ಉಕ್ರೇನ್ ಭಾನುವಾರ ಕನಿಷ್ಠ 34 ಡ್ರೋನ್‌ಗಳೊಂದಿಗೆ ಮಾಸ್ಕೋ ಮೇಲೆ ದಾಳಿ ಮಾಡಿತು, ಇದು 2022 ರಲ್ಲಿ ಯುದ್ಧದ ಪ್ರಾರಂಭದ ನಂತರ ರಷ್ಯಾದ ರಾಜಧಾನಿಯ ಮೇಲೆ ನಡೆದ ಅತಿದೊಡ್ಡ ‘ಡ್ರೋನ್ ಸ್ಟ್ರೈಕ್’ ಆಗಿದೆ. ಈ ದಾಳಿಯು, ಮಾಸ್ಕೋ ನಗರದ ಮೂರು ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಕಾರಣವಾಯಿತು. ಕನಿಷ್ಠ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ವಾಯು ರಕ್ಷಣಾ ಇಲಾಖೆಯು ಭಾನುವಾರ ಮೂರು ಗಂಟೆಗಳಲ್ಲಿ ಪಶ್ಚಿಮ ರಷ್ಯಾದ ಇತರ ಪ್ರದೇಶಗಳ ಮೇಲೆ ಮತ್ತೊಂದು 36 ಡ್ರೋನ್‌ಗಳನ್ನು ನಾಶಪಡಿಸಿದೆ ಎಂದು ತಿಳಿಸಿದೆ.
“ರಷ್ಯಾದ ಒಕ್ಕೂಟದ ಪ್ರದೇಶದ ಮೇಲೆ ವಿಮಾನ ಮಾದರಿಯ ಡ್ರೋನ್‌ಗಳನ್ನು ಬಳಸಿಕೊಂಡು ಭಯೋತ್ಪಾದಕ ದಾಳಿ ನಡೆಸಲು ಕೈವ್ ಆಡಳಿತದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ” ಎಂದು ಸಚಿವಾಲಯ ಹೇಳಿದೆ.
ಡೊಮೊಡೆಡೊವೊ, ಶೆರೆಮೆಟಿಯೆವೊ ಮತ್ತು ಝುಕೊವ್ಸ್ಕಿ ವಿಮಾನ ನಿಲ್ದಾಣಗಳು ಕನಿಷ್ಠ 36 ವಿಮಾನಗಳ ಮಾರ್ಗ ಬದಲಾಯಿಸಲಾಯಿತು. ಆದರೆ, ನಂತರದ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ ಎಂದು ರಷ್ಯಾದ ಫೆಡರಲ್ ಏರ್ ಟ್ರಾನ್ಸ್‌ಪೋರ್ಟ್ ಏಜೆನ್ಸಿ ಹೇಳಿದೆ. ಮಾಸ್ಕೋ ಪ್ರದೇಶದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಕನಿಷ್ಠ 21 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇಸ್ತಾನ್‌ಬುಲ್ ಜೊತೆಗೆ ಯುರೋಪ್‌ನ ಅತಿದೊಡ್ಡ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಒಂದಾಗಿದೆ.
ಅದರ ಭಾಗವಾಗಿ, ರಷ್ಯಾ ರಾತ್ರೋರಾತ್ರಿ ದಾಖಲೆಯ 145 ಡ್ರೋನ್‌ಗಳನ್ನು ಉಡಾವಣೆ ಮಾಡಿದೆ ಎಂದು ಉಕ್ರೇನ್ ಹೇಳಿದೆ. ಅದರಲ್ಲಿ 62 ವಿಮಾನಗಳನ್ನು ತನ್ನ ವಾಯು ರಕ್ಷಣಾ ಪಡೆಗಳು ಉರುಳಿಸಿದವು ಎಂದು ಕೈವ್ ಹೇಳಿದರು. ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಶಸ್ತ್ರಾಗಾರದ ಮೇಲೆ ದಾಳಿ ಮಾಡಿದೆ ಎಂದು ಉಕ್ರೇನ್ ಹೇಳಿದೆ, ಈ ಪ್ರದೇಶದಲ್ಲಿ 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿ ಮಾಡಿದೆ.
ರಷ್ಯಾದ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಪೋಸ್ಟ್ ಮಾಡಲಾದ ಪರಿಶೀಲಿಸದ ವೀಡಿಯೊವು ಸ್ಕೈಲೈನ್‌ನಾದ್ಯಂತ ಡ್ರೋನ್‌ಗಳು ಝೇಂಕರಿಸುತ್ತಿರುವುದನ್ನು ತೋರಿಸಿದೆ.
ಇದನ್ನೂ ಓದಿ; ಶೇಖ್ ಹಸೀನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ ಬಾಂಗ್ಲಾದೇಶ ಸರ್ಕಾರ


