ಜನರಿಗೆ ವಾಟ್ಸಪ್ ಮೂಲಕ ಕನಿಷ್ಠ 100 ಸರ್ಕಾರಿ ಸೇವೆಗಳನ್ನು ನೀಡಲು ಆಂಧ್ರಪ್ರದೇಶ ಸರ್ಕಾರವು ಮುಂದಾಗಿದೆ. ನವೆಂಬರ್ 8ರ ಶುಕ್ರವಾರದಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ವಾಟ್ಸಾಪ್ ಮೂಲಕ ನಾಗರಿಕರಿಗೆ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಲು ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಾಟ್ಸಾಪ್ ಮೂಲಕ ಕನಿಷ್ಠ 100 ವಿವಿಧ ಸೇವೆಗಳನ್ನು ಜನರಿಗೆ ತಲುಪಿಸಲು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ರಿಯಲ್ ಟೈಮ್ ಗವರ್ನೆನ್ಸ್ (ಆರ್‌ಟಿಜಿ) ಸಚಿವ ನಾರಾ ಲೋಕೇಶ್ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. “ಇನ್ನೂ 90 ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳನ್ನು ಕ್ಯೂಆರ್ ಕೋಡ್ ಮೂಲಕ ಪಡೆಯುವಂತೆ ನೋಡಿಕೊಳ್ಳಲು ಕ್ರಮಗಳು ಸಹ ನಡೆಯುತ್ತಿವೆ” ಎಂದು ಅವರು ತಿಳಿಸಿದ್ದಾರೆ. ಆಂಧ್ರಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಜಿಟಲ್ ಸಹಿಯೊಂದಿಗೆ ಭೌತಿಕ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಮಾರ್ಗಸೂಚಿಗಳಿದ್ದರೂ, ಹೆಚ್ಚಿನ ಅಧಿಕಾರಿಗಳಿಗೆ ಈ ನಿಯಮದ ಬಗ್ಗೆ ತಿಳಿದಿಲ್ಲ, ಹೀಗಾಗಿ ವಿದ್ಯಾರ್ಥಿಗಳು ಭೌತಿಕ ಪ್ರಮಾಣಪತ್ರಗಳನ್ನು ಸಲ್ಲಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಕೂಡಲೇ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ 40 ಲಕ್ಷ ಜನರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ನಾಯ್ಡು ಅವರಿಗೆ ತಿಳಿಸಿದಾಗ, ತಕ್ಷಣವೇ ಡೇಟಾವನ್ನು ಸಂಗ್ರಹಿಸಿ ಅದನ್ನು ಪರಸ್ಪರ ಜೋಡಿಸಲು ಕ್ರಮಕೈಗೊಳ್ಳುವಂತೆ ಅವರು ಅವರಿಗೆ ಸೂಚಿಸಿದ್ದಾರೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮೂಲಕ ರಾಜ್ಯದ ಎಲ್ಲಾ ಮನೆಗಳನ್ನು ಇಂಟರ್‌ಲಿಂಕ್ ಮಾಡಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಡೀ ದತ್ತಾಂಶವನ್ನು ಒಂದಕ್ಕೊಂದು ಜೋಡಿಸುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಮೂಡುತ್ತದೆ, ಹೀಗಾಗಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಸಿಎಂ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಅಧಿಕಾರಿಗಳು ದತ್ತಾಂಶ ಏಕೀಕರಣದ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಆಧಾರ್ ಪಡೆಯುವಂತೆ ನೋಡಿಕೊಳ್ಳಬೇಕು ಮತ್ತು ನವಜಾತ ಶಿಶುವಿಗೂ ಆಧಾರ್ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರವು 40 ವಿವಿಧ ಇಲಾಖೆಗಳನ್ನು ಹೊಂದಿದ್ದು, ಸರ್ಕಾರದ 128 ವಿವಿಧ ವಿಭಾಗಗಳಲ್ಲಿ 178 ಡೇಟಾ ಕ್ಷೇತ್ರಗಳಿಂದ 500 ಟಿಬಿ ಡೇಟಾ ಲಭ್ಯವಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ರಿಯಲ್ ಟೈಮ್ ಗವರ್ನೆನ್ಸ್ ಮುಖ್ಯ ದತ್ತಾಂಶ ಸಂಪನ್ಮೂಲವಾಗಬೇಕು ಎಂದು ಒತ್ತಿ ಹೇಳಿದ ಅವರು, ಎಲ್ಲಾ ಇಲಾಖೆಗಳ ಡೇಟಾವನ್ನು ಪರಸ್ಪರ ಲಿಂಕ್ ಮಾಡಲು ಮತ್ತು ಈ ಡೇಟಾದ ಮೂಲಕ ಸಾಮಾನ್ಯ ವೇದಿಕೆಗೆ ತರಬೇಕು. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಎಲ್ಲಾ ಯೋಜನೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ವಿಶ್ಲೇಷಿಸಬೇಕು ಎಂದು ಅಧಿಕಾರಿಗಳಿಗೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಮುದ್ರ ಗಡಿ ದಾಟಿದ ಆರೋಪ; ಮತ್ತೆ 23 ತಮಿಳು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಸಮುದ್ರ ಗಡಿ ದಾಟಿದ ಆರೋಪ; ಮತ್ತೆ 23 ತಮಿಳು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ


