ನನ್ನ ಕೈಯ್ಯಲ್ಲಿ ಇರುವ ಸಂವಿಧಾನದ ಪ್ರತಿ ಪ್ರಧಾನಿ ಮೋದಿಗೆ, ಖಾಲಿಯಾಗಿರುವ ‘ಕೆಂಪು ಪುಸ್ತಕ’ವಾಗಿ ಕಾಣುವುದು ಏಕೆಂದರೆ ಅವರು ಎಂದಿಗೂ ಅದನ್ನು ಓದದ ಕಾರಣಕ್ಕೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಪ್ರತಿಪಾದಿಸಿದ್ದಾರೆ. ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನವು ಭಾರತದ ಆತ್ಮವನ್ನು ಒಳಗೊಂಡಿದೆ. ಅದು ರಾಷ್ಟ್ರೀಯ ಐಕಾನ್‌ಗಳಾದ ಬಿರ್ಸಾ ಮುಂಡಾ, ಡಾ ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಸಂವಿಧಾನ ಓದದ
ರ‍್ಯಾಲಿಯಲ್ಲಿ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ ಅವರು, “ಪುಸ್ತಕದ ಕೆಂಪು ಬಣ್ಣದ ಬಗ್ಗೆ ಬಿಜೆಪಿಗೆ ಆಕ್ಷೇಪವಿದೆ, ಆದರೆ ಇದರ ಬಣ್ಣ ಕೆಂಪು ಅಥವಾ ನೀಲಿ ಎಂಬ ವಿಚಾರವಾಗಿ ನಮಗೆ ಯಾವುದೆ ತಕರಾರಿಲ್ಲ. ಅದನ್ನು (ಸಂವಿಧಾನ) ಸಂರಕ್ಷಿಸಲು ನಾವು ಬದ್ಧರಾಗಿದ್ದು, ಅನುಸರಿಸಲು ಸಿದ್ಧರಿದ್ದೇವೆ. ನಾನು ಹಿಡಿದಿರುವ ಈ ಸಂವಿಧಾನವು (ಪುಸ್ತಕ) ಖಾಲಿಯಾಗಿದೆ ಎಂದು ಮೋದಿ ಅವರು ಭಾವಿಸುತ್ತಾರೆ, ಏಕೆಂದರೆ ಅವರು ಅದನ್ನು ತಮ್ಮ ಜೀವಮಾನದಲ್ಲಿ ಓದಲಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಆದರೆ ಮೋದಿ ಅವರೆ, ಈ ಪುಸ್ತಕವು ಖಾಲಿಯಾಗಿಲ್ಲ. ಇದು ಭಾರತದ ಆತ್ಮ ಮತ್ತು ಜ್ಞಾನವನ್ನು ಹೊಂದಿದೆ. ಇದು ಬಿರ್ಸಾ ಮುಂಡಾ, ಬುದ್ಧ, ಮಹಾತ್ಮ ಫುಲೆ, ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿಯವರಂತಹ ರಾಷ್ಟ್ರೀಯ ಐಕಾನ್‌ಗಳು ರೂಪಿಸಿದ ತತ್ವಗಳನ್ನು ಒಳಗೊಂಡಿದೆ. ನೀವು ಪುಸ್ತಕವನ್ನು ಖಾಲಿ ಎಂದು ಕರೆದರೆ, ಈ ಎಲ್ಲಾ ಐಕಾನ್‌ಗಲನ್ನು ನೀವು ಅವಮಾನಿಸಿದಿರಿ ಎಂದರ್ಥ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗದವರು ನಿರ್ಧಾರ ಕೈಗೊಳ್ಳುವಲ್ಲಿ ಪ್ರಾತಿನಿಧ್ಯವನ್ನು ಪಡೆಯಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ಸಂವಿಧಾನ ಓದದ
ನವೆಂಬರ್ 20 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಪ್ರದರ್ಶಿಸಿದ “ಕೆಂಪು ಪುಸ್ತಕ” ವನ್ನು “ನಗರ ನಕ್ಸಲಿಸಂ” ಗೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಾಯಕರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಷ್ಟ್ರೀಯ ಐಕಾನ್‌ಗಳನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಆದಿವಾಸಿಗಳ ಬದಲಿಗೆ ವನವಾಸಿ ಎಂದು ಉಲ್ಲೇಖಿಸುವ ಮೂಲಕ ಆದಿವಾಸಿಗಳನ್ನು ಅವಮಾನಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. “ಆದಿವಾಸಿಗಳು ದೇಶದ ಮೊದಲ ಮಾಲೀಕರು. ಜಲ, ನೆಲ ಮತ್ತು ಕಾಡಿನ ಮೇಲೆ ಅವರಿಗೆ ಮೊದಲ ಹಕ್ಕಿದೆ. ಆದರೆ ಬಿಜೆಪಿಯು ಆದಿವಾಸಿಗಳು ಯಾವುದೇ ಹಕ್ಕುಗಳಿಲ್ಲದೆ ಕಾಡಿನಲ್ಲಿ ಉಳಿಯಬೇಕೆಂದು ಬಯಸುತ್ತದೆ. ಬಿರ್ಸಾ ಮುಂಡಾ ಇದಕ್ಕಾಗಿ ಹೋರಾಡಿ ತನ್ನ ಪ್ರಾಣ ತ್ಯಾಗ ಮಾಡಿದರು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರಣಾಳಿಕೆಯನ್ನು ಎತ್ತಿ ಹಿಡಿದ ಗಾಂಧಿ, ಮಹಿಳೆಯರು, ರೈತರು ಮತ್ತು ಯುವಕರಿಗೆ ಮಾಸಿಕ 3,000 ಸಹಾಯ ಮತ್ತು ಉಚಿತ ಬಸ್ ಪ್ರಯಾಣ, 3 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮತ್ತು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 4,000 ರೂ. ನೀಡುತ್ತದೆ ಎಂದು ಹೇಳಿದ್ದಾರೆ.
ಜಾತಿ ಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಮಹಾರಾಷ್ಟ್ರದಲ್ಲಿ ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗಗಳ ಸಂಖ್ಯೆ ಮತ್ತು ಸಂಪನ್ಮೂಲಗಳಲ್ಲಿ ಅವರ ಪಾಲನ್ನು ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ 8%ದಷ್ಟು ಬುಡಕಟ್ಟು ಸಮುದಾಯದ ಜನರು ಇದ್ದರೂ, ದೇಶದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರ ಪಾಲು ಕೇವಲ 1% ಮಾತ್ರ ಇದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: COP29 Azerbaijan : ಹವಾಮಾನ ಶೃಂಗಸಭೆಯ ಮೇಲೆ ಟ್ರಂಪ್ ಮರು ಆಯ್ಕೆ ಕಾರ್ಮೋಡ
COP29 Azerbaijan : ಹವಾಮಾನ ಶೃಂಗಸಭೆಯ ಮೇಲೆ ಟ್ರಂಪ್ ಮರು ಆಯ್ಕೆ ಕಾರ್ಮೋಡ


