ಮಣಿಪುರದಲ್ಲಿ ಆರಂಭದಿಂದಲೂ ಹದಗೆಟ್ಟ ಪರಿಸ್ಥಿತಿಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೇ ಕಾರಣ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸೋಮವಾರ ಆರೋಪಿಸಿದೆ. ರಾಜ್ಯದ ಪರಿಸ್ಥಿತಿ ಹದಗೆಟ್ಟ ಹೊರತಾಗಿಯೂ, ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಅವರನ್ನು ತೆಗೆದುಹಾಕಲು ನಿರಾಕರಿಸಿ, ಅವರನ್ನೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು ಎಂದು ಪಕ್ಷದ ಪಾಲಿಟ್ ಬ್ಯೂರೋ ಹೊರಡಿಸಿದ ಹೇಳಿಕೆ ಹೇಳಿದೆ. ಮಣಿಪುರ
ಪರಿಸ್ಥಿತಿಯನ್ನು ‘ಗಂಭೀರ’ ಎಂದು ಬಣ್ಣಿಸಿರುವ ಸಿಪಿಐ(ಎಂ), ರಾಜ್ಯ ಸರ್ಕಾರ ಮತ್ತು ಆಡಳಿತ ಯಂತ್ರ ನಡೆಯದ ಪರಿಸ್ಥಿತಿ ಈಗ ಉದ್ಭವಿಸಿದೆ ಎಂದು ಹೇಳಿದೆ. “ಮಣಿಪುರದಲ್ಲಿ ಜನಾಂಗೀಯ ಹತ್ಯೆಗಳು ಮತ್ತು ಪ್ರತಿ-ಹತ್ಯೆಗಳಿಂದಾಗಿ ಹಿಂಸಾಚಾರ ತೀವ್ರಗೊಂಡಿದ್ದು, ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ 7 ರಿಂದ ವಿವಿಧ ಘಟನೆಗಳಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಈ ಹಿಂದೆ ಅಪಹರಣಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳ ಐದು ಮೃತದೇಹಗಳು ಪತ್ತೆಯಾಗಿವೆ. ಒಂದು ಭೀಕರ ಘಟನೆಯಲ್ಲಿ ಕಣಿವೆಯಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ” ಎಂದು ಪಕ್ಷವು ಹೇಳಿದೆ. ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇತ್ತೀಚೆಗೆ ವಹಿಸಿಕೊಂಡಿದೆ. ಮೂರು ಪ್ರಕರಣಗಳಿಗೆ ಸಂಬಂಧಿಸಿದ ಹಿಂಸಾತ್ಮಕ ಘಟನೆಯಿಂದ ರಾಜ್ಯದಲ್ಲಿ ಸಾಮಾಜಿಕ ಅಶಾಂತಿ ಉಂಟಾಗಿದೆ. ಈ ನಡುವೆ ಗೃಹ ವ್ಯವಹಾರಗಳ ಸಚಿವಾಲಯವು ನವೆಂಬರ್ 16 ರಂದು,”ಪರಿಣಾಮಕಾರಿ ತನಿಖೆಗಾಗಿ ಪ್ರಮುಖ ಪ್ರಕರಣಗಳನ್ನು NIA ಗೆ ಹಸ್ತಾಂತರಿಸಲಾಗಿದೆ” ಎಂದು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರವು ತಕ್ಷಣದ ಮಧ್ಯಸ್ಥಿಕೆ ವಹಿಸಬೇಕು ಎಂದು ಸಿಪಿಐ(ಎಂ) ಕೋರಿದೆ. “ಹಿಂಸಾಚಾರವನ್ನು ತಕ್ಷಣವೇ ಕೊನೆಗಾಣಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಇದು ಸಮಯವಾಗಿದೆ. ಶಾಂತಿಯನ್ನು ಮರುಸ್ಥಾಪಿಸುವ ಮತ್ತು ರಾಜ್ಯದ ಎಲ್ಲಾ ಜನಾಂಗೀಯ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ರಾಜಕೀಯ ಇತ್ಯರ್ಥಕ್ಕಾಗಿ ಗಂಭೀರವಾದ ಕೆಲಸವನ್ನು ಪ್ರಾರಂಭಿಸಬೇಕಾಗಿದೆ” ಎಂದು ಪಕ್ಷವು ಹೇಳಿದೆ.
ಇದನ್ನೂ ಓದಿ: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ
ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ


