಕ್ಫ್ ಕಾಯ್ದೆಯಡಿ ರೈತರಿಗೆ ಒತ್ತುವರಿ ತೆರವು ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ. ಕರ್ನಾಟಕ ವಕ್ಫ್ ಮಂಡಳಿಯ ಪರವಾಗಿ ಕೆಲವು ಭೂ ಆಸ್ತಿಗಳ ಬಗ್ಗೆ ಮಾಡಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಭೆ ನಡೆಸಿದ್ದರು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಜಿಲ್ಲೆಗಳ ಎಲ್ಲಾ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ನೆನಪಿಸಿದ್ದಾರೆ. ವಕ್ಫ್ ಒತ್ತುವರಿ
ಮ್ಯುಟೇಶನ್ ದಾಖಲೆಗಳನ್ನು ಬದಲಾಯಿಸಲು ಯಾವುದೇ ಸರ್ಕಾರಿ ಕಚೇರಿ ಅಥವಾ ಪ್ರಾಧಿಕಾರವು ಈ ಹಿಂದೆ ನೀಡಿದ್ದ ಎಲ್ಲಾ ನಿರ್ದೇಶನಗಳನ್ನು ಹಿಂಪಡೆಯಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಹಿಂದೆ ನೀಡಲಾಗಿದ್ದ ಎಲ್ಲಾ ನೋಟಿಸ್‌ಗಳನ್ನು ಸಹ ಹಿಂಪಡೆಯಲಾಗಿದ್ದು, ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ರೈತರು ಮತ್ತು ಭೂ ಮಾಲೀಕರಿಗೆ ನವೆಂಬರ್ 7 ರಂದು ಸಲ್ಲಿಸಿದ ಹಿಂದಿನ ಪತ್ರಗಳು ಮತ್ತು ಇತ್ತೀಚಿನ ಜ್ಞಾಪನೆಗಳನ್ನು ಹಿಂಪಡೆಯಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಹೊರತಾಗಿಯೂ ಜ್ಞಾಪನೆ-2 ನೋಟಿಸ್ ನೀಡಿದ ಅಧಿಕಾರಿಗಳು ಸೂಕ್ತ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಕಟಾರಿಯಾ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 13 ರಂದು ಮೂರು ನಿರ್ಣಾಯಕ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನಲೆ ರಾಜ್ಯದಲ್ಲಿ ಹೊಸ ನಿರ್ದೇಶನವನ್ನು ನೀಡಲಾಗಿದೆ. ಉತ್ತರ ಕರ್ನಾಟಕದ ವಿಜಯಪುರದ ಹೊನವಾಡ ಗ್ರಾಮದ ಕೆಲವು ರೈತರು ವಕ್ಫ್ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅದನ್ನು ತೆರವು ಮಾಡಬೇಕು ಎಂದು ಕಳೆದ ತಿಂಗಳು ವಕ್ಫ್ ಮಂಡಳಿಯು ತೆರವು ನೋಟಿಸ್ ನೀಡಿತ್ತು. ಇದರ ನಂತರ ರಾಜ್ಯದಾದ್ಯಂತ ವಿವಾದ ಸೃಷ್ಟಿಯಾಗಿದ್ದು, ಇದೇ ರೀತಿ ದೂರುಗಳು ರಾಜ್ಯದ ಇತರ ಕೆಲವು ಭಾಗಗಳಿಂದ ಬಂದಿದ್ದವು.
ಅಕ್ಟೋಬರ್ 25 ರಂದು, ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ರಾಜ್ಯ ವಕ್ಫ್ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ವಕ್ಫ್ ಬೋರ್ಡ್ ಪರವಾಗಿ ಜಮೀನುಗಳನ್ನು 15 ದಿನಗಳಲ್ಲಿ ನೋಂದಾಯಿಸಲು ಸೂಚಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ತೀವ್ರ ವಿವಾದವಾಗಿ ಮಾರ್ಪಾಡಾಗಿತ್ತು.
ಸೂರ್ಯ ಅವರ ಕೋರಿಕೆಯ ಮೇರೆಗೆ, ವಕ್ಫ್ (ತಿದ್ದುಪಡಿ) ಮಸೂದೆಯ ಸಂಸತ್ತಿನ ಜಂಟಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಹುಬ್ಬಳ್ಳಿ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂದು ಆರೋಪಿಸಿರುವ ರೈತರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ‘ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ..’; ಬಿಜೆಪಿಯ ‘ಬಾಟಂಗೆ ತೋ ಕಟೆಂಗೆ’ ಘೋಷಣೆ ತಿರಸ್ಕರಿಸಿದ ಅಜಿತ್ ಪವಾರ್
‘ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ..’; ಬಿಜೆಪಿಯ ‘ಬಾಟಂಗೆ ತೋ ಕಟೆಂಗೆ’ ಘೋಷಣೆ ತಿರಸ್ಕರಿಸಿದ ಅಜಿತ್ ಪವಾರ್


